
ಕೃಷಿ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಈ ಉಚಿತ ಆ್ಯಪ್ ಅನ್ನು ಇ-ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ಅವರು ಇಂದು ಆನ್ ಲೈನ್ ಮೂಲಕ ಬಿಡುಗಡೆಗೊಳಿಸಿದರು.
ರೈತರು ಪ್ಲೇ ಸ್ಟೋರ್ ನಿಂದ ಈ ಉಚಿತ ಆ್ಯಪ್ ಡೌನ್ ಲೋಡ್ ಮಾಡಿ ತಮ್ಮ ಕೃಷಿ ಸಂಬಂಧಿತ ಮಾಹಿತಿ ನಮೂದಿಸಬಹುದು. ಇದನ್ನು ರೈತರಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಬಳಸಬಹುದಾಗಿದೆ.
‘Farmers Crop Survey 2020-21′ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ: https://play.google.com/store/apps/details?id=com.csk.KariffTPKfarmer.cropsurvey
“Farmers Crop Survey 2020-21″ ಆ್ಯಪ್ ನ ಪ್ರಯೋಜನಗಳು:
1. ಬೆಳೆ ನಷ್ಟ ಪರಿಹಾರ ವಿತರಣೆಗೆ ಮಾಹಿತಿ
2. ಬೆಳೆ ವಿಮೆ ಯೋಜನೆಯಡಿ ಬೆಳೆ ವಿವರ ಪರಿಶೀಲನೆ
3. ಪಹಣಿಯಲ್ಲಿ ಬೆಳೆ ವಿವರ ದಾಖಲು
4. ಕನಿಷ್ಠ ಬೆಂಬಲ ಬೆಲೆಗೆ ಫಲಾನುಭವಿ ಗುರುತಿಸುವುದು
5. ಬೆಳೆ ಕಟಾವು ಪ್ರಯೋಗಕ್ಕೆ ಮಾಹಿತಿ

Leave a Comment