ಹೊನ್ನಾವರ: ಭೂ-ಸುಧಾರಣೆ ಕಾಯಿದೆ ೧೯೬೧, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ರೈತ ಮತ್ತು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮಂಕಿ ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
.ಮಂಕಿ ಘಟಕದ ಅಧ್ಯಕ್ಷ ಟಿ.ಟಿ.ನಾಯ್ಕ ಮಾತನಾಡಿ ಕಂದಾಯ ಇಲಾಖೆಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅವಧಿಯನ್ನು ೬೦ ದಿನಗಳಿಂದ ೩೦ ದಿನಗಳಿಗೆ ಇಳಿಸಲಾಗಿದೆ.ಇಂತಹ ವಿನಾಯಿತಿಂದ ರಾಜ್ಯದಲ್ಲಿ ನೋಂದಾವಣಿಯಾಗಿರುವ ಬಹುತೇಕ ಕಂಪನಿಗಳು, ಸಂಸ್ಥೆಗಳು ರೈತರಿಂದ ಕೃಷಿ ಭೂಮಿಯನ್ನು ಕ್ರಯಕ್ಕೆ ಪಡೆದು ಸೆಕ್ಷನ್ ೧೦೯ರ ಅಡಿಯಲ್ಲಿ ವಿನಾಯಿತಿ ಪಡೆದು ಬ್ಯಾಂಕ್ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಸಾಲ ಪಡೆದು ಸ್ಥಾಪಿಸಿದ ಕಾರ್ಖಾನೆ, ಉದ್ಯಮಗಳನ್ನು ವೃತ್ತಿ ಪರವಾಗಿ ನಿರ್ವಹಿಸದೇ ಮತ್ತು ಪಡೆದ ಸಾಲ ಮತ್ತು ಬಡ್ಡಿಯನ್ನು ತೀರಿಸದೇ ಬ್ಯಾಂಕ್ ಮತ್ತು ವಾಣಿಜ್ಯ ಸಂಸ್ಥೆಗಳು ಈ ಸಾಲವನ್ನು ಕಾರ್ಯನಿರ್ವಹಿಸದ ಸ್ವತ್ತುಗಳೆಂದು ಘೋಷಿಸಿ ಸಾಲ ಮನ್ನಾ ಪ್ರಯೋಜನ ಪಡೆದುಕೊಂಡು ನಂತರ ಭೂಮಿಯನ್ನು ಕೋಟ್ಯಾಂತರ ಬೆಲೆಗೆ ಮಾರಲು ಅವಕಾಶಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ವಿವಿಧ ಕಾರ್ಮಿಕ ಕಾಯಿದೆಗಳಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳನ್ನು ಕೈಬಿಡಬೇಕು. ತಿದ್ದುಪಡಿಗಳ ವಿಷಯವಾಗಿ ಚರ್ಚಿಸಲು ವಿದಾನ ಮಂಡಲದ ಉಭಯ ಸದನಗಳನ್ನು ಕೂಡಲೇ ಕರೆಯಬೇಕು. ಒಂದು ವೇಳೆ ರಾಜ್ಯ ಸರ್ಕಾರ ಮೇಲ್ಕಂಡ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳದೆ ಅನುಷ್ಠಾನಗೊಳಿಸಲು ಮುಂದಾದಲ್ಲಿ ನಮ್ಮ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಗಣಪಯ್ಯ ಗೌಡ, ಇನಾಯತ್ ಉಲ್ಲ್ಲಾ ಶಾಬಂದ್ರಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎನ್.ಗೌಡ, ತಾಲೂಕಾಧ್ಯಕ್ಷ ವಿ.ಎಂ.ಭAಡಾರಿ, ಮಂಕಿ ಘಟಕಾಧ್ಯಕ್ಷ ಟಿ.ಟಿ.ನಾಯ್ಕ, ತಾಪಂ ಸದಸ್ಯ ತುಕಾರಾಮ ನಾಯ್ಕ, ಪಪಂ ಸದಸ್ಯ ಸುಬ್ರಾಯ ಗೌಡ, ಮಾಜಿ ತಾಪಂ ಸದಸ್ಯ ಪಿ.ಟಿ.ನಾಯ್ಕ, ಗ್ರಾಪಂ ಸದಸ್ಯ ರಾಜೇಶ ನಾಯ್ಕ, ರಾಘವೇಂದ್ರ ಮಡಿವಾಳ, ಶಂಕರ ಗುಣವಂತೆ, ಇತರರು ಪಾಲ್ಗೊಂಡಿದ್ದರು.
Leave a Comment