ಕುಮಟಾ: ಜಿಲ್ಲಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರ ಸಂಘವು ಜಿಲ್ಲೆಯ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಆನ್ಲೈನ್ ಪಾಠ ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಎನ್. ಬಗಲಿ ಅವರು ಇಲ್ಲಿ ಶ್ರೀ ಮಂಜುನಾಥ ಸ್ಟುಡಿಯೋದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಕಾರ್ಯ ಈಗ ಮುಗಿದಿದೆ. ಕೊವಿಡ್- 19 ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತಿಲ.್ಲ ಈ ದಿಶೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ನಿಂತ ನೀರಾಗಬಾರದು. ವಿದ್ಯಾರ್ಥಿಗಳ ವಿಷಯ ಜ್ಞಾನವನ್ನು ತಲುಪಿಸುವ ಉದ್ದೇಶದಿಂದ ಆನ್ಲೈನ್ ಶಿಕ್ಷಣವನ್ನು ಜಿಲ್ಲೆ ಅನುಭವಿ
ಉಪನ್ಯಾಸಕರಿಂದ ನೀಡುತ್ತಿದ್ದೇವೆ. ಕಾಲೇಜಿನ ಪಾಚಾರ್ಯರು, ಉಪನ್ಯಾಸಕರು ವಿದ್ಯಾರ್ಥಿಗಳ ವಾಟ್ಸಪ್ ಗ್ರುಪ್ ಮಾಡಿ ಸಕಾಲದಲ್ಲಿ ಆನ್ಲೈನ್ ಪಾಠ ವಿದ್ಯಾರ್ಥಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದರು.
ಪ್ರತಿ ಕಾಲೇಜಿನ ತರಗತಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ದೂರವಾಣಿ ಸಂಪರ್ಕದಲ್ಲಿದು, ಕಾಲಕಾಲಕ್ಕೆ ವಿದ್ಯಾರ್ಥಿಗಳ ಸಂದೇಹ ನಿವಾರಿಸಬೇಕು. ಆನ್ಲೈನ್ ಕ್ಲಾಸ್ ಯೋಜನೆಯನ್ನು ಪ್ರಾರಂಭಿಸಿದ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಕಾರ್ಯವನ್ನು ಎಸ್.ಎನ್.ಬಗಲಿ ಶ್ಲಾಘಿಸಿದರು.
ರಾಜ್ಯ ಉಪನ್ಯಾಸಕರ ಸಂಘದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ನಾಗರಾಜ ಗಾಂವಕರ ಮಾತನಾಡಿ, ಆನ್ಲೈನ್ ಪಾಠದ
ಯೋಜನೆಗೆ ನಮ್ಮ ಸಂಘದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಪ್ರಾಚಾರ್ಯರ ಸಂಘದ ಅಧ್ಯಕ್ಷ ಜಿ.ಪಿ. ನಾಯಕ ಸ್ವಾಗತಿಸಿ, ಎಲ್ಲಿ ಪ್ರಾಚಾರ್ಯರ ಸಹಕಾರದಿಂದ ಸಭೆಯಲ್ಲಿ ನಿರ್ಧರಿಸಿದಂತೆ ವಿದ್ಯಾರ್ಥಿಗಳ ಕಲಿಕೆಗಾಗಿ ಸಂಘವು
ಕಾಳಜಿಯಿಂದ ಈ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದರು.
ಸಂಘದ ಕಾರ್ಯಾಧ್ಯಕ್ಷ ಪ್ರಕಾಶ ರಾಣೆ ಕಾರವಾರ, ಆರ್. ಎಸ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಾಧವ ಪೂಜಾರಿ, ಸರಸ್ವತಿ ಪಿ.ಯು.ಸಿ ಕಾಲೇಜ ಕುಮಟಾದ ಪ್ರಾಚಾರ್ಯ ಸುಲೋಚನಾ ರಾವ್ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ ಮಾತನಾಡಿ, ಆನ್ಲೈನ್ ಪಾಠದ ಯೋಜನೆ ಪರಿಕ್ರಮದಿಂದ ಪ್ರಾರಂಭಿಸಿದ್ದೇವೆ. ಉತ್ತರ ಕನ್ನಡ ಜಿಲ್ಲಾ ಪ್ರಾಚಾರ್ಯರ ಸಂಘದ ಈ ಯೋಜನೆ ಯಶಸ್ವಿಗೊಳಿಸುವ ಕಾರ್ಯ ವಿದ್ಯಾರ್ಥಿಗಳಲ್ಲದೆ. ಅಂದಿನ ಪಾಠವನ್ನು ವಿದ್ಯಾರ್ಥಿಗಳು ಅದೇ ದಿನ ನೋಡಿ ಅರಿತುಕೊಳ್ಳಬೇಕು ಪಾಠವನ್ನು ಪುನಃ ಪುನಃ ನೋಡಲು ಆನ್ಲೈನ್ ಪಾಠದಲ್ಲಿ ಅವಕಾಶವಿದೆ .ಇದು ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದರು.
ಆನ್ಲೈನ್ ಪಾಠ ಯೋಜನೆಯ ಸಂಚಾಲಕ ಆರ್. ಟಿ. ನಾಯಕ ವಂದಿಸಿದರು. ಆನಂದ ವಾಯ್ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಆರ್. ಎಚ್. ನಾಯ್ಕ, ಎಸ್. ಎಮ್. ನಾಯ್ಕ , ಸಂಜೀವ ನಾಯಕ, ಸುಜಾತ ಶಾನಭಾಗ ಉಪಸ್ಥಿತರಿದ್ದರು.
Leave a Comment