• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸುದ್ದಿಗಾಗಿ ಮೃತ ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿಸಿದ್ದ ಯುಟ್ಯೂಬ್ ಚಾನೆಲ್‌ ವರದಿಗಾರ ಬಂಧನ !ಬಾಗೇಪಲ್ಲಿ ನ್ಯೂಸ್​” ನಡೆಸುತ್ತಿದ್ದ ಖದೀಮ‌‌ ನರೇಂದ್ರಅಂದರ್.

July 29, 2020 by Yogaraj SK Leave a Comment

116280866 1223295721358155 256196281217972062 n

ಚಿಕ್ಕಬಳ್ಳಾಪುರ: ‘ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ -ಹಾಡಹಗಲೇ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣ’ಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್​(ಸುದ್ದಿ)ಗಾಗಿ ಮನೆಗೆ_ಬೆಂಕಿ_ಹಚ್ಚುವಂತೆ ಪ್ರೇರೇಪಿಸಿದ್ದು_ಯೂಟ್ಯೂಬ್ ಚಾನಲ್​ವೊಂದರ ವರದಿಗಾರ ಎಂಬ ಆತಂಕಕಾರಿ_ಅಂಶ_ತನಿಖೆ_ವೇಳೆ ಬಯಲಾಗಿದೆ.

ಬಾಗೇಪಲ್ಲಿ ತಾಲೂಕು ಯಗವ_ಮದ್ದಲಖಾನೆಯಲ್ಲಿ ಹರೀಶ್ ಮತ್ತು ಸಿರೀಶಾ ಲವ್​ ಸ್ಟೋರಿ ದುರಂತ ಅಂತ್ಯ ಕಂಡಿದೆ. ಪ್ರಿಯಕರನ ಜತೆ ಮದುವೆ ಆಗಲು ಪಾಲಕರು ಒಪ್ಪುತ್ತಿಲ್ಲ ಎಂದು ಮನನೊಂದ ಸಿರೀಶಾ ಕಳೆದ ವರ್ಷ ಆತ್ಮಹತ್ಯೆಗೆ_ಶರಣಾಗಿದ್ದಳು. ಮಗಳ ಸಾವಿನ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದ ಆಕೆಯ ತಂದೆ ವೆಂಕಟೇಶ್​ ಕಳೆದ ಶುಕ್ರವಾರ (ಜು.25) ರಾತ್ರಿ ಹರೀಶ್​ನನ್ನು ಚಾಕುವಿನಿಂದ_ಇರಿದು ಕೊಂದಿದ್ದರು.

ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಸ್ಥರಿಗೆ ಮತ್ತಷ್ಟು ದ್ವೇಷದ ಕಿಡಿ ಹೊತ್ತಿಸಿದ್ದು, ಯೂಟ್ಯೂಬ್ ಚಾನಲ್​ವೊಂದರ ವರದಿಗಾರ ನರೇಂದ್ರ. ‘ಹೆಣ್ಣು ಮಕ್ಕಳು ಹೊಡೆದರೆ ಕೇಸ್​ ಆಗಲ್ಲ’ ಎಂದು ಅವರನ್ನು ಹುರಿದುಂಬಿಸಿದ ನರೇಂದ್ರ, ವೆಂಕಟೇಶ್​ ಮನೆಗೆ ಬೆಂಕಿ ಹಚ್ಚುವಂತೆ ಪ್ರೇರೇಪಿಸಿ ಹುಚ್ಚಾಟ ಮೆರೆದಿದ್ದಾನೆ. ಇದೆಲ್ಲವೂ ಆತ ಮಾಡಿದ್ದು ಸುದ್ದಿಗಾಗಿ_ಅಂತೆ!

