• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಮೃತಾ ಫಲಂ

August 31, 2020 by KV Parthasarathi Kshatriya Leave a Comment

ಪೇರಳೆ,ಸೀಬೆಕಾಯಿ,ಚೇಪೆಕಾಯಿ,ಸೀಬೆ ಹಣ್ಣು,ಜಾಮುಕಾಯಿ,ಕೊಯ್ಯ ಫಳಮ್,ಗುವ, ಅಮೃದ್, ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೆರೆ ಕಟ್ಟೆಗಳ ಮೇಲೆ,ಹೊಲ,ಗದ್ದೆಗಳ ಬದಿಗಳ ಮೇಲೆ,ಕೆಲವು ಕಡೆ ತೋಟಗಳಲ್ಲಿ ವಿರಳವಾಗಿ ಬೆಳೆಯುತ್ತಿದ್ದ ಸೀಬೆಹಣ್ಣು ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು,ಈಗ ಎಲ್ಲೆಲ್ಲೂ ವಾಣಿಜ್ಯ ಬೆಳೆಯಾಗಿ ಹೇರಳವಾಗಿ ಬೆಳೆದು ಅಪಾರ ಲಾಭ ಗಳಿಸುತ್ತಿದ್ದಾರೆ. ಸೀಬೆ ಎಲೆಗಳನ್ನು ತಂದು,ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ ಎರಡು ಲೋಟ ನೀರು ಹಾಕಿ, ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಒಂದು ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ದಿನಕ್ಕೆ 50ml ನಂತೆ ಸೇವಿಸುತ್ತಿದ್ದರೆ, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.ದೇಹದ ತೂಕ ಇಳಿಯುತ್ತದೆ.ಅಧಿಕ ರಕ್ತದೊತ್ತಡ ಕಡಿಮೆ ಆಗುತ್ತೆ.ರಕ್ತದ್ಲಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತೆ. ಜೀರ್ಣಕ್ರಿಯೆ ಚೆನ್ನಾಗಾಗಿ, ಹೊಟ್ಟೆಯಲ್ಲಿನ ಹುಣ್ಣನ್ನು ಗುಣಪಡಿಸುತ್ತೆ. 2 ಸೀಬೆ ಎಲೆ 2 ಮಾವಿನ ಎಲೆ 2 ನೇರಳೆ ಎಲೆ 10 ತುಳಸಿ ಎಲೆ 4 ದೊಡ್ಡ ಪತ್ರೆ 200ml ನೀರಿನಲ್ಲಿ ಹಾಕಿ ಒಳೆಯ ಮೇಲಿಟ್ಟು ಚೆನ್ನಾಗಿ ಕುದಿಸಿ 50ml ಆದಾಗ ಕೆಳಗಿಳಿಸಿ ಸೋಸಿ, ಉಗರು ಬೆಚ್ಚಗಾದಾಗ 2 ಚಮಚ ಕಷಾಯಕ್ಕೆ 1 ಚಮಚ ಜೇನುತುಪ್ಪ ಕಲಸಿ, ದಿನಕ್ಕೆ ಮೂರು ಬಾರಿ ಸೇವಿಸಿದರೆ,ನೆಗಡಿ,ಕೆಮ್ಮು,ಕಫ,ವಾತ, ಪಿತ್ತ,ಜ್ವರ,ಅಜೀರ್ಣ ಸಮಸ್ಯೆ ಗುಣವಾಗುತ್ತೆ.ಒಣ ಕೆಮ್ಮು, ಅಸ್ತಮಾ ಸಹಾ ವಾಸಿಯಾಗುತ್ತೆ. ತೊಗಟೆಯನ್ನು ಗಂಧ ತೇಯ್ದು ಬಾವು, ಗಾಯ, ಹುಣ್ಣುಗಳ ಮೇಲೆ ಲೇಪನ ಮಾಡಿದರೆ ವಾಸಿಯಾಗುತ್ತೆ.

84119125 292353598392174 2566646737825431552 n

ಸೀಬೆ ಹಣ್ಣಿನಲ್ಲಿ ನಾರಿನಾಂಶ ಅಧಿಕವಿದ್ದು,ಹಣ್ಣನ್ನು ಸೇವಿಸುವುದರಿಂದ ಮಲಬದ್ಧತೆಯಿಂದ ಮುಕ್ತಿಹೊಂದಬಹುದು.ಹಸಿಕಾಯಿ ಭೇದಿಗೆ ರಾಮಬಾಣದಂತೆ ಕೆಲಸ ಮಾಡುತ್ತೆ.ಸೀಬೆಕಾಯಿ ರಸ ತೆಗೆದು ಅದಕ್ಕೆ ಜೇನುತುಪ್ಪ ಕಲಸಿ ಸೇವಿಸಿದರೆ ಹೃದಯದ ಆರೋಗ್ಯ ಕಾಪಾಡಿ, ಹೃದಯವನ್ನು ಗಟ್ಟಿಗೊಳಿಸುತ್ತೆ. ಕಣ್ಣು ನೋವು, ಕಣ್ಣು ಕೆಂಪಗೆ ಇದ್ದಾಗ ಸೀಬೆ ಹೂವಿನ ರಸ ಹಿಂಡಿ, ಅದನ್ನು ಹರಳೆಣ್ಣೆಯಲ್ಲಿ ರಂಗಳಿಸಿ, ಕಣ್ಣಿಗೆ ಎರಡು ಮೂರು ತೊಟ್ಟು ಬಿಟ್ಟರೆ ಶೀಘ್ರ ವಾಸಿಯಾಗುತ್ತೆ. ವಸಡುಗಳಲ್ಲಿ ಬಲವಿಲ್ಲದೆ ಹಲ್ಲುಗಳು ಅಲ್ಲಾಡುವುದು, ವಸುಡುಗಳಲ್ಲಿ ರಕ್ತ ಸುರಿಯುವಾಗ ಸೀಬೆ ದ್ವಾರಕಾಯಿಯನ್ನು ಜಗಿದು ತಿನ್ನುತ್ತಿದ್ದರೆ, ವಸಡುಗಳು ಬಲಗೊಂಡು ದಂತಪಂಕ್ತಿ ಗಟ್ಟಿಯಾಗಿ ರಕ್ತಸ್ರಾವ ನಿಲ್ಲುತ್ತೆ. ಹಸಿ ಸೀಬೆಕಾಯಿಯನ್ನು ಜಜ್ಜಿ 200ml ನೀರು ಹಾಕಿ ಚೆನ್ನಾಗಿ ಕುದಿಸಿ, 50ml ನೀರಾದಾಗ ಕೆಳಗಿಳಿಸಿ, ಸೋಸಿ ಉಗರು ಬೆಚ್ಚಗಾದಾಗ ಮಜ್ಜಿಗೆಯಲ್ಲಿ ಕಲಸಿ ಕುಡಿದರೆ, ಅತಿಸಾರ ಭೇದಿ, ವಾಂತಿ ನಿಲ್ಲುತ್ತೆ. 1ಚೆನ್ನಾಗಿ ಹಣ್ಣಾಗಿರುವ ಸೀಬೆ ಹಣ್ಣಿನ ರಸ ತೆಗೆದು,(ಬೀಜ ಬಿಸಾಕಿ) ಸೋಸಿದ ರಸಕ್ಕೆ 2 ಚಮಚ ಜೇನುತುಪ್ಪ ಕಲಸಿ, ಅದನ್ನು ಒಂದು ಲೋಟ ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಬಲಹೀನತೆ ದೂರವಾಗುತ್ತೆ.ಇದರಲ್ಲಿ ವಿಟಮಿನ್ C ಇದ್ದು,ದೇಹಕ್ಕೆ ಕ್ಯಾಲ್ಸಿಯಂ ಅಧಿಕವಾಗಿ ದೊರೆಯುತ್ತದೆ.(ಗರ್ಭಿಣಿಯರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಟಾನಿಕ್ ನಂತೆ ಅದ್ಭುತವಾಗಿ ಕೆಲಸ ಮಾಡುತ್ತೆ)ಇದು ಹೃದಯ ಬಲ ಹೀನತೆ, ಜೀರ್ಣಕ್ರಿಯೆ, ಮೂತ್ರದಲ್ಲಿನ ಉರಿ ಮುಂತಾದ ಸಮಸ್ಯೆಗಳಿಗೂ ಅದ್ಭುತವಾಗಿ ಕೆಲಸ ಮಾಡುತ್ತೆ. ಸೀಬೆಯಲ್ಲಿ ಔಷಧೀಯ ಭಂಡಾರವೆ ತುಂಬಿದೆ.

86267538 292353421725525 8853586472339505152 n
84452079 292353388392195 2634304769228800000 n

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, ಆರೋಗ್ಯ, ಮನೆಮದ್ದು Tagged With: .ಹಸಿಕಾಯಿ ಭೇದಿಗೆ ರಾಮಬಾಣದಂತೆ, ಅಮೃದ್, ಕೊಯ್ಯ ಫಳಮ್, ಗುವ, ಚೇಪೆಕಾಯಿ, ಜಾಮುಕಾಯಿ, ನಾರಿನಾಂಶ ಅಧಿಕ, ಪೇರಳೆ, ಮಲಬದ್ಧತೆಯಿಂದ ಮುಕ್ತಿಹೊಂದಬಹುದು, ಸೀಬೆ, ಸೀಬೆ ಹಣ್ಣು, ಸೀಬೆಕಾಯಿ, ಹೃದಯದ ಆರೋಗ್ಯ ಕಾಪಾಡಿ, ಹೃದಯವನ್ನು ಗಟ್ಟಿ

Explore More:

About KV Parthasarathi Kshatriya

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...