• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎ ೧ ಮತ್ತು ಎ೨ ಹಾಲು: ಸತ್ಯ ಮಿಥ್ಯಗಳು

August 15, 2020 by Dr. Shridhar NB Leave a Comment

ಭಾರತ ದೇಶದಲ್ಲಿ ಪ್ರತಿಯೊಬ್ಬರ ತಲಾ ಹಾಲಿನ ಸೇವನೆ ಪ್ರಮಾಣ ದಿನಕ್ಕೆ ೨೮೦ ಗ್ರಾಂ. ಸರಿಯಾಗಿ ವಿತರಣೆಯಾದರೆ ಪ್ರಸಕ್ತ ಹಾಲಿನ ಲಭ್ಯತೆ ಪ್ರತಿದಿನ ೩೯೪ ಗ್ರಾಂ. ೨೦೧೮-೧೯ ರ ಅಂಕಿಅಂಶದಂತೆ ಪ್ರಪಂಚದಲ್ಲಿ ಸರಾಸರಿ ಪ್ರತಿಯೊಬ್ಬರಿಗೆ ಪ್ರತಿದಿನ ಸಿಗುವ ಹಾಲಿನ ಪ್ರಮಾಣ ೨೨೯ ಗ್ರಾಂ. ಭಾರತವು ವಿಶ್ವದ ಶೇ:೨೦.೨ ರಷ್ಟು ಅಥವಾ ೧೮೮ ಮಿಲಿಯನ್ ಟನ್ ಹಾಲು ಉತ್ಪಾದಿಸಿ ಪ್ರಪಂಚದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಒಟ್ಟು ಹಾಲು ಉತ್ಪಾದನೆಯ ಶೇ ೫೦ ರಷ್ಟು ಹಾಲನ್ನು ಎಮ್ಮೆಗಳು ಉತ್ಪಾದನೆ ಮಾಡಿದರೆ,ಶೇ:೨೬.೩ ನ್ನು ಮಿಶ್ರತಳಿಯ ಹಸುಗಳು ಉತ್ಪನ್ನ ಮಾಡುತ್ತವೆ. ಉಳಿದೆಲ್ಲವೂ ಸೇರಿ ಶೇ ೨೪ ಉತ್ಪನ್ನ ಮಾಡುತ್ತವೆ. ಇದರಲ್ಲಿ ಸ್ಥಳೀಯ ಅಥವಾ ದೇಶಿ ತಳಿಗಳ ಕೊಡುಗೆ ೯.೮ ಇದೆ.

108189536 10217675637547748 3629653643379317352 o

ಎ೧ ಮತ್ತು ಎ೨ ಹಾಲಿನ ಬಗ್ಗೆ ಚರ್ಚೆ ಈ ದಿನದ್ದಲ್ಲ. ಅನೇಕ ವರ್ಷಗಳಿಂದ ಸಹ ಬಹುಚರ್ಚಿತ ವಿಷಯ. ಮಿಶ್ರತಳಿಗಳಿಂದ ಬರುವ ಹಾಲು ಎ೧ ಹಾಲು ಮತ್ತು ಇದನ್ನು ಕುಡಿದರೆ ತರತರದ ಕಾಯಿಲೆಗಳು ಬರುತ್ತವೆ ಎಂದು ಅನೇಕರು ವಾದಿಸಿದರು. ಎ೨ ಹಾಲು ಸರ್ವಶ್ರೇಷ್ಠ. ಇದನ್ನು ಕುಡಿಯುವುದೂ ಒಂದೇ ಅಮೃತ ಕುಡಿಯುವುದೂ ಒಂದೇ ಎಂಬೆಲ್ಲಾ ವಾದಗಳ ಸರಣಿಗಳೇ ನಡೆದವು. ದೇಶಿ ದನಗಳ ಹಾಲಿನಲ್ಲಿ ಎ೨ ಇರುತ್ತಿದ್ದು ಇದು ಅತ್ಯಂತ ಶ್ರೇಷ್ಠ ಔಷಧಿ ಗುಣಗಳನ್ನೆಲ್ಲಾ ಹೊಂದಿದೆ ಎಂಬ ನಂಬಿಕೆ ಹೊಂದಿ ಈ ತಳಿಯನ್ನು ರಕ್ಷಿಸಲು ಇದನ್ನೊಂದು ಪೂರಕವಾದ ವೈಜ್ಞಾನಿಕ ದಾಖಲೆ ಎಂಬಂತೆ ಬಳಸಲಾಯಿತು.

