
ಭಟ್ಕಳ :- ನಗರದ_ಹೂವಿನ_ಚೌಕ_ಪ್ರದೇಶದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೋಲಿಸರಿಗೆ ಸಂಶಯಾಸ್ಪದ ರೀತಿಯಲ್ಲಿ ತಿರುಗುತ್ತಿದ್ದ ಇಬ್ಬರನ್ನು ಬಂಧಿಸಿದ್ದು ಅಪಾರ ಪ್ರಮಾಣದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಭಟ್ಕಳ ವೃತ್ತದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಭಟ್ಕಳ ಶಹರದ ಹೂವಿನ ಚೌಕ್ ಬಳಿ ಸಂಶಯಾಸ್ಪದವಾಗಿ ಸಿಕ್ಕ ಆಪಾದಿತರಾದ 1)#ಶೈಲೇಶ ತಂದೆ ಮಹಾದೇವ ಪಾಟೀಲ್ ಪ್ರಾಯ:33ವರ್ಷ ವೃತ್ತಿ:ಚಾಲಕ ಕೆಲಸ ಸಾ:ಗೋಳಿಗಲ್ಲಿ, ದುರ್ಗದಬೈಲ್, ಬೂಸದ್ ಬಿಲ್ದಿಂಗ್ ಹತ್ತಿರ ಹೊಸ್ ಹುಬ್ಬಳ್ಳಿ.
2) #ವಿಪುಲ್ ತಂದೆ ಸಂಜಯ ದೇಶಮುಖ ಪ್ರಾಯ:25ವರ್ಷ ವೃತ್ತಿ:ಬಂಗಾರ ಮಶೀನ್ ಅಪರೇಟರ್ ಸಾ:ಮನೆ ನಂ: 3 ಬಿಕಳೆ ತಾ:ಕಟಾವ್ ಜಿಲ್ಲೆ:ಸಾತಾರಾ ಮಹಾರಾಷ್ಟ್ರ, ಹಾಲಿ ವಾಸ:ದುರ್ಗದಬೈಲ್ ಹುಬ್ಬಳ್ಳಿ ಇವರಿಂದ ಸುಮಾರು 60,00,000/- ರೂಪಾಯಿ ಮೌಲ್ಯದ 1 ಕೆ.ಜಿ 500 ಗ್ರಾಂ ಆಗುವಷ್ಟು ಬಂಗಾರ ನಮೂನೆಯ ಒಂದು ಬಿಸ್ಕಿಟ್ ಮತ್ತು ಎಂಟು ಗಟ್ಟಿಗಳು, ಕೃತ್ಯಕ್ಕೆ ಉಪಯೋಗಿಸಿದ 10 ಲಕ್ಷ ರೂಪಾಯಿ ಮೌಲ್ಯದ ಕಾರ ನಂ:ಕೆಎ-51/ಎಮ್.ಜೆ-1092 ನೇದನ್ನು ಹಾಗೂ 8000/-ರೂಪಾಯಿ ಮೌಲ್ಯದ ಎರಡು ಮೊಬೈಲಗ ಳನ್ನು ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 112/2020 ಕಲಂ:41(1)(ಡಿ),102 ಸಿ.ಆರ್.ಪಿ.ಸಿ ಮತ್ತು 379 ಐ.ಪಿ.ಸಿ ನೇದಂತೆ ಪ್ರಕರಣದ ದಾಖಲಿಸಿಕೊಂಡು ಆಪಾದಿತರಿಂದ ಒಟ್ಟೂ 61 ಲಕ್ಷ್ ರೂಪಾಯಿ ನಗದು ಹಣವನ್ನು ಜಪ್ತ ಮಾಡಿ ವಶಪಡಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ನಿಖೀಲ್ ಬಿ. ಸಹಾಯಕ ಪೊಲೀಸ್ ಅಧೀಕ್ಷಕರು ಉಪ ವಿಭಾಗ ಭಟ್ಕಳ ರವರ ನೇತೃತ್ವದಲ್ಲಿ ಭಟ್ಕಳ ವೃತ್ತ ನಿರೀಕ್ಷಕರಾದ ದಿವಾಕರ ಪಿ.ಎಮ್, ಭಟ್ಕಳ ಶಹರ ಪೊಲೀಸ್ ಠಾಣೆಯ ಪಿ.ಎಸ್.ಐ ಭರತಕುಮಾರ ವಿ. ಮತ್ತು ಕುಡಗುಂಟಿ ಹಾಗೂ ಭಟ್ಕಳ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ-1462, ಮಾರುತಿ ಜೆ. ನಾಯ್ಕ, ಸಿ,ಹೆಚ್.ಸಿ-656 ನಾಗರಾಜ ಮೊಗೇರ, ಸಿ.ಹೆಚ್.ಸಿ-1347 ವಿನಾಯಕ ಪಾಟೀಲ್, ಸಿ.ಹೆಚ್.ಸಿ-678 ಮದಾರಸಾಬ ಚಿಕ್ಕೇರಿ, ಸಿ.ಹೆಚ್.ಸಿ-1255 ಕೃಷಾನಂದ ನಾಯ್ಕ ಸಿ.ಪಿ.ಸಿ-764 ಈರಣ್ಣಾ ಪೂಜಾರಿ, ಸಿ.ಪಿ.ಸಿ-769 ಲೋಕೇಶ ಕತ್ತಿ,ಸಿ.ಪಿ.ಸಿ-575, ಬಸವಣ್ಣೆಪ್ಪ ಜಕಾತಿ,ಸಿ.ಪಿ.ಸಿ-767 ಸಿದ್ದಪ್ಪ ಕಾಂಬಳೆ,ಸಿ.ಪಿ.ಸಿ-707 ಮಾಳಪ್ಪ ಪೂಜಾರಿ ಚಾಲಕರಾದ ಎ.ಹೆಚ್.ಸಿ-421 ದೇವರಾಜ ಮೊಗೇರ ,ರಾಘವೇಂದ್ರ ಗೌಡ, ಕುಬೇರ ಹೋಸೂರ ಯಾದವ ಮೊಗೇರ ರವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ/ಸಿಬ್ಬಂದಿಯವರ ಕರ್ತವ್ಯವನ್ನು ಪ್ರಶಂಸಿಸಲಾಗಿದೆ.
Leave a Comment