ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಬುಧವಾರ ಮತ್ತೇ ದಾಖಲೆಯ ೨೪ ಜನರಲ್ಲಿ ಸೊಂಕು ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ ೧೮೪ ಕ್ಕೆ ತಲುಪಿದೆ. ಬುಧವಾರ ಮೂವರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೮೧ಕ್ಕೆ ಇಳಿಕೆಯಾಗಿದೆ.
ಬುಧವಾರ ತೇರಗಾಂವ ಗ್ರಾಮದ ಒಂದೇ ಕುಟುಂಬದ ೭ ಜನರಲ್ಲಿ, ಮತ್ತೊಂದು ಮಹಿಳೆಯಲ್ಲಿ ಒಟ್ಟೂ ೮ ಪ್ರಕರಣಗಳು ಹಾಗೂ ಹಳಿಯಾಳದ ಕೊರೊನಾ ವಾರಿಯರ್ ಶುಶ್ರೂಷಕಿ(ನರ್ಸ) ಸೇರಿ ಕುಟುಂಬದ ಮೂವರಿಗೆ, ಹಳಿಯಾಳ ಪಟ್ಟಣದ ಜವಾಹರಗಲ್ಲಿ ಒಂದರಲ್ಲೇ ಒಂದೇ ಕುಟುಂಬದ ನಾಲ್ಕೂ ಸೇರಿ ೬ ಜನರಲ್ಲಿ ಹೀಗೆ ಪಟ್ಟಣದ ೧೧ ಜನರಲ್ಲಿ ಹಾಗೂ ಗ್ರಾಮಾಂತರ ಭಾಗದ ೧೩ ಜನರಲ್ಲಿ ಒಟ್ಟೂ ೨೪ ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.
ಕಾರವಾರದ ಲ್ಯಾಬ್ಗೆ ಕಳಿಸಿದ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಮತ್ತು ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ೯ ಜನರಿಗೆ ಕೊವಿಡ್-೧೯ ಪತ್ತೆಯಾಗಿದೆ.

ಗಂಟಲು ದ್ರವದ ಪರೀಕ್ಷೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ತಾಲೂಕಿನ ತೆರಗಾಂವ ಗ್ರಾಮದ ಒಂದೇ ಕುಟುಂಬದ ೭ ಜನರಲ್ಲಿ, ಪಟ್ಟಣದ ಬಸ್ ನಿಲ್ದಾಣ ಸಮೀಪದ ರಸ್ತೆಯಲ್ಲಿ ಆರೋಗ್ಯ ಇಲಾಖೆಯ ಶುಶ್ರೂಷಕಿ ಸೇರಿ ಗಂಡ ಮತ್ತು ಅತ್ತೆಯ ಹೀಗೆ ಕುಟುಂಬದ ಮೂವರಲ್ಲಿ, ಬಿ.ಕೆ ಹಳ್ಳಿಯಲ್ಲಿ ೧, ತಟ್ಟಿಗೇರಾದಲ್ಲಿ ೧, ಕೆ.ಕೆ ಹಳ್ಳಿಯಲ್ಲಿ-೧, ಬಸವಳ್ಳಿಯಲ್ಲಿ ೧, ಹಳಿಯಾಳದಲ್ಲಿನ ಇಂದಿರಾ ನಗರದಲ್ಲಿ ೧, ಮುಖ್ಯ ಮಾರುಕಟ್ಟೆ ರಸ್ತೆಯ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪಟ್ಟಣದ ಮುಖ್ಯ ಮಾರುಕಟ್ಟೆ ರಸ್ತೆಯ ಸೋಂಕಿತ ಮಹಿಳೆಗೆ ಹುಬ್ಬಳ್ಳಿಯಲ್ಲಿ ಸೊಂಕು ಪತ್ತೆಯಾಗಿದ್ದರಿಂದ ಅವರಿಗೆ ಅಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ತಾಲೂಕಾಡಳಿತ ಸೂಚಿಸಿದೆ.
ಹಳಿಯಾಳದಲ್ಲಿ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ಒಟ್ಟು ೯ ಜನರಿಗೆ ಕೊರೊನ ದೃಢವಾಗಿದೆ. ಅದರಲ್ಲಿ ಇಲ್ಲಿನ ಜವಾಹರಗಲ್ಲಿ ೬ ಮತ್ತು ಮುಖ್ಯಮಾರುಕಟ್ಟೆ ರಸ್ತೆಯ ೬೮ರ ಮಹಿಳೆ, ಜವಳಿಗಲ್ಲಿ(ಗೌರಿಗುಡಿ ರಸ್ತೆ)ಯ ಒಂದರಲ್ಲೇ ೩೬, ೧೧, ೧೨, ೬೧, ೩೨ ವರ್ಷದ ಮಹಿಳೆಯರು ಹಾಗೂ ೮ ವರ್ಷದ ಹೆಣ್ಣು ಮಗು ಸೇರಿ ೬ ಜನರಲ್ಲಿ, ಜೋಗನಕೊಪ್ಪದ ೬೫ವರ್ಷದ ಪುರುಷ, ತೆರಗಾಂವ ಗ್ರಾಮದ ೬೨ ವರ್ಷದ ಮಹಿಳೆಗೂ ಸೋಂಕು ದೃಢ ಪಟ್ಟಿದೆ.
Leave a Comment