ಹಾಲಿನಲ್ಲಿ ಶೇ. 82 ನೀರು ಮತ್ತು ಇನ್ನುಳಿದಂತೆ ಕೊಬ್ಬು, ಶರ್ಕರಪಿಷ್ಟ ಮತ್ತು ಪ್ರೋಟೀನು ಇರುತ್ತದೆ. ಪ್ರೋಟಿನಿನಲ್ಲಿ ಬೀಟಾ ಕೆಸೀನ್ ಎಂಬ ಅಂಶವೇ ಪ್ರಮುಖವಾಗಿರುತ್ತದೆ. ಅದರಲ್ಲೂ ಅನೇಕ ವಿಧಗಳಿವೆ ಎಂದು ಒಂದೊಂದಕ್ಕೂ ವಿಜ್ಞಾನಿಗಳು ಗುರುತಿನ ಸಂಖ್ಯೆ ಕೊಡುತ್ತ ಹೋದರು. ಹೋಲ್ಸ್ಟೀನ್ ಮತ್ತು ಇತರ ಕೆಲವು ಹಸು ತಳಿಗಳ ಹಾಲಿನಲ್ಲಿ ಗುರುತಿಸಿದ ಬೀಟಾ ಕೆಸೀನ್ ಎ1 ಎಂದು ಹೆಸರಿಟ್ಟಯ್ತು. ಆಫ್ರಿಕಾ, ಭಾರತೀಯ ಮೂಲದ ತಳಿಗಳ ಹಾಲಿನಲ್ಲಿರುವುದನ್ನು ಎ೨ (ಎ ಟೂ) ಎಂದು ಕರೆದದ್ದಾಯಿತು.

108862438 10217675637347743 230861464533804380 n

ನ್ಯೂಜಿಲೆಂಡಿನ ಆಕ್ಲೆಂಡ್ ವಿವಿಯ ಶಿಶು ಆರೋಗ್ಯ ವಿಜ್ಞಾನಿ ಬಾಬ್ ಎಲಿಯೆಟ್ ಎಂಬಾತ 1999 ನೇ ಸಾಲಿನಲ್ಲಿ ಅಲ್ಲಿನ ಅನಿವಾಸಿ ಮಕ್ಕಳಲ್ಲಿ ಮಧುಮೇಹ ಹೆಚ್ಚಿಗೆ ಇರುವುದನ್ನು ಗಮನಿಸಿ, ಅವು ಕುಡಿಯುವ ಹಾಲಿನ ಮೂಲವನ್ನು ಹುಡುಕುತ್ತ ಹೋದ. ಎ೧ ಹಾಲಿನ ಸೇವನೆಯಿಂದ ಮಕ್ಕಳಿಗೆ ಬಾಲ್ಯದಲ್ಲೇ ಸಕ್ಕರೆ ಕಾಯಿಲೆ ಬರುತ್ತದೆಂದು ವಾದಿಸಿದ. ಅಷ್ಟೇ ಅಲ್ಲ, 20 ದೇಶಗಳಲ್ಲಿ ಹೃದ್ರೋಗ ಮತ್ತು ಸಕ್ಕರೆ ಕಾಯಿಲೆಗಳ ಹೆಚ್ಚಳಕ್ಕೂ ಎ೧ ಹಾಲಿಗೂ ನೇರ ಸಂಬಂಧ ಇದೆಯೆಂದು ಘೋಷಿಸಿದ. ಇಲಿಗಳಿಗೆ ಎರಡೂ ಬಗೆಯ ಹಾಲುಗಳನ್ನು ಕುಡಿಸಿ, ಅವಕ್ಕೂ ಎ1 ಹಾಲು ಅಪಾಯಕಾರಿ ಎಂದು ತೋರಿಸುವ ನಾನಾ ಸಂಶೋಧನೆಗಳು ಅವನಿಂದ ಮತ್ತವನ ತಂಡದಿಂದ ನಡೆದವು. ಅವನ್ನೆಲ್ಲ ಆಧರಿಸಿ ಡೇರಿ ವಿಜ್ಞಾನಿ ಕೇತ್ ವುಡ್ಫೋರ್ಡ್ ಎಂಬಾತ ’ಹಾಲಿನಲ್ಲಿ ಯಮದೂ” ಹೆಸರಿನ ಪುಸ್ತಕವನ್ನೇ ಬರೆದ. ಅವನನ್ನೇ ಅನುಸರಿಸಿ ಅನೇಕ ಜನ ಸಂಶೋಧಕರು ಈ ಕುರಿತು ಸಂಶೋಧನೆ ಮಾಡಿ ಎ೧ ಹಾಲು ಕಾರ್ಕೋಟಕ ವಿಷ ಎಂಬಂತೆ ಬಿಂಬಿಸಿದರು.

