ಅಂಕೋಲಾ: ಹಟ್ಟಿಕೇರಿಯ ಅರಣ್ಯ ಪ್ರದೇಶದಲ್ಲಿ ಜುಗಾರಿ ಆಡುತ್ತಿದ್ದ ಆರೋಪಿಗಳನ್ನು ಇಂದು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾವಿಕೇರಿಯ ಶ್ರೀಧರ ರಾಯ ನಾಯ್ಕ, ಬೆಳಂಬಾರ ತಾಳೇಬೈಲಿನ ರವಿ ಪ್ರಶಾಂತ ಶೆಟ್ಟಿ, ಕೇಣಿಯ ರಘು ವಸಂತ ಬಂಟ, ಬೇಲೆಕೇರಿಯ ವಿನೋದ ಚಂದಾ ಖಾರ್ವಿ ಇವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿAದ 52,690 ರೂ. ನಗದು, ಇಸ್ಪೀಟ್ ಕಾರ್ಡ್, ಮೇಣದಬತ್ತಿ, ಗೋಣಿ ಚೀಲ ವಶಪಡಿಸಿಕೊಂಡಿದ್ದಾರೆ. ಅವರ್ಸಾದ ಪ್ರವೀಣ ನಾಯ್ಕ, ಗೋಪಾಲ ನಾಯ್ಕ ತಲೆಮರೆಸಿಕೊಂಡಿದ್ದಾರೆ.

Leave a Comment