ಹಳಿಯಾಳ :- ಸೋಮವಾರ 9 ಜನರಲ್ಲಿ ಹಾಗೂ ಮಂಗಳವಾರ 3 ಹೀಗೆ ಎರಡು ದಿನ 12 ಜನರಲ್ಲಿ ಕೊರೊನಾ ಸೊಂಕು ದೃಢವಾಗಿದ್ದರೇ 11ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು ತಾಲೂಕಿನ ಸಕ್ರಿಯ ಸೊಂಕಿತರ ಸಂಖ್ಯೆ 55 ಕ್ಕೆ ಏರಿಕೆಯಾಗಿದೆ.
ಶನಿವಾರ ಹಾಗೂ ಭಾನುವಾರ ಒಂದೇ ಒಂದು ಸೊಂಕಿತ ಪ್ರಕರಣಗಳು ಪತ್ತೆಯಾಗಿರಲಿಲ್ಲ ಬದಲಾಗಿ 23 ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದರು ಆದರೇ ಮತ್ತೇ ಎರಡು ದಿನದಲ್ಲಿ 13 ಜನರಲ್ಲಿ ಕೊರೊನ ದೃಢವಾಗುವ ಮೂಲಕ ಹಳಿಯಾಳ ತಾಲೂಕಿನಲ್ಲಿ ಈವರೆಗೆ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ.
ಇದರಲ್ಲಿ ಕೊರೊನಾದಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು 259 ಜನ ಕೊವಿಡ್ ಸೆಂಟರ್ ನಿಂದ ಬಿಡುಗಡೆಗೊಂಡು ಮನೆ ಸೇರಿದ್ದಾರೆ. ಸದ್ಯ ಕೊರೊನಾ ಸಕ್ರಿಯ ಸೊಂಕಿತರ ಸಂಖ್ಯೆ 55 ಕ್ಕೆ ಇಳಿಕೆಯಾಗಿದ್ದು ಇವರಿಗೆ ಚಿಕಿತ್ಸೆ ಮುಂದುವರೆದಿದೆ.
ಮಂಗಳವಾರ ಹಳಿಯಾಳ ಪಟ್ಟಣದಲ್ಲಿ ಒಂದು, ಬಿದ್ರೊಳ್ಳಿ ಗ್ರಾಮದಲ್ಲಿ 1 ಹಾಗೂ ಅಜಮನಾಳ ಗ್ರಾಮದಲ್ಲಿ ಒಂದು ಒಟ್ಟೂ 3 ಜನರಲ್ಲಿ ಸೊಂಕು ದೃಢಪಟ್ಟಿದೆ.
Leave a Comment