ಕುಮಟಾ:* ಆಳ ಸಮುದ್ರದಲ್ಲಿ ಟ್ರಾಲ್ ಬೋಟ್ ಮುಳುಗಡೆಯಾದ ಘಟನೆ ತಾಲೂಕಿನ ದಾರೇಶ್ವರ ಬಳಿಯ ಕಡಲಿನಲ್ಲಿ ಗುರುವಾರ ನಡೆದಿದೆ.
ಮೋಹನ್ ಹರಿಕಂತ್ರ ಕಿಮಾನಿ ಎನ್ನುವವರಿಗೆ ಸೇರಿದ ವಿಜಯಲಕ್ಷ್ಮಿ ಎನ್ನುವ ಬೋಟ್ ಮುಳುಗಡೆಯಾಗಿದ್ದು .ಅದೃಷ್ಟವಶಾತ್ ಬೋಟ್ನಲ್ಲಿದ್ದ ನಾಲ್ವರು ಮೀನುಗಾರರನ್ನು ಇತರೆ ಬೋಟ್ಗಳ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಬೆಳಗ್ಗೆ ಮೀನುಗಾರಿಕೆಗೆ ತೆರಳಿದಾಗ ಕಡಲಿನಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಬೋಟ್ ಮುಳಗತೊಡಗಿತ್ತು. ಇದನ್ನು ಗಮನಿಸಿದ ಸಮೀಪವಿದ್ದ ಇತರೇ ಬೋಟಿನ ಮೀನುಗಾರರು ಮುಳುಗಡೆಯಾದ ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನ ರಕ್ಷಿಸಿದ್ದಾರೆ. ಬಳಿಕ ಮುಳುಗುತ್ತಿದ್ದ ಬೋಟನ್ನು ಇತರೆ ಬೋಟ್ಗಳ ಸಹಾಯದಿಂದ ವಾಪಸ್ ಎಳೆದು ತಂದಿದ್ದಾರೆ.
Leave a Comment