ಹಳಿಯಾಳ:- ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ತನ್ನ 11 ವರ್ಷದ ವಿಧಾನ ಪರಿಷತ್ ಸದಸ್ಯತ್ವ ಅವಧಿಯಲ್ಲಿ ಜಿಲ್ಲೆಗೆ ಹಾಗೂ ಕ್ಷೇತ್ರಕ್ಕೆ ಅವರ ಕೊಡುಗೆ ಏನು?, ಎಷ್ಟು ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗೆ ಘೊಟ್ನೇಕರ ಶ್ರಮಿಸಿದ್ದಾರೆ?, ಎಷ್ಟು ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ಅಭಿವೃದ್ದಿಯ ಕುರಿತು ಚರ್ಚಿಸಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಹೇಳಿಕೆ ನೀಡಲಿ ಎಂದು ಸವಾಲ್ ಹಾಕಿದರು.
ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಾಲ ಮನ್ನಾ ಹೆಸರಿನಲ್ಲಿ ಸೊಸೈಟಿಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಘೋಟ್ನೇಕರ ಅವರು ಏಕೆ ತನಿಖೆಗೆ ಸರ್ಕಾರಕ್ಕೆ ಆಗ್ರಹಿಸುತ್ತಿಲ್ಲ ಎಂದು ಪ್ರಶ್ನೀಸಿದರು.

ಘೋಟ್ನೇಕರ ಅವರು ಬಿಜೆಪಿ ಸೇರಲು ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಆದರೇ ಎಲ್ಲ ಹಂತದ ಅವರ ಪ್ರಯತ್ನಗಳು ವಿಫಲವಾಗುತ್ತಿವೆ ಅಲ್ಲದೇ ಅವರಿಗೆ ಹಿನ್ನಡೆಯಾದ ಕೂಡಲೇ ಬಿಜೆಪಿಯನ್ನು ಟಿಕಿಸುವ ಕೆಲಸ ಮಾಡುತ್ತಾರೆ. ಈಗಲೂ ಸಹ ಇದೇ ರೀತಿ ಆದ ಕಾರಣ ಮತ್ತೇ ಅನಾವಶ್ಯಕ ಟಿಕೆಗಳನ್ನು ಮಾಡುವ ಮೂಲಕ ಕಾಂಗ್ರೆಸ್ನಲ್ಲಿ ತನ್ನ ಅಸ್ತಿತ್ವ ತೊರಿಸುವ ಯತ್ನ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥೀಕವಾಗಿ ದಿವಾಳಿ ತೆಗೆದಿವೆ ಎಂದು ಅರ್ಥವಿಲ್ಲದ ಹೇಳಿಕೆ ನೀಡುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರೇ ಬೌದ್ದಿಕವಾಗಿ ದಿವಾಳಿ ತೆಗೆದಿದ್ದಾರೆ ಎಂದು ಹೆಗಡೆ ಖಾರವಾಗಿ ನುಡಿದರು.
ಜಿಡಿಪಿ ಬಗ್ಗೆ ಮಾತನಾಡುವ ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಆಗಿರುವ ಘೊಟ್ನೇಕರ ಜಿಡಿಪಿ ಎಂದರೇನು ? ಯಾವ ಆಧಾರದ ಮೇಲೆ ರಾಜ್ಯ ಹಾಗೂ ರಾಷ್ಟ್ರದ ಜಿಡಿಪಿ ನಿರ್ಧರಿಸಲಾಗುತ್ತದೆ ಎಂದು ಎಲ್ಲರಿಗೂ ತಿಳಿಸಿ ಹೆಳುವ ಕೆಲಸ ಮಾಡಲಿ ಬಳಿಕ ಟಿಕೆ ಮಾಡಲಿ ಎಂದ ಸುನೀಲ್ ಹೆಗಡೆ ಕೊರೊನಾ ಮಹಾಮಾರಿಯಿಂದ ಜಗತ್ತೇ ಅಲ್ಲೋಲ ಕಲ್ಲೋಲವಾಗಿದೆ. ಎಲ್ಲ ರಾಷ್ಟ್ರಗಳ ಜಿಡಿಪಿ ಕುಸಿದಿದೆ ಆದರೇ ಜಾಗತಿಕ ಮಟ್ಟದಲ್ಲಿ ಭಾರತದ ಜಿಡಿಪಿ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದನ್ನು ಘೊಟ್ನೇಕರ ತಿಳಿದುಕೊಳ್ಳದೇ ಇರುವುದು ದೌರ್ಭಾಗ್ಯದ ಸಂಗತಿಯಾಗಿದೆ ಎಂದರು.
