ಹಳಿಯಾಳ:- ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂ ಸುಧಾರಣಾ ಕಾಯ್ದೆ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕೆoದು ಆಗ್ರಹಿಸಿ ವಿವಿಧ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳಿ0ದ ಪತ್ರ ಚಳುವಳಿ ನಡೆಸಲಾಗುತ್ತಿದೆ.
ಹಳಿಯಾಳದ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘ, ರೈತ ಸಂಘಟನೆಗಳ ಸಮನ್ವಯ ಸಮೀತಿ, ರೈತ ಸಂಘ, ಹಸೀರು ಸೇನೆ ಇವುಗಳು ಜಂಟಿಯಾಗಿ ಪತ್ರ ಚಳುವಳಿಯನ್ನು ಆರಂಭಿಸಿವೆ.

ಶನಿವಾರ ತಾಲೂಕಿನ ಹಲವಾರು ಗ್ರಾಮಗಳ ನೂರಾರು ರೈತರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಯನ್ನು ವಿರೋಧಿಸಿದರು ಎಂದು ರೈತ ಮುಖಂಡ ಕುಮಾರ ಬೋಬಾಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗೇಂದ್ರ ಜಿವೊಜಿ, ಮಹಾದೇವ ಕೆಳೊಜಿ, ತರುಣ ಮೇತ್ರಿ, ಗಣೇಶ ಖಾಮಡೊಳ್ಳಿ ಇತರರು ಇದ್ದರು.
Leave a Comment