• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗಾರೆ ಕೆಲಸ ಮಾಡುತ್ತ ಗುಡಿಸಲಿನಲ್ಲೇ ಓದಿ ಶೇ98.5 ಫಲಿತಾಂಶ ಪಡೆದ ವಿದ್ಯಾರ್ಥಿ ಮಹೇಶನ ಗುಡಿಸಲಿಗೆ ಶಿಕ್ಷಣ ಸಚಿವ ಸುರೇಶಕುಮಾರ_ಭೇಟಿ.

August 12, 2020 by Yogaraj SK Leave a Comment

117163955 1234697066884687 983814801113760254 n

ಬೆಂಗಳೂರು: ಗಾರೆ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮಾಡುತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.5 ಫಲಿತಾಂಶ ಪಡೆದ ಮಹೇಶನ ಮನೆಗೆ ಖುದ್ದು ಶಿಕ್ಷಣ ಸಚಿವರೇ ಭೇಟಿ ನೀಡಿ ಅಭಿನಂದಿಸಿದರು.

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು_ಕಳೆದುಕೊಂಡ ಮಹೇಶನಿಗೆ_ತಾಯಿಯೇ_ಸರ್ವಸ್ವ. ಆತನ ತಾಯಿ ಬದುಕಿನ ಬಂಡಿ ಸಾಗಿಸಲು ಪುಟ್ಟ ಕಂದ(ಮಹೇಶ)ನನ್ನು ಎತ್ತಿಕೊಂಡು ಯಾದಗಿರಿಯಿಂದ_ಬೆಂಗಳೂರಿಗೆ ಸುಮಾರು 10 ವರ್ಷಗಳ ಹಿಂದೆಯೇ ಗುಳೆ ಬಂದರು. ಜೀವನ_ಭೀಮಾನಗರದ_ಗುಡಿಸಲಿನಲ್ಲಿ ವಾಸವಿದ್ದಾರೆ. ಇಲ್ಲಿನ ಕರ್ನಾಟಕ_ಪಬ್ಲಿಕ್​ ಶಾಲೆಯಲ್ಲಿ ಓದುತ್ತಿದ್ದ ಮಹೇಶ್​, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 616 ಅಂಕ ಪಡೆಯುವ ಮೂಲಕ ಓದಿಗೆ_ಛಲ_ಇದ್ದರೆ ಬಡತನ_ಅಡ್ಡಿ_ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾನೆ. ಮಹೇಶನ ತಾಯಿ ಮಲ್ಲವ್ವ ಮನೆ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಅಮ್ಮನಿಗೆ ನೆರವಾಗಲು ಮಹೇಶ ಗಾರೆ ಕೆಲಸ ಮಾಡಿಕೊಂಡೇ ವಿದ್ಯಾಭ್ಯಾಸ ಮುಂದುವರಿಸಿದ್ದಾನೆ.

117772262 1234697110218016 1974783162523650941 n

ಕಡುಬಡತನದಲ್ಲೂ ಕೂಲಿ ಕೆಲಸ ಮಾಡಿಕೊಂಡೇ ಓದುತ್ತಿರುವ ಮಹೇಶನನ್ನು ಭೇಟಿ ಮಾಡಲು ಅವರ ಗುಡಿಸಲಿಗೆ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ #ಶಿಕ್ಷಣ_ಸಚಿವ ಎಸ್​.ಸುರೇಶ್​ ಕುಮಾರ್​ ಬಂದಿದ್ದರು. ಅವನ ಮನೆಯೆಂದು ಕರೆಯಬಹುದಾದ ಪುಟ್ಟ ಗುಡಿಸಲಿನ ಒಳಗೆ ಕೆಲ ಸಮಯ ಕುಳಿತ ಸಚಿವರು, ಮಹೇಶ ಮತ್ತು ಆತನ ತಾಯಿ ಜತೆ ಚರ್ಚಿಸಿದರು. ಅವನ ಮನೆ, ಕುಟುಂಬ, ತಾಯಿಯ ಮುಗ್ಧತೆ, ಮಹೇಶನ ಸಾಧನೆ ಎಲ್ಲವನ್ನೂ ಕಂಡ ಸಚಿವರು ಭಾವುಕರಾದರು. ಕಾಲೇಜು ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಹೇಶ ಗುಡಿಸಲಿನಲ್ಲೇ ಓದಿ ಹೆಚ್ಚಿನ ಅಂಕಗಳಿಸಿದ್ದಾನೆ. ಮಹೇಶನಿಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದಿಸಿದ್ದೇನೆ. ಇವನಿಗೆ ಪಿಯುನಲ್ಲಿ ವಿಜ್ಞಾನ ವಿಷಯ ತೆಗೆದುಕೊಳ್ಳಬೇಕೆಂಬ ಮಹಾದಾಸೆ ಇದೆ. ಪಿಯುನಲ್ಲೂ ಹೆಚ್ಚಿನ ಅಂಕಗಳಿಸಲಿ ಎಂದು ಹಾರೈಸಿದ್ದೇನೆ ಎಂದರು.
ಸಚಿವರ ಭೇಟಿ ಕುರಿತು ಮಾತನಾಡಿದ ಮಹೇಶ, ‘ಮಿನಿಸ್ಟರ್​ ಬಂದು ಸನ್ಮಾನ ಮಾಡುತ್ತಾರೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಬಹಳ ಖುಷಿ ಆಗುತ್ತಿದೆ. ನಾನು 5 ವರ್ಷದ ಮಗು ಆಗಿದ್ದಾಗಲೇ ನನ್ನ ತಂದೆ ಮೃತಪಟ್ಟರು. ಜೀವನ ಸಾಗಿಸುವುದಕ್ಕಾಗಿ ನನ್ನ ತಾಯಿ ಬೆಂಗಳೂರಿಗೆ ಬಂದರು. ನಾನು 4ನೇ ತರಗತಿಯಿಂದ ಇದೇ ಕೆಪಿಎಸ್​ ಶಾಲೆಯಲ್ಲೇ ವ್ಯಾಸಂಗ ಮಾಡುತ್ತಿದ್ದೇನೆ. ಶಿಕ್ಷಕರು ಉತ್ತಮವಾಗಿ ಬೋಧನೆ ಮಾಡುತ್ತಾರೆ. ಮುಂದೆ ಪಿಯು ವಿಜ್ಞಾನ ಓದು ಆಸೆ ಇದೆ. ಆನಂತರ ಏನು ಮಾಡಬೇಕೆಂದು ಇನ್ನೂ ಆಲೋಚಿಸಿಲ್ಲ’ ಎಂದು ಹೇಳಿದ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Karnataka News

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...