
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ_ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಸೀಕೆರೆ_ತಾಲೂಕಿನ_ಗಂಡಸಿ ಹೋಬಳಿಯ_ಲಾಳಿನಕೆರೆ ಗ್ರಾಮದವಾರದ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ. ಎರಡು ದಿನದಲ್ಲಿ ಚನ್ನರಾಯಟ್ಟಣದಲ್ಲಿ ಎರಡು ಕೊಲೆ ನಡೆದಿದ್ದು, ಕೊಲೆ ನಡೆದ ಸ್ಥಳಕ್ಕೆ ಹೋಗಿ ಕಿರಣ್ ಕುಮಾರ್ ಪರಿಶೀಲನೆ ಮಾಡಿದ್ದರು. ಜೊತೆಗೆ ಈ ಕೊಲೆಗೆ ಸಂಬಂಧಿದಂತೆ ಆರೋಪಿಗಳ ಬಂಧಿಸುವಲ್ಲಿ ಅವರಿಗೆ ರಾಜಕೀಯ ಒತ್ತಡವಿತ್ತು ಎಂದು ಹೇಳಲಾಗುತ್ತಿದೆ.
ವರಮಹಾಲಕ್ಷ್ಮಿ ಹಬ್ಬ ಇದ್ದರಿಂದ ಪತ್ನಿ ತಂದೆ ಮನೆಗೆ ಹೋಗಿದ್ದರು. ಇವರು ಸಹ ಮಾವನ ಮನೆಗೆ ಹೋಗಿ ಬೆಳಗ್ಗೆ ಉಪಹಾರ ತಿಂದು ಬಂದು ತಾವು ವಾಸವಿದ್ದ ಮನೆಯಲ್ಲಿ ಪ್ಯಾನ್ಗೆ ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ್ಗೆ ಎರಡು ದಿನಗಳಲ್ಲಿ ನಗರದಲ್ಲಿ ಎರಡು ಕೊಲೆಗಳಾಗಿದ್ದು ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ
Leave a Comment