ಕಾರವಾರ: ಹಾರ ಮತ್ತು ಆರೋಗ್ಯದ ಶಿಕ್ಷಣದ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳನ್ನು ಸರಿಯಾಗಿ ಜೋಪಾನ ಮಾಡುವ ಸಾಮಥ್ರ್ಯವನ್ನು ಹೆಚ್ಚಿಸುವ ಕಾರ್ಯವಾಗುತ್ತಿರುವುದು ಶ್ಲಾಘನೀಯ ಎಂದು ಬಾಲ ವಿಕಾಸ ಸಮಿತಿ ಅಧ್ಯೆಕ್ಷೆ ಮನಿಷಾ ನಾಯ್ಕ ಹೇಳಿದರು.

ಅವರು ಚಿತ್ತಾಕುಲಾದ ಕಣಸಗಿರಿ ಬಂದರವಾಡಾ ಅಂಗನವಾಡಿ ಕೇಂದ್ರದಲ್ಲಿ ನಡೆದ “ರಾಷ್ಟ್ರೀಯ ಪೋಷಣಾ ಅಭಿಯಾನ-2020” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಾಗೂ ಗರ್ಭಿಣಿ ಮಹಿಳೆಯರ ಸ್ವಾಸ್ಥ್ಯ ಕಾಪಾಡಲು ಸರ್ಕಾರ ಕೈಗೊಂಡ ಪೋಷಣಾ ಅಭಿಯಾನ ದಿಂದ ಉತ್ತಮ ಪೌಷ್ಟೀಕಾಂಶ ಆಹಾರ ದೊರಕುತ್ತಿದೆ. ಮಗುವಿನ ಸಮರ್ಪಕ ಮಾನಸಿಕ , ಶಾರೀರಿಕ ಅಭಿವೃದ್ದಿ ಯಾಗಲು ಸಹಕಾರಿಯಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆ ಮಾಯಾ ಕಾಣೇಕರ್ ಸ್ವಾಗತಿಸಿ, ಪೋಷಣಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಸುವರ್ಣಾ ನಾಯ್ಕ, ಆಶಾ ಕಾರ್ಯಕರ್ತೆ ದಿವ್ಯಾ ನಾಯ್ಕ, ಲಲಿತಾ ಹಡಪದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರವಾರ ವಲಯ ಅಂಗನವಾಡಿ ಮೇಲ್ವಿಚಾರಕಿ ಎಸ್. ಆರ್ ಜೋಶಿ ನಿರ್ದೇಶಿಸಿದರು. ಅಂಗನವಾಡಿ ಕಾರ್ಯಕರ್ತೆ ಶೈಲಾ ಆರ್. ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ ಗರ್ಭೀಣಿ ಮಹಿಳೆಗೆ “ಸೀಮಂತ” ಕಾರ್ಯಕ್ರಮ ಹಾಗೂ ಮಗುವಿಗೆ ಪೋಷಣೆಯುಕ್ತ ಆಹಾರ ನೀಡುವ ಕಾರ್ಯಕ್ರಮ ಜರುಗಿತು.
Leave a Comment