ಹಳಿಯಾಳ: ಸರ್ಕಾರದ ಅನುದಾನಗಳನ್ನು ಕೇವಲ ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸದೇ ಎಲ್ಲಾ ವರ್ಗದ ಬಡವರಿಗೆ ನೀಡುವ ಕೆಲಸ ಸ್ಥಳೀಯ ಅಧಿಕಾರಿಗಳು ಮಾಡಬೇಕು. ಇದರಲ್ಲಿ ಜನಪ್ರತಿನಿಧಿಗಳು ಪಕ್ಷದ ಜನರು ಎಂದು ಗುರುತಿಸಿ ಹಸ್ತಕ್ಷೇಪ ಮಾಡಬಾರದು ಇಲ್ಲವಾದಲ್ಲಿ ಬಡವರಿಗೆ ಮೋಸ ಮಾಡಿದಂತಾಗುತ್ತದೆ ಎಂದು ಹಳಿಯಾಳ ಜೋಯಡಾ ಕ್ಷೇತ್ರದ ಶಾಸಕ ಆರ್ ವ್ಹಿ ದೇಶಪಾಂಡೆ ಹೇಳಿದರು.
ಸೋಮವಾರ ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಅನುದಾನ ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಆಪಾದನೆ ಮಾಡುವ ಬದಲು ಅದನ್ನು ಸಾಭಿತು ಪಡಿಸಬೇಕು. ಕೇವಲ ಪತ್ರಿಕೆ ಹೇಳಿಕೆ ನೀಡಿದರೆ ಸಾಲದು. ಸದ್ಯ ಹಳಿಯಾಳ ಜೋಯಡಾ ತಾಲೂಕಿನಲ್ಲಿ ಆರೋಗ್ಯ ಇಲಾಖೆ, ಪಶು ಇಲಾಖೆ ಹಾಗೂ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರ ಇದನ್ನು ಸರಿದೂಗಿಸಲು ಗಮನಹರಿಸಬೇಕಿದೆ.

ಸಭೆಯಲ್ಲಿ ಶಿಕ್ಷಣ ಸಚಿವರ ಜೊತೆ ಮಾತನಾಡಿ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ವಿವರ ನೀಡಿದರು. ನಮ್ಮ ಅವಧಿಯಲ್ಲಿ ಯಾವ ಶಾಲೆಯಲ್ಲಿಯೂ ಸಹ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಲಾಗಿತ್ತು. ಆದರೆ ಸದ್ಯ ಇದೆಲ್ಲವೂ ಸರಿ ಆಗಬೇಕಿದೆ ಕೇವಲ ಕೋವಿಡ್ ಎಂದು ಹೇಳಿ ಅಭಿವೃದ್ಧಿಗಳು ನಿಲ್ಲಬಾರದು ಎಂದರು.
ಬೇರೆ ರೋಗಿಗಳಿಗೆ ಸಹಕರಿಸಿ : ಆಸ್ಪತ್ರೆಗೆ ಬರುವ ಬೇರೆ ