ಹಳಿಯಾಳ :- ತಾಲೂಕಿನ ತೇರಗಾಂವ ಗ್ರಾಮದ 36 ವರ್ಷದ ವಿವಾಹಿತ ಮಂಗಳವಾರ ಸಾಯಂಕಾಲ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದಾನೆ.
ಇತ ಬೆರೆ ಜಿಲ್ಲೆಯಲ್ಲಿ ಕೆಲಸಕ್ಕೆ ಇದ್ದು ಬಳಿಕ ಬಂದು ಗ್ರಾಮದ ಸ್ವಗೃಹದಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ.
ಆರೋಗ್ಯದಲ್ಲಿ ಸಮಸ್ಯೆ ಇದ್ದರು ಸಹ ಕೊರೊನಾ ಪರೀಕ್ಷೆಗೆ ಒಳಪಟ್ಟಿರಲಿಲ್ಲ ಆದರೇ ಮಂಗಳವಾರ ಇತನಿಗೆ ತೀವೃ ಉಸಿರಾಟದ ಸಮಸ್ಯೆ ಎದುರಾದಾಗ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಇಲ್ಲಿ ಇತನಿಗೆ ರ್ಯಾಪಿಡ್ ಟೆಸ್ಟ್ ಮಾಡಿದಾಗ ಕೊರೊನಾ ಸೊಂಕು ಇರುವುದು ಪತ್ತೆಯಾಗಿದೆ.

ಅಲ್ಲದೇ ಈ ಸಂದರ್ಭದಲ್ಲಿ ಇತನ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದನ್ನು ಗಮನಿಸಿದ ವೈದ್ಯರು ತಕ್ಷಣ ಕಾರವಾರದ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಇತ ಆರೋಗ್ಯದ ಬಗ್ಗೆ ವಹಿಸಿದ್ದ ನಿರ್ಲಕ್ಷ್ಯವೇ ಆತನು ಕೊವಿಡ್ ಗೆ ಬಲಿಯಾಗಲು ಕಾರಣವೆನ್ನಲಾಗಿದೆ.
ಈ ಮೂಲಕ ಹಳಿಯಾಳದಲ್ಲಿ ಕೊವಿಡ್ ಗೆ ಬಲಿಯಾದವರ ಸಂಖ್ಯೆ 4 ಕ್ಕೆ ಎರಿಕೆಯಾಗಿದೆ.
ಮೃತ ವ್ಯಕ್ತಿ ವಿವಾಹಿತ ಎಂದು ತಿಳಿದು ಬಂದಿದೆ. ಇತ ಗಣೇಶ ಹಬ್ಬ ಆಚರಿಸಿದ್ದು ಅಲ್ಲದೇ ಮಡದಿಯ ಬರ್ತಡೆ ಕೂಡ ಆಚರಿಸಿದ್ದ ಎಂದು ತಿಳಿದು ಬಂದಿದೆ ಇದರಿಂದ ಇತನ ಕುಟುಂಬದಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಕೊರೊನಾ ಆತಂಕ ಎದುರಾಗಿದೆ.
ಸಕಲ ಸುರಕ್ಷಾ ವಿಧಾನಗಳೊಂದಿಗೆ ಹಳಿಯಾಳ ತಾಲೂಕಾಡಳಿತ ಯುವಕನ ಅಂತ್ಯಕ್ರಿಯೇಯನ್ನು ತೇರಗಾಂವ ಗ್ರಾಮದಲ್ಲಿಯೇ ನೆರವೆರಿಸಿದೆ ಎಂದು ವರದಿಯಾಗಿದೆ.
Leave a Comment