ಯಲ್ಲಾಪುರ: ರಾಜ್ಯ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತರಾಜ ಇಲಾಖೆಯ ರಾಜ್ಯ ವಿಕೇಂದ್ರಿಕರಣಯೋಜನೆ ಮತ್ತು ಅಭಿವೃದ್ದಿ ಸಮಿತಿಯ ಉಪಾಧ್ಯಕ್ಷರನ್ನಾಗಿ ಪ್ರಮೋದ ಹೆಗಡೆಯವರನ್ನು ನೇಮಿಸಿ ಸರಕಾರ ಗುರುವಾರ ಆದೇಶ ಮಾಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮಸ್ವರಾಜ್ಯದ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ಸೇವೆ ಮಾಡುವ ಪೂರ್ಣಾವಧಿ ಜವಾಬ್ದಾರಿ ಸರಕಾರ ನನಗೆ ನೀಡಿದೆ. ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ,ಗ್ರಾಮೀಣಾಭಿವೃದ್ದಿ ಪಂಚಾಯತ ರಾಜ ಸಚಿವ ಕೆ.ಈಶ್ವರಪ್ಪ,ಜಿಲ್ಲಾ ಉಸ್ತುವಾರಿಸಚಿವ ಶಿವರಾಮ ಹೆಬ್ಬಾರ ಸಂಸದ ಅನಂತಕುಮಾರ ಹೆಗಡೆ,ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮುಂತಾದವರ ಸಹಕಾರ ಮಾರ್ಗದರ್ಶನ ಸದಾ ಬಯಸುತ್ತೇನೆ ಅವರಿಗೆಲ್ಲರಿಘ ಕೃತಜ್ಞತೆಗಳನ್ನು ತಿಳಿಸಿದರು.

Leave a Comment