ಹಳಿಯಾಳ :- ಗುರುವಾರ ಹಳಿಯಾಳ ಪಟ್ಟಣದ ಹೊಸುರ ಗಲ್ಲಿ ಒಂದರಲ್ಲೇ 9 ಹಾಗೂ ಗ್ರಾಮಾಂತರ ಭಾಗದಲ್ಲಿ 4 ಒಟ್ಟೂ 13 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದೆ.
ಪಟ್ಟಣದ ಹೊಸುರಗಲ್ಲಿ ಒಂದರಲ್ಲೇ 9, ತೇರಗಾಂವ ಹಾಗೂ ಬಿಕೆ ಹಳ್ಳಿ ಗ್ರಾಮದಲ್ಲಿ ತಲಾ ೧ ಹಾಗೂ ಮಂಗಳವಾಡದಲ್ಲಿ ೨ ಪ್ರಕರಣಗಳು ದೃಢಪಟ್ಟಿವೆ. ಗುರುವಾರ ೭ ಜನರು ಗುಣಮುಖರಾಗಿ ಬಿಡುಗಡೆ ಕೂಡ ಹೊಂದಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಸದ್ಯ ಒಟ್ಟೂ ಸೊಂಕಿತರ ಸಂಖ್ಯೆ 362 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 316 ಜನ ಗುಣಮುಖರಾಗಿದ್ದರೇ 41 ಸಕ್ರಿಯ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ. ಈವರೆಗೆ ತಾಲೂಕಿನಲ್ಲಿ 5 ಜನರು ಕೊವಿಡ್ಗೆ ಬಲಿಯಾಗಿದ್ದಾರೆ.

Leave a Comment