ವರ್ಷದ ಹಿಂದೆ ಎರಡೂ ಕುಂಟುಂಬಗಳ ದ್ವೇಷಾಗ್ನಿ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯೂಟ್ಯೂಬ್ ಚಾನಲ್​ನ ವರದಿಗಾರನೊಬ್ಬ ಖಾಸಗಿ ಚಾನಲ್​ ಗೆ ಸುದ್ದಿ ಮಾಡುವುದಾಗಿ ಹೆಳುತ್ತಿದ್ದ ಜನರಿಗೆ ತಾನು ಸುದ್ದಿ ವಾಹಿನಿಯ ವರದಿಗಾನೆಂದು ಹೇಳುತ್ತಿದ್ದ ಎನ್ನಲಾಗಿದ್ದು ಸಿಕ್ಕ ಸಿಕ್ಕ ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಅಪಲೋಡ್ ಮಾಡುತ್ತಿದ್ದ ಎನ್ನಲಾಗಿದೆ.‌

116343375 1223295648024829 8789564083432610630 n

ಹರೀಶ್​ ಮತ್ತು ಸಿರೀಶಾ. ಮಧ್ಯದಲ್ಲಿರುವುದು ಸಿರೀಶಾಳ ಮನೆ ಬೆಂಕಿಗೆ ಆಹುತಿಯಾಗಿರುವ ಚಿತ್ರ.
ಹೆಸರಿನಲ್ಲಿ ಸುದ್ದಿ ಮಾಡುವುದಾಗಿ ಬಿಂಬಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾನೆ.
ಹರೀಶ್ ಕೊಲೆ ಆರೋಪದಡಿ ಸಿರೀಶಾಳ ತಂದೆ ವೆಂಕಟೇಶ್​ ಮತ್ತು ಸಂಬಂಧಿ ಗಣೇಶ್ ಇಬ್ಬರನ್ನೂ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಗನ ಸಾವಿಂದ ಕಂಗೆಟ್ಟ ಹರೀಶ್​ ಸಂಬಂಧಿಕರು ಶನಿವಾರ(ಜು.26) ವೆಂಕಟೇಶ್ ಮನೆ ಮುಂದೆ ಗಲಾಟೆ ಮಾಡಿ ಬಾಗಿಲು ಹಾಗೂ ಕಿಟಕಿ ಗಾಜುಗಳನ್ನು ಹೊಡೆದು ಆಕ್ರೋಶ ಹೊರಹಾಕಿದ್ದರು. ಆ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ಮನೆಯ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ 15 ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ‘ಬೆಂಕಿ ಹಚ್ಚುವಂತೆ ಪ್ರೇರೇಪಿಸಿದ್ದೇ ನರೇಂದ್ರ’ ಎಂಬ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.
‘ಬಾಗೇಪಲ್ಲಿ_ನ್ಯೂಸ್​’ ಎಂಬ ಯೂಟ್ಯೂಬ್​ #ಚಾನೆಲ್​ ನಡೆಸಿಕೊಂಡಿದ್ದ ನರೇಂದ್ರ ಕೈಗೆ ಸಿಕ್ಕ ವಿಡಿಯೋವನ್ನೆಲ್ಲ ಅಪ್ಲೋ​ಲೋಡ್ ಮಾಡುತ್ತಿದ್ದ ಎನ್ನಲಾಗಿದೆ. ನ್ಯೂಸ್​ಗಾಗಿ ಬೆಂಕಿ ಹಚ್ಚಿಸಿದ ತಪ್ಪಿಗೆ ಜೈಲು ಸೇರಿದ್ದಾನೆ.

116245558 1223295678024826 5885088963378768761 n

ಸುದ್ದಿ ಕೃಪೆ :- ವಿಜಯವಾಣಿ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karnataka News Tagged With: ಪ್ರಿಯಕರನ ಜತೆ ಮದುವೆ, ಮನೆಗೆ ಬೆಂಕಿ ಹಚ್ಚುವಂತೆ ಪ್ರೇರೇಪಿಸಿದ್ದು, ಯೂಟ್ಯೂಬ್ ಚಾನಲ್​ವೊಂದರ ವರದಿ, ಲವ್​ ಸ್ಟೋರಿ ದುರಂತ ಅಂತ್ಯ, ಹೆಣ್ಣು ಮಕ್ಕಳು ಹೊಡೆದರೆ ಕೇಸ್​ ಆಗಲ್ಲ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...