ಹಳಿಯಾಳ:- ಶನಿವಾರ ಬಂದ ಗಂಟಲು ದ್ರವ ಪರೀಕ್ಷೆಯ ವರದಿಯಲ್ಲಿ ೮ ಜನರಿಗೆ ಹಾಗೂ ಇಲ್ಲಿಯ ಸರ್ಕಾರಿ ಅಸ್ಪತ್ರೆಯಲ್ಲಿ ನಡೆಸಿದ ರ‍್ಯಾಪಿಡ್ ಟೆಸ್ಟ್ನಲ್ಲಿ ಓರ್ವರಿಗೆ ಒಟ್ಟೂ ೯ ಜನರಿಗೆ ಸೊಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನ ಸೊಂಕಿತರ ಸಂಖ್ಯೆ ೨೩೭ಕ್ಕೆ ಏರಿಕೆಯಾಗಿದೆ.
ಹಳಿಯಾಳ ಪಟ್ಟಣವೊಂದರಲ್ಲೇ ೬ ಪ್ರಕರಣಗಳು ದೃಢಪಟ್ಟಿದ್ದು. ದೇಶಪಾಂಡೆನಗರ, ಗುತ್ತಿಗೇರಿಗಲ್ಲಿ, ಬಸವರಾಜ ಗಲ್ಲಿಗಳಿಗೆ ಸೇರಿದ ೮ವರ್ಷದ ಬಾಲಕಿ,೩೫,೪೦, ೨೩ರ ಮಹಿಳೆಯರು ಹಾಗೂ ೭೦ವರ್ಷದ ವೃದ್ದೆ ಮತ್ತು ೬೦ ವರ್ಷದ ವೃದ್ದನಲ್ಲಿ ಸೊಂಕು ಪತ್ತೆಯಾಗಿದೆ.

ಮುಗದಕೊಪ್ಪ ಗ್ರಾಮದ ೫೫ವರ್ಷದ ಪುರುಷ, ಮದ್ನಳ್ಳಿ ಗ್ರಾಮದ ೬೨ ವರ್ಷದ ವೃದ್ದ ಹಾಗೂ ಮುರ್ಕವಾಡ ಗ್ರಾಮದ ೪೨ ವರ್ಷದ ಪುರುಷನಿಗೆ ಸೊಂಕು ದೃಢಪಟ್ಟಿದೆ.
ತಾಲೂಕಿನಲ್ಲಿ ಶನಿವಾರ ಓರ್ವರು ಸೊಂಕಿನಿAದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಒಟ್ಟೂ ಬಿಡುಗಡೆಗೊಂಡವರ ಸಂಖ್ಯೆ ೧೮೬ ಹಾಗೂ ಸಕ್ರಿಯ ಸೊಂಕಿತರ ಸಂಖ್ಯೆ ೫೦ ಆಗಿದೆ.
Leave a Comment