ಕೊರೊನಾದಂತಹ ಸಂದರ್ಭದಲ್ಲಿಯೂ ಎಲ್ಲ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಹಾಗೂ ಅಭೀವೃದ್ದಿ ಕಾರ್ಯಗಳಲ್ಲಿ ತೊಡಗಿವೆ ಆದರೇ ಕೊರೊನಾ ಇಲ್ಲದಿರುವ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರವಿದ್ದಾಗ ಜಿಡಿಪಿ ಯಾವ ಮಟ್ಟಕ್ಕೆ ಕುಸಿದಿತ್ತು ಎಂಬುದನ್ನು ಕೂಡ ಕಾಂಗ್ರೇಸ್ಸಿಗರು ಜನತೆಗೆ ಹೇಳುವ ಕೆಲಸ ಮಾಡಬೇಕು ಎಂದ ಮಾಜಿ ಶಾಸಕರು ಎರಡೂ ಸರ್ಕಾರಗಳು ಸ್ವ ಹಿತಾಸಕ್ತಿಗಾಗಿ ಏನು ಮಾಡದೇ ಜನತೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೇ ಹೋರತು ಘೊಟ್ನೇಕರ ಹಾಗೆ ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಿಲ್ಲ ಎಂದು ಕಿಡಿ ಕಾರಿದರು.
ಕ್ಷೇತ್ರ ಹಾಗೂ ಜಿಲ್ಲೆಯ ಬಗ್ಗೆ ಹಾಗೂ ಸರ್ಕಾರದ ಬಗ್ಗೆ ಆರೋಪ ಮಾಡುವವರು ಸದನದ ಬಾವಿಗೆ ಇಳಿದು ಮಾತನಾಡಿ ಹೊರತು ಪತ್ರಿಕೆಗಳ ಮೂಲಕ ಮಾತನಾಡಬೇಡಿ ಎಂದ ಹೆಗಡೆ ಸ್ಥಳೀಯ ಎಪಿಎಮ್ಸಿಯಲ್ಲಿ ದಲ್ಲಾಳಿಗಳು ರೈತರ ರಕ್ತ ಹಿರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದಕ್ಕೆ ಘೊಟ್ನೇಕರ ಹಾಗೂ ಎಪಿಎಮಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ ಅವರೇ ಹೊಣೆಯಾಗಿದ್ದಾರೆ. ರೈತರಿಗೆ ವಂಚಿಸುತ್ತಿರುವ ದಲಾಲರ ಬಗ್ಗೆ ಏಕೆ ಮಾತನಾಡುವುದಿಲ್ಲ ಅವರ ವಿರುದ್ದ ಕ್ರಮ ಜರುಗಿಸುವುದಿಲ್ಲವೇಕೆ ಇದುವೇ ಘೊಟ್ನೇಕರ ಅವರ ರೈತಪರ ಕಾಳಜಿಯೇ ಎಂದು ವಾಗ್ದಾಳಿ ನಡೆಸಿದ ಮಾಜಿ ಶಾಸಕರು ರೈತರ ಬಗ್ಗೆ ಮೊಸಳೆ ಕಣ್ಣಿರು ಹಾಕುವುದು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಕರೆ ನೀಡಿದರು.
ಇನ್ನೂ ಕೆಡಿಸಿಸಿ ಬ್ಯಾಂಕ್ಗೆ ಯಾವುದೇ ಕಾರಣಕ್ಕೂ ಎಸ್.ಎಲ್.ಘೊಟ್ನೇಕರ ಅವರನ್ನು ಇನ್ನೊಂದು ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಡಿ ಎಂದು ಬ್ಯಾಂಕ್ನ ನಿರ್ದೇಶಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಗಣಪತಿ ಕರಂಜೆಕರ, ಜೋಯಿಡಾ ಅಧ್ಯಕ್ಷ ಸಂತೋಷ ರೆಡಕರ, ಪ್ರಮುಖರಾದ ಚಂದ್ರು ಕಮ್ಮಾರ, ಗಿರಿಶ ಟೊಸುರ, ಬಸವರಾಜ ಕಳಶೆಟ್ಟಿ, ಶಿವಾಜಿ ನರಸಾನಿ, ಅನಿಲ ಮುತ್ನಾಳ, ನರೇಂದ್ರ ಚವ್ವಾಣ, ದಶರತ ಬಂಡಿವಡ್ಡರ, ವಾಸು ಪೂಜಾರಿ, ವಿಲಾಸ ಯಡವಿ ಇತರರು ಇದ್ದರು.
Leave a Comment