ಹಳಿಯಾಳ :- ಕಳೆದ 10 ದಿನಗಳಲ್ಲಿ ಹಳಿಯಾಳದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ_141_ಕ್ಕೆ_ತಲುಪಿದ್ದರೇ ಇಬ್ಬರು ವೃದ್ದರು_ಕೊರೊನಾಕ್ಕೆ_ಬಲಿಯಾಗಿದ್ದಾರೆ. ಹಳಿಯಾಳದ ಬಾಣಸಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರಯಲಾಗಿರುವ ಕೊವಿಡ್ ಕೇರ್ ಸೆಂಟರ್ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಯಾತ್ರಿ_ನಿವಾಸದಲ್ಲಿರುವ ಕೊವಿಡ್ ಕೇರ್ ಸೆಂಟರ್ ಹಿಗೆ ಎರಡು ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊಂಕಿತರಲ್ಲಿ ಶನಿವಾರ ಒಂದೇ ದಿನ 12 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಹಳಿಯಾಳದ 141 ಸೊಂಕಿತರ ಪೈಕಿ 40 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಪಟ್ಟಣದ ಜವಾಹರಗಲ್ಲಿ( ಗೌರಿಗುಡಿ ರಸ್ತೆ) ನಿವಾಸಿ 72ವರ್ಷದ_ವೃದ್ದ ಹಾಗೂ ಬಸವನಗರದ_74ವರ್ಷದ_ವೃದ್ದೆ ಹೀಗೆ ಇಬ್ಬರು ಕೊವಿಡ್ ಗೆ ಸಾವನ್ನಪ್ಪಿದ್ದಾರೆ. ಸದ್ಯ ಹಳಿಯಾಳದಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ 95 ಕ್ಕೆ ಇಳಿಕೆಯಾಗಿದೆ.
For news and ads :- 9740107577
Leave a Comment