108851586 10217675637467746 2162233466132557743 n


ಆದರೆ ಅವನ ವಾದಗಳನ್ನೆಲ್ಲಾ ತಲೆಬುಡ ಮಾಡುವಂತ ಅನೇಕ ಸಂಶೋಧನೆಗಳು ನಡೆದವು. ೨೦೦೪ ರಲ್ಲಿ ನ್ಯೂಝಿಲ್ಯಾಂಡಿನ ವಿಜ್ಞಾನಿಗಳು ಎ೧ ಮತ್ತು ಎ೨ ಎರಡರಿಂದಲೂ ತೊಂದರೆಯೇನಿಲ್ಲ ಲ್ಯಾಕ್ಟೋಸ್ ಅಲರ್ಜಿಯಿಂದ ಈ ತೊಂದರೆಯಾಗಿರಬಹುದು ಎಂದು ಸಿದ್ಧ ಮಾಡಿದರು. ೨೦೦೫ ರಲ್ಲಿ ಟ್ರಸ್ವೆಲ್ ಎಂಬಾತ ವಿವರವಾದ ಅಧ್ಯಯನ ನಡೆಸಿ ಎ೨ ಹಾಲಿನಲ್ಲಿ ಅಂತಹ ಮಹತ್ವವಾದದ್ದೇನೂ ಇಲ್ಲ ಹಾಗೆಯೇ ಎ೧ ನಲ್ಲಿ ಅಂತಹ ದುಷ್ಪರಿಣಾಮಗಳಿಲ್ಲ ಎಂದು ಬರೆದ. ಹಾಗೆಯೇ ೨೦೦೯ ರಲ್ಲಿ ನಡೆದ ಸಂಶೋಧನೆಯೂ ಸಹ ಇದನ್ನೇ ಹೇಳಿತು. ಅಲ್ಲದೇ ಎ೨ ಹಾಲು ಸರ್ವಶ್ರೇಷ್ಠ ಎನ್ನುವುದಕ್ಕೆ ಯಾವುದೇ ದಾಖಲೆಗಳು ಸಿಗಲಿಲ್ಲ.

