ಯಲ್ಲಾಪುರ : ಪಟ್ಟಣದಲ್ಲಿÀ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೊಸ ಯೋಜನೆಯೊಂದು ಸಿದ್ಧವಾಗುತ್ತಿದ್ದು ಇದರ ಮೊದಲ ಹಂತವಾಗಿ ಸರ್ವೆ ಕಾರ್ಯ ಪ್ರಾರಂಭವಾಗಿದೆ.
ಈ ಹಿಂದೆ ಬೇಡ್ತಿ ನದಿಯಿಂದ ಕುಡಿಯುವ ನೀರಿನ ಸರಬರಾಜು ಆಗುತ್ತಿತ್ತು. ಅನೇಕ ತಾಂತ್ರಿಕ ಕಾರಣಗಳಿಂದಾಗಿ ಮೂರು ವರ್ಷಗಳಿಂದ ನೀರು ಸರಬರಾಜಾಗದೇ ಸ್ಥಗಿತಗೊಂಡಿದ್ದು ಪಟ್ಟಣದ ನೀರಿನ ಸಮಸ್ಯೆ ಯನ್ನು ಇರುವ ಕೊಳವೆ ಬಾವಿಗಳ ಪಂಪುಗಳ ಸಹಾಯದಿಂದಲೇ ನೀಗಿಸಲಾಗುತ್ತಿದೆ. ಇದನ್ನೇ ನಂಬಿಕೊಂಡು ಕೂರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತತ್ವಾರÀವಾಗಲಿರುವದನ್ನು ಮನಗಂಡು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಾಲೂಕಿನ ಗಡಿಯಲ್ಲಿರುವ ಭಾಗವತಿ ಸಮೀಪದ ತಟ್ಟಿಹಳ್ಳ ಡ್ಯಾಂನಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ವಿವಿಧ ಹಂತದಲ್ಲಿ ಪ್ರಯತ್ನಿಸುತ್ತಿದ್ದು ಸಚಿವರ ಸೂಚನೆಯ ಮೇರೆಗೆ ಪೈಪ್ಲೈನ್ ಅಳವಡಿಸಲು ಸರ್ವೆ ಕಾರ್ಯ ಪ್ರಾರಂಭವಾಗಿದೆ. ಯಲ್ಲಾಪುರ ಪಟ್ಟಣ ಪಂಚಾಯತಿ 3,80,000 ರುಗಳನ್ನು ಸರ್ವೆ ಕಾರ್ಯಕ್ಕಾಗಿ ಸಂದಾಯ ಮಾಡಿದೆ.
ಬಾಕ್ಸ್ …..ಬಹುದಶಕಗಳಿಂದ ಕಾಡುತ್ತಿರುವ ಯಲ್ಲಾಪುರ ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ತಟ್ಟಿಹಳ್ಳ ಡ್ಯಾಂನಿಂದ ಕುಡಿಯುವ ನೀರನ್ನು ತರಲು ಯೋಜನೆ ರೂಪಿಸಲಾಗಿದೆ. ಇದರಿಂದ ಮುಂದಿನ ಪೀಳಿಗೆಯವರೂ ಸಹ ಕುಡಿಯುವ ನೀರಿಗಾಗಿ ಪರಿತಪಿಸದಂತೆ ದಿನದ 24 ತಾಸು ನೀರು ಸರಬರಾಜು ಆಗುವಂತೆ ನೋಡಿಕೊಳ್ಳುವುದೇ ಇದರ ಮೂಲ ಉದ್ದೇಶವಾಗಿದೆ.ಮೊದಲ ಹಂತವಾಗಿ ಪೈಪ್ಲೈನ್ ಅಳವಡಿಕೆಗಾಗಿ ಸರ್ವೆ ಮಾಡಲು ಸೂಚಿಸಿದ್ದೇನೆ.-ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ

Leave a Comment