ಹಳಿಯಾಳ:- 70 ವರ್ಷದ ಇತಿಹಾಸದಲ್ಲಿ ಜಿಡಿಪಿ -2.39 ಇಳಿಕೆ ಕಂಡಿದ್ದು ಹಾಗೂ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರು ಸಹ ಡಿಸೈಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೆ ಏರಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಐತಿಹಾಸಕ ದಾಖಲೆಯಾಗಿದೆ ಎಂದು ವ್ಯಂಗ್ಯವಾಡಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಕೇಂದ್ರ ಸರ್ಕಾರಕ್ಕೆ ಜಮೆ ಆಗುವ ನಮ್ಮ ರಾಜ್ಯದ ತೇರಿಗೆ ಹಣ ಎಲ್ಲಿ ಹೋಯಿತು ? ಎಂದು ಪ್ರಶ್ನೀಸಿದರು.
ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಬಿ.ಜೆ.ಪಿ ಸರಕಾರವು ರಾಜ್ಯದಲ್ಲಿ ಆಡಳಿತಕ್ಕೆ ಬಂದು ಒಂದು ವರ್ಷ ಕಳೆದರೂ ಇದುವರೆಗೂ ಯಾವುದೇ ಅಭಿವೃದ್ದಿ ಯೋಜನೆ ಅನುಷ್ಟಾನಕ್ಕೆ ತಂದಿಲ್ಲ ಭ್ರಷ್ಟಾಚಾರದಲ್ಲಿಯೇ ಕಾಲಹರಣ ಮಾಡುತ್ತಿದೆ ಎಂದು ಕಿಡಿ ಕಾರಿದರು.

ಕೇಂದ್ರ ಸರ್ಕಾರದಲ್ಲಿರುವ ಜಿಎಸ್‍ಟಿ ಜಮಾ ಹಣ ಅದರ ರಾಜ್ಯ ಸರ್ಕಾರದ ಪಾಲು 13,764 ಕೋಟಿ ಬಾಕಿ ರಾಜ್ಯ ಸರ್ಕಾರಕ್ಕೆ ಬರಬೇಕಿದೆ. ಆದರೇ ಕೇಂದ್ರ ಸರ್ಕಾರ ಬಾಕಿ ಹಣ ನೀಡಲು ನಿರಾಕರಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಆರ್‍ಬಿಐದಿಂದ ಸಾಲ ತೆಗೆದುಕೊಳ್ಳುವಂತೆ ಹೇಳುತ್ತಿದ್ದು ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು ಇದರಿಂದ ರಾಜ್ಯಕ್ಕೆ ಸಾಲದ ಹೊರೆ ಹೆಚ್ಚಾಗಲಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಬರಬೇಕಾದ ಹಣದ ಬಗ್ಗೆ ಪ್ರಧಾನಿ ಮೊದಿಯವರನ್ನು ಪ್ರಶ್ನೀಸುವ ಧೈರ್ಯ ರಾಜ್ಯದ ಯಾವ ಮಂತ್ರಿಗಳಿಗೂ ಇಲ್ಲ ಎಂದ ಘೊಟ್ನೇಕರ ಬಂಗಾರದ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಬಡವರಿಗೆ ಮದುವೆ ಇತರ ಕಾರ್ಯಗಳಲ್ಲಿ ಬಂಗಾರ ಕೊಳ್ಳಲು ಆಗುತ್ತಿಲ್ಲ ಹೀಗೆ ಬೆಲೆ ಹೆಚ್ಚಾಗುತ್ತಲೇ ಸಾಗಿದರೇ ಮುಂದಿನ ದಿನಗಳಲ್ಲಿ ತಾಮ್ರದ ತಾಳಿ ಮಾಡುವ ದಿನಗಳು ಬರುತ್ತವೆ. ಸೀಮೆಎಣ್ಣೆ ,ಕಬ್ಬಿಣ ಹಾಗೂ ಇತರ ಮೂಲಭೂತ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದರು.
ನಿರುದ್ಯೋಗ ಸಮಸ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಸಾಗುತ್ತಿದೆ. ಆದರೇ ಮನಕಿ ಬಾತ್‍ನಲ್ಲಿಯೇ ಕಾಲ ಕಳೆಯುವ ಮೊದಿಯವರ ಅಚ್ಚೇ ದಿನ್ ಎಲ್ಲಿ ಹೋದವು ಎಂದು ಪ್ರಶ್ನೀಸಿದರು.
ಜಗತ್ತಿನಲ್ಲೇ ಭಾರತ ದೇಶ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ 2ನೇ ಸ್ಥಾನಕ್ಕೆ ಬಂದು ನಿಂತಿದೆ. ಚಪ್ಪಾಳೆ ಹಾಗೂ ಗಂಟೆ ಬಾರಿಸುವುದರಿಂದ ಕೊರೊನಾ ಹೊಗುವುದಿಲ್ಲ ಇದು ಜನರಿಗೆ ಈಗ ತಿಳಿದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದರು.
ಕೊರೊನಾ ಸಂಧರ್ಭದಲ್ಲಿಯೂ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗುವ ಸ್ಥಿತಿಯಲ್ಲಿದ್ದು, ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿದೇ ಎಂದು ಟಿಕಿಸಿದ ಘೊಟ್ನೇಕರ ಅವರು ಕೊರೊನಾ ನಿಯಂತ್ರಣಕ್ಕೆ ಇನ್ನಾದರೂ ಎರಡೂ ಸರ್ಕಾರಗಳು ಯುದ್ದೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ ಎಂದರು.
Leave a Comment