ಯಲ್ಲಾಪುರ:
ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ತಾಲೂಕಿನ ವೆಂಕಟ್ರಮಣ ಕವಡಿಕೇರಿ ಅವರಿಗೆ ಚಂದಗುಳಿ ಗ್ರಾ.ಪಂ ಸಭಾಭವನದಲ್ಲಿ ಮಂಗಳವಾರ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸ್ಥಳಿಯ ಊರನಾಗರಿಕರ ಹಾಗೂ ಯುವ ಸಂಘಟನೆಗಳು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸನ್ಮಾನಿಸಿ, “ಗ್ರಾಮೀಣ ಭಾಗದ ಯುವಕನೋರ್ವ ಐಎಎಸ್ ಪರೀಕ್ಷೆಯನ್ನು ಬರೆದು ಉತ್ತೀರ್ಣ ನಾಗಿರುವುದು ಹೆಮ್ಮೆಯ ವಿಷಯ. ಪ್ರತಿಭಾನ್ವಿತ ವೆಂಕಟ್ರಮಣ ಕವಡಿಕೇರಿಯ ಸಾಧನೆ ಉಳಿದವರಿಗೆ ಮಾದರಿಯಾಗಿದೆ” ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಅಪ್ಪು ಆಚಾರಿ,ಪಿ.ಎಲ್.ಡಿ.ಬ್ಯಾಂಕ್ ಅಧಯಕ್ಷ ಆರ್.ಎಸ್. ಭಟ್ಟ ದೇಸಾಯಿಮನೆ,ಸ್ಥಳಿಯ ಪ್ರಮುಖರಾದ ರಾಮಚಂದ್ರ ಭಾಗ್ವತ್ ಗೋಳಿಗದ್ದೆ,ಆರ್.ಎನ್. ಭಟ್ಟ ಹುತ್ಕಂಡ,ಎಸ್.ಕೆ. ಭಾಗ್ವತ್ ಗಾಣಗದ್ದೆ,ಎಸ್.ಡಿ.ಎಂ. ಭಟ್ಟ,ಎನ್.ಕೆ. ಭಾಗ್ವತ್ ಉಪಸ್ಥಿತರಿದ್ದರು.ಸಾಮಾಜಿಕ ಕಾರ್ಯಕರ್ತ ಎಂ.ಎಸ್. ಹೆಗಡೆ ಜಂಬೆಸಾಲ್ ನಿರ್ವಹಿಸಿದರು.

Leave a Comment