ಹಳಿಯಾಳ :- ಶನಿವಾರ ಮತ್ತು ಭಾನುವಾರ ಎರಡು ದಿನ ಹಳಿಯಾಳದಲ್ಲಿ ಕೊರೊನಾ ಸಂಪೂರ್ಣ ರಿಲಿಫ್ ನೀಡಿದ್ದು ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ ಎನ್ನುವುದು ಒಂದು ಕಡೆ ಆದರೇ ಶನಿವಾರ ೯ ಜನ ಹಾಗೂ ಭಾನುವಾರ ೧೪ ಜನ ಎರಡು ದಿನದಲ್ಲಿ ಒಟ್ಟೂ ೨೩ ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹಳಿಯಾಳ ತಾಲೂಕಿನಲ್ಲಿ ಈವರೆಗೆ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ ೩೦೩ ಇದ್ದು ಇದರಲ್ಲಿ ಕೊರೊನಾದಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು ೨೪೮ ಜನ ಕೊವಿಡ್ ಸೆಂಟರ್ ನಿಂದ ಬಿಡುಗಡೆಗೊಂಡು ಮನೆ ಸೇರಿದ್ದಾರೆ. ಸದ್ಯ ಕೊರೊನಾ ಸೊಂಕಿತರ ಸಂಖ್ಯೆ ೫೪ ಕ್ಕೆ ಇಳಿಕೆಯಾಗಿದ್ದು ಇವರಿಗೆ ಚಿಕಿತ್ಸೆ ಮುಂದುವರೆದಿದೆ.

Leave a Comment