ಹಳಿಯಾಳ :- ಬುಧವಾರ ಹಳಿಯಾಳದಲ್ಲಿ ಇಬ್ಬರಲ್ಲಿ ಸೊಂಕು ದೃಢಪಟ್ಟಿದ್ದರೇ 18 ಜನರು ಕೊರೊನಾ ಸೊಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಸಕ್ರಿಯ ಸೊಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ.
ಕೆಕೆ ಹಳ್ಳಿ ಗ್ರಾಮದ 53 ವರ್ಷದ ವ್ಯಕ್ತಿಯಲ್ಲಿ ಹಾಗೂ ಮಂಗಳವಾಡದ 67 ವರ್ಷದ ವೃದ್ದನಲ್ಲಿ ಬುಧವಾರ ಸೊಂಕು ದೃಢಪಟ್ಟಿದೆ. ಈ ಮೂಲಕ ಹಳಿಯಾಳ ತಾಲೂಕಿನಲ್ಲಿ ಈವರೆಗೆ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.
ಇದರಲ್ಲಿ ಕೊರೊನಾದಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು 277 ಜನರು ಕೊವಿಡ್ನಿಂದ ಮುಕ್ತಿ ಹೊಂದಿ ಮನೆ ಸೇರಿದ್ದಾರೆ. ಸದ್ಯ ಕೊರೊನಾ ಸಕ್ರಿಯ ಸೊಂಕಿತರ ಸಂಖ್ಯೆ 39 ಕ್ಕೆ ಇಳಿಕೆಯಾಗಿದೆ
Leave a Comment