ಹಳಿಯಾಳ:- ಕೊರೊನಾ ಸೊಂಕಿಗೆ ತುತ್ತಾಗಿರುವ ಹಳಿಯಾಳದ ಕೊರೊನಾ ಸೇನಾನಿಗಳ ಕುಟುಂಬದ 5 ಜನರಲ್ಲಿ, ಬೆಂಗಳೂರಿನಿ0ದ ವಾಪಸ್ಸಾಗಿದ್ದ 4 ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ ಒಂದು ಗಂಡು ಮಗುವಿನಲ್ಲಿ ಹೀಗೆ ಮಂಗಳವಾರ 10 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.
ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ 46 ಜನರಲ್ಲಿ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ 10 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ ಕೊರೊನಾ ಸೊಂಕಿತರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ.
ಜೊಗನಕೊಪ್ಪ ಗ್ರಾಮದ ಸೊಂಕಿತನ ಸಂಪರ್ಕಕ್ಕೆ ಬಂದ ಬಾಲಕನಲ್ಲಿ, ಬೆಂಗಳೂರಿನಿ0ದ ಬಂದಿದ್ದ ನಾಲ್ವರೂ ಯುವಕರಲ್ಲಿ, ಕೊರೊನಾ ವಾರಿರ್ಸ್ಗಳಾದ ಹಳಿಯಾಳ ಪೋಲಿಸ್ ಸಿಬ್ಬಂದಿಯ ಕುಟುಂಬದ ಇಬ್ಬರಿಗೆ, ಆರೋಗ್ಯ ಇಲಾಖೆಯ ಇತ್ತೀಚೆಗೆ ಸೊಂಕಿತನಾಗಿದ್ದ ಸಿಬ್ಬಂದಿಯ ಕುಟುಂಬದ ಮೂವರಲ್ಲಿ ಹೀಗೆ ಮಂಗಳವಾರ ೧೦ ಜನರಲ್ಲಿ ಸೊಂಕು ಪತ್ತೆಯಾಗಿದೆ.

ಹಳಿಯಾಳದ ಸೊಂಕಿತ ಪೋಲಿಸ್ ಸಿಬ್ಬಂದಿಯ ಸಂಪರ್ಕಕ್ಕೆ ಬಂದಿದ್ದ ಕುಟುಂಬದ ಹೆಂಡತಿ-೩೭ವರ್ಷ, ಮಗ ೭ವರ್ಷ ಹಾಗೂ ಆರೋಗ್ಯ ಇಲಾಖೆಯ ಸೊಂಕಿತ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಹೆಂಡತಿ-೪೧, ಮಗಳು-೧೭ ವರ್ಷ ಮತ್ತು ಮಗ-೧೪ವರ್ಷ, ಜೊಗನಕೊಪ್ಪ ಗ್ರಾಮದಲ್ಲಿ ಸೊಂಕಿತನ ಸಂಪರ್ಕಕ್ಕೆ ಬಂದಿದ್ದರಿAದ ೯ ವರ್ಷದ ಬಾಲಕನಲ್ಲಿ ಜೊತೆಗೆ ಬೆಂಗಳೂರಿನಿAದ ಹಳಿಯಾಳಕ್ಕೆ ಹಿಂದಿರುಗಿರುವ ಚಿಬ್ಬಲಗೇರಿ ಗ್ರಾಮದ ಯುವಕ-೨೪ವರ್ಷ, ನಂದಿಗದ್ದಾ ಗ್ರಾಮದ ಯುವಕ-೨೧ವರ್ಷ, ಹಳಿಯಾಳದ ೧೯ ವರ್ಷದ ಯುವಕನಲ್ಲಿ ಮತ್ತು ಇವರ ಜೊತೆಗೆ ಬಂದಿದ್ದ ಕಿತ್ತೂರಿನ ೨೦ ವರ್ಷದ ಯುವಕನಲ್ಲಿ ಸೊಂಕು ದೃಢಪಟ್ಟಿದೆ.
ಬೆಂಗಳೂರಿನಿAದ ಬಂದಿದ್ದ ೧೦ ಜನರ ಪೈಕಿ ನಾಲ್ವರಲ್ಲಿ ಸೊಂಕು ದೃಢಪಟ್ಟಿದ್ದು ಇವರೊಂದಿಗೆ ಬಂದಿದ್ದ ಇನ್ನೂ ಮೂವರಲ್ಲಿ ಸೊಂಕಿನ ಲಕ್ಷಣಗಳು ಕಂಡು ಬಂದಿದ್ದರಿAದ ಮುಂಜಾಗೃತಾ ಕ್ರಮವಾಗಿ ಇವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಮಂಗಳವಾರ ಐವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಇವರೆಲ್ಲರನ್ನು ಹಳಿಯಾಳದ ಬಾಣಸಗೇರಿಯಲ್ಲಿರುವ ಕೊವಿಡ್ ಕೇರ್ ಸೆಂಟರ್ಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

Leave a Comment