ಹೊನ್ನಾವರ: ಪತ್ನಿಯ ಶೀಲ ಶಂಕಿಸಿ ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಆಕೆಯ ಮೇಲೆ ಗಂಭೀರ ಹಲ್ಲೆ ನಡೆಸಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿಯ ಕುಳಿಮನೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.ಕುಳಿಮನೆಯ ವೆಂಕಟೇಶ ನಾಯ್ಕ (38) ಎನ್ನುವವನು ಪ್ರತಿನಿತ್ಯ ಕುಡಿದು ಬರುತ್ತಿದ್ದು ದುಡಿದ ಹಣವನ್ನು ಮನೆಗೆ ನೀಡದೇ ಹಣಕ್ಕಾಗಿ ಪತ್ನಿಯೊಂದಿಗೆ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನು. ಅಲ್ಲದೆ ಹೆಂಡತಿಯನ್ನು ಸಂಶಯದಿಂದ ನೋಡುವ ಮೂಲಕ ಕಿರುಕುಳ ನೀಡುತ್ತಿದ್ದನು . ಶುಕ್ರವಾರ ಪತ್ನಿ ಶೈಲಾ ನಾಯ್ಕ (32) ಮನೆಯಲ್ಲಿ ಇರುವಾಗ ಗಲಾಟೆ ನಡೆಸಿ ಕತ್ತಿಯಿಂದ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗೊಳಿಸಿ ತನ್ನ ಇಬ್ಬರು ಮಕ್ಕಳು ಹಾಗೂ ಮನೆಯಲ್ಲಿದ್ದ ಸಂಬಂಧಿಕರ ಇಬ್ಬರು ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಅಲ್ಲದೆ ಮನೆಯ ಅಡುಗೆ ಮನೆಯಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಶಯದಿಂದ ಗಂಡನು ಹೆಂಡತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡು ಇಬ್ಬರೂ ಸಾವನಪ್ಪಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆಯನ್ನು ಪೋಲಿಸರು ಮುಂದುವರೆಸಿದ್ದಾರೆ.

Leave a Comment