ಎ೨ ಹಾಲು ಶ್ರೇಷ್ಠ ಎನ್ನುವವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಎ೨ ಹಾಲಿನ ಪ್ರತಿಪಾದಕ ಸಂಘಟನೆಗಳೊಡನೆ ಸಹಯೋಗ ಹೊಂದಿದ್ದರಿಂದ ಅವರ ಸಂಶೋಧನೆ ಪಕ್ಷಪಾತದಿಂದ ಕೂಡಿದೆ ಎಂದು ತೀರ್ಮಾನಿಸಲಾಯಿತು. ಅಲ್ಲದೇ ಯಾವುದೇ ಸಂಶೋಧನೆಯಲ್ಲೂ ಸಹ ಎ೨ ಹಾಲು ಮಧುಮೇಹಕ್ಕೆ, ರಕ್ತದ ಒತ್ತಡ ಕಡಿಮೆ ಮಾಡಲು, ಪ್ರಯೋಜನಕ್ಕೆ ಬರುತ್ತದೆ ಎಂದು ಸಾಬೀತು ಪಡಿಸಲು ಸಾಧ್ಯವಾಗಲೇ ಇಲ್ಲ. ಹಾಗೆಯೇ ಎ೧ ಸಹ ಈ ರೀತಿಯ ರೋಗಗಳನ್ನು ತರುತ್ತದೆ ಎನ್ನಲು ನಿಖರ ಸಂಶೋಧನೆಗಳು ಬರಲಿಲ್ಲ. ಎ೨ ಹಾಲು ಉತ್ತಮ ಎಂದು ಸಾರಲು ನ್ಯೂಜಿಲ್ಯಾಂಡಿನಲ್ಲಿ ಪ್ರತ್ಯೇಕವಾದ ಸಂಸ್ಥೆಯೇ ಹುಟ್ಟಿಕೊಂಡು ಎ೨ ಹಾಲನ್ನು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾರಾಟ ಮಾಡಲು ಅನುಮತಿ ಪಡೆಯಿತು. ಆದರೆ ಈ ಸಂಸ್ಥೆ ಜನರಲ್ಲಿ ತಪ್ಪು ರೀತಿಯಲ್ಲಿ ಪ್ರಚಾರ ಮಾಡಿ ಅದರ ಉತ್ಪನ್ನಗಳನ್ನು ಮಾರಲು ತಪ್ಪು ಸಂದೇಶವನ್ನು ಸಾರುತ್ತದೆ ಎಂದು ಆಸ್ಟ್ರೇಲಿಯಾದ ಸರ್ಕಾರ ಅದಕ್ಕೆ ಭಾರಿ ದಂಡ ವಿಧಿಸಿತು. ಆಸ್ಟ್ರೇಲಿಯಾದ ಸರ್ಕಾರವು ನೇಮಿಸಿದ ತಜ್ಞರ ಸಮಿತಿಯು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಎ೧ ಮತ್ತು ಎ೨ ಹಾಲುಗಳ ಪರಿಣಾಮದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಎರಡು ಒಂದೇ ಎನ್ನುವ ತೀರ್ಮಾನ ನೀಡಿತು.

109477427 10217675637987759 1620085324409554100 n


ಹಾಗಿದ್ದರೆ ಭಾರತದಲ್ಲಿ ಇದು ಎಷ್ಟು ಪ್ರಸ್ತುತ? ಎಂಬುದರ ಮೇಲೆ ಈ ಲೇಖನದ ಉದ್ದೇಶ ನಿಂತಿದೆ. ಜಾಗತಿಕ ಮಟ್ಟದಲ್ಲಿ ನಡೆದ ಅನೇಕ ಸಂಶೋಧನೆಗಳು ಎ ೧ ಮತ್ತು ಎ೨ ಹಾಲಿನಲ್ಲಿ ವ್ಯತ್ಯಾಸವಿಲ್ಲ ಎಂದು ನಿಸ್ಸಂಶಯವಾಗಿ ಹೇಳಿದರೂ ಸಹ ಸ್ವದೇಶಿ ತಳಿಗಳನ್ನು ಸಾಕಬೇಕೆಂದು ಪ್ರೋತ್ಸಾಹಿಸುವ ಗುಂಪೊಂದು ಈ ವಿಷಯಗಳನ್ನೆಲ್ಲಾ ಮರೆಮಾಚಿ ಎ೨ ಹಾಲು ಕೇವಲ ದೇಶಿಯ ತಳಿಗಳಿಂದ ಮಾತ್ರ ಲಭ್ಯ. ಇದು ಅಮೃತ ಸಮಾನ. ಎ೨ ಮಿಶ್ರತಳಿಗಳಿಂದ ಜನ್ಯ. ಇದು ಅನೇಕ ಕಾಯಿಲೆಗಳಿಗೆ ಮೂಲ ಕಾರಣ ಎನ್ನುವ ರೀತಿಯಲ್ಲಿ ಅವೈಜ್ಞಾನಿಕವಾಗಿ ಪ್ರಚಾರ ಮಾಡಿತು. ಇದರ ಬದಲಾಗಿ ನಮ್ಮ ದೇಶದ ತಳಿಗಳನ್ನು ಉತ್ತೇಜಿಸಲು ಅವುಗಳಲ್ಲಿರುವ ರೋಗನಿರೋಧಕ ಶಕ್ತಿ, ಉಷ್ಣವನ್ನು ತಾಳುವ ಶಕ್ತಿ ಇತ್ಯಾದಿಗಳನ್ನು ಹೇಳಬಹುದಿತ್ತು. ದೇಶದ ಒಟ್ಟು ಹಾಲಿನ ಉತ್ಪನ್ನದ ಶೇ ೮೮ ರಷ್ಟು ಹಾಲು ಉತ್ಪಾದಿಸುವ ನಮ್ಮ ದೇಶದ ಎಲ್ಲಾ ಎಮ್ಮೆಗಳೂ, ಕುರಿಗಳೂ, ಆಡುಗಳೂ ಮತ್ತು ಮಿಶ್ರತಳಿಗಳೂ ಸಹ ಎ೨ ಹಾಲನ್ನೇ ಉತ್ಪಾದಿಸುವುದು ಎಂಬ ವಿಷಯ ಮರೆತೇ ಹೋಗಿತ್ತು. ಇದರಿಂದ ಅನೇಕ ಅನಾಹುತಗಳು ನಡೆಯುವುದಿತ್ತು.

109796383 10217675636827730 1968990271181324059 o

1. ಈ ರೀತಿಯ ಎ೧ ಮತ್ತು ಎ೨ ಹಾಲಿನಲ್ಲಿ ವ್ಯತ್ಯಾಸವಿದೆಯೆಂಬ ಅನೇಕರ ವಾದ ಹಾಲಿನ ಉತ್ಪಾದಕರಲ್ಲಿ ಮತ್ತು ಗ್ರಾಹಕರಲ್ಲಿ ಬಹಳಷ್ಟು ಸಂಶಯಗಳನ್ನು ಹುಟ್ಟು ಹಾಕಿತು.
2. ೩೦ ಮಿಲಿಯನ್ ಮಿಶ್ರತಳಿ ಹಸುಗಳನ್ನು ಸಾಕಿ ಅವುಗಳ ಮೇಲೇಯೇ ಜೀವನಾಧಾರ ಹೊಂದಿದ ರೈತರ ಮನಸ್ಸಿನಲ್ಲಿಯೂ ಸಹ ಗೊಂದಲವುಂಟಾಯಿತು.
3. ಅನೇಕ ರೈತರು ಸ್ಥಳೀಯ ದೇಶಿ ತಳಿಗಳನ್ನು ದುಬಾರಿ ಬೆಲೆ ನೀಡಿ ಖರೀದಿಸಿ ಸಾಕಲು ಪ್ರಾರಂಭಿಸಿದರೂ ಸಹ ಅವುಗಳ ಹಾಲಿನ ಇಳುವರಿ ಬಹಳ ಕಡಿಮೆಯಿರುವುದರಿಂದ ಮತ್ತು ಇವುಗಳಿಗೆ ಹಾಯುವ ಒದೆಯುವ ಚಾಳಿಯಿದ್ದು ತೊಂದರೆ ಅನುಭವಿಸಿದರು.
4. ಇದ್ದುದರಲ್ಲೇ ಹೆಚ್ಚಿನ ಹಾಲು ನೀಡುವ ಗಿರ್‍ನಂತಹ ತಳಿಗಳು ಬಂದರೂ ಸಹ ಇವುಗಳಲ್ಲಿಯೂ ಸಹ ಮಿಶ್ರತಳಿ ಜಾನುವಾರುಗಳಂತೇ ಕೆಚ್ಚಲು ಬಾವು, ಗರ್ಭಧರಿಸದೇ ಇರುವುದು, ನೆಣೆ ಬರುವುದು ಇತ್ಯಾದಿ ತೊಂದರೆಗಳು ರೈತರನ್ನು ಹೈರಾಣ ಮಾಡಿದವು.
5. ಒಂದು ವೇಳೆ ೩೦ ಮಿಲಿಯನ್ ಸಂಖ್ಯೆಯಲ್ಲಿರುವ ಮಿಶ್ರತಳಿ ಹಸುಗಳನ್ನು ಸಂಪೂರ್ಣವಾಗಿ ದೇಶಿ ತಳಿಗಳಿಂದ ಬದಲಾಯಿಸಿದರೆ ಹಾಲಿನ ಉತ್ಪಾದನೆಯಲ್ಲಿ ೩೦-೩೫ ಮಿಲಿಯನ್ ಟನ್ ಗಳಷ್ಟು ಕಡಿಮೆಯಾಗಿ ಬಿಡುತ್ತಿತ್ತು.

ಈ ಪ್ರಶ್ನೆಗಳೂ ಸಹ ಹುಟ್ಟಿಕೊಂಡು ಬಿಡುತ್ತಿದ್ದವು.

1. ಬೇರೆ ದೇಶದಲ್ಲಿ ಹುಟ್ಟು ಹಾಕಿರುವ ಎ೧ ಮತ್ತು ಎ೨ ಗೊಂದಲಗಳು ಭಾರತಕ್ಕೆ ಎಷ್ಟು ಸೂಕ್ತ?
2. ನಮ್ಮ ದೇಶದಲ್ಲಿ ಪ್ರಾಯೋಗಿಕವಾಗಿ ಸಾಕಷ್ಟು ಸಂಶೋಧನೆಗಳು ಇಲ್ಲದಿದ್ದರೂ ಸಹ ಎ೧ ಮತ್ತು ಎ೨ ಹಾಲುಗಳ ಪರಿಣಾಮವನ್ನು ಬೇರೆ ದೇಶದಲ್ಲಿ ಅನೇಕ ಬಗೆಯ ಜೀವವೈವಿಧ್ಯಗಳ ವ್ಯತ್ಯಾಸವಿದ್ದರೂ ಸಹ ಒಪ್ಪಬಹುದೇ?
3. ಭಾರತದಲ್ಲಿ ೫೦ ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಮಿಶ್ರತಳಿ ಸಂವರ್ಧನೆಯನ್ನು ನಿಲ್ಲಿಸಿಬಿಡಬೇಕೆ? ನಿಲ್ಲಿಸಿ ಬಿಟ್ಟರೆ ಉಂಟಾಗುವ ಅಗಾಧ ಹಾಲಿನ ಕೊರತೆಗೆ ಪರ್ಯಾಯವೇನು?
4. ಇನ್ನು ಮುಂದೆ ಭಾರತದಲ್ಲಿ ಎ೨ ಹಾಲು ಉತ್ಪಾದಿಸುತ್ತವೆಯೆಂದು ಹೇಳಲಾಗುವ ದೇಶಿ ತಳಿಗಳನ್ನು ಮಾತ್ರವೇ ಪೋಷಿಸಬೇಕೆ?

108189538 10217675636787729 3681755781601245658 n

ನಮ್ಮ ದೇಶದಲ್ಲಿ ಹಾಲು ಉತ್ಪಾದನೆಗೆ ಮೂಲ ಕಾರಣವಾದ ಎಮ್ಮೆಗಳು ಉತ್ಪಾದಿಸುವುದು ಶುದ್ಧ ಎ ೨ ಹಾಲು.ಅಲ್ಲದೇ ಎಲ್ಲಾ ಮಿಶ್ರತಳಿಯ ಹಸುಗಳ ಹಾಲೂ ಸಹ ಎ೨ ಎಂದೆ ಆಗಿರುವುದರಿಂದ ಮತ್ತು ಎ೧ ಹಾಲಿನಿಂದ ತೊಂದರೆಯಿಲ್ಲ ಎಂದು ಗೊತ್ತಾದ ಮೇಲೆ ಈ ಎ೧ ಮತ್ತು ಎ೨ ವಾದಕ್ಕೆ ಹುರುಳೇ ಇರುವುದಿಲ್ಲ. ನಮ್ಮ ದೇಶದಲ್ಲಿ ವಿದೇಶದಿಂದ ನೇರವಾಗಿ ಆಮದು ಮಾಡಿಕೊಂಡ ಯಾವುದೇ ಆಕಳುಗಳಿಲ್ಲ ಎಂಬುದು ಗಮನದಲ್ಲಿರಬೇಕು.
ಸಧ್ಯಕ್ಕೆ ಈ ಕೆಳಗಿನ ಕೆಲಸ ಆಗಬೇಕು
 ಹಾಲು ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಒದಗಿಸುವ ಸರ್ವಶ್ರೇಷ್ಠ ಆಹಾರ.
 ಜನರಲ್ಲಿ ಎ೧ ಮತ್ತು ಎ೨ ಹಾಲಿನ ಗುಣಗಳ ಬಗ್ಗೆ, ಅವು ಹೇಗೆ ಉದಯವಾದವು ಎಂಬ ಬಗ್ಗೆ ಇನ್ನೂ ಮೌಢ್ಯವಿರುವುದರಿಂದ ಇದರ ಬಗ್ಗೆ ವ್ಯಾಪಕ ವೈಜ್ಞಾನಿಕ ಮಾಹಿತಿ ನೀಡುವುದು ಅಗತ್ಯ.
 ಎ೨ ಹಾಲನ್ನೇ ಕುಡಿಯಲೇ ಬೇಕೆಂದರೆ, ಎಮ್ಮೆ ಪಕ್ಕಾ ಸ್ವದೇಶಿ ಪ್ರಾಣಿಯಾಗಿದ್ದು ಭಾರತದ ಹಾಲು ಉತ್ಪಾದನೆಗೆ ಸರ್ವಶ್ರೇಷ್ಠ ಕೊಡುಗೆ ನೀಡಿರುವುದರಿಂದ ಇದರ ಹಾಲನ್ನು ಕುಡಿಯುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ.
 ಆಕಳುಗಳನ್ನು ಮತ್ತು ಎಮ್ಮೆಗಳನ್ನು ಹೊರತು ಪಡಿಸಿ ಕುರಿ, ಆಡು, ಒಂಟೆ, ಯಾಕ್ ಇತ್ಯಾದಿ ಪ್ರಾಣಿಗಳ ಹಾಲನ್ನೂ ಸಹ ಕುಡಿಯುವ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು.
ಸಧ್ಯ ನಮ್ಮ ದೇಶಿಯ ತಳಿಗಳನ್ನು ಮೂಲತಳಿಗಳಾಗಿ ಉಳಿಸಿಕೊಂಡು, ಇವುಗಳಿಗೆ ಜರ್ಸಿ ಅಥವಾ ಹೆಚ್ ಎಫ಼್ ಹೋರಿಗಳ ಸಂಕರಣದಿಂದ ಮಿಶ್ರತಳಿಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು ಸಧ್ಯದ ಉತ್ತಮ ದಾರಿ.ಸುಖಾ ಸುಮ್ಮನೇ ಎ೧ ಮತ್ತು ಎ೨ ಇದರ ಬಗ್ಗೆ ಚರ್ಚೆ ಮಾಡಿ ಜನರ ಮನಸ್ಸಿನಲ್ಲಿ ಗೊಂದಲ ಹುಟ್ಟು ಹಾಕಿ ಅದಕ್ಕೆ ಭಾವನೆಗಳ ಥಳಕು ಹಾಕುವುದಕ್ಕಿಂತ ವೈಜ್ಞಾನಿಕ ಮಾಹಿತಿಗಳನ್ನು ಒಪ್ಪಿಕೊಂಡು ಪಶುಪಾಲನೆ ಮತ್ತು ಹೆಚ್ಚು ಹಾಲು ಉತ್ಪಾದನೆಯತ್ತ ಒತ್ತು ನೀಡುವುದು ಸಧ್ಯಕ್ಕಿರುವ ಉತ್ತಮ ಆಯ್ಕೆ.

ಆಕರ ಲೇಖನಗಳು:
1. Bekuma A, Galmessa U. A1 Beta casein: Devil in the milk-A short communication. Approaches in Poultry, Dairy & Veterinary Sciences. 2019;7(1):606-608.
2. Clemens R, Pressman P. A1/A2 milk and β-Casomorphins: The Resurgence of controversy. Food Technology Magazine. 2018;72 (12):1-4.
3. Muehlhoff E, Bennett A, McMahon D. Milk and dairy products in human nutrition. Food and Agriculture Organization of the United Nations, Rome. 2013.
4. Narayan G Hegde. Research on A1 and A2 milk: A1 milk is not a matter of health concern. Indian Journal of Animal Sciences, 2019;89(7): 707–711,
5. Regner A. Is “original milk” the better milk? The PTA in the Pharmacy. 2020(2):70-71. (in Germany).
6. Shehadeh Kaskous. A1- and A2-Milk and their effect on human health. Journal of Food Engineering and Technology 2020;9(1):15-21
7. Truswell AS. The A2 milk case: a critical review. European Journal of Clinical Nutrition 2005; 59, 623–631

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Trending, ಕೃಷಿ, ಪಶುವೈದ್ಯಕೀಯ Tagged With: a1 a2 milk, Dairy, Poultry, Veterinary Sciences, ಆಸ್ಟ್ರೇಲಿಯಾದ ಸರ್ಕಾರ, ಇನ್ನುಳಿದಂತೆ ಕೊಬ್ಬು, ಎಮ್ಮೆಗಳು, ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಒದಗಿಸುವ, ದೇಶದಲ್ಲಿ ಹಾಲು ಉತ್ಪಾದನೆಗೆ, ನೀರು, ಪ್ರತಿದಿನ ಸಿಗುವ ಹಾಲಿನ ಪ್ರಮಾಣ, ಪ್ರಪಂಚದಲ್ಲಿ ಸರಾಸರಿ, ಭಾರಿ ದಂಡ, ಮಿಶ್ರತಳಿ ಜಾನುವಾರು, ಮೂಲ ಕಾರಣವಾದ, ಶರ್ಕರಪಿಷ್ಟ ಮತ್ತು ಪ್ರೋಟೀನು, ಸರ್ವಶ್ರೇಷ್ಠ ಆಹಾರ, ಹಾಲಿನಲ್ಲಿ ಶೇ. 82, ಹಾಲು ಉತ್ಪಾದಿಸಿ ಪ್ರಪಂಚದಲ್ಲೇ ಪ್ರಥಮ ಸ್ಥಾನ

Explore More:

About Dr. Shridhar NB

Professor and Head,
Department of Veterinary Pharmacology and Toxicology,
Veterinary College, Shivamoga-577204
Karnataka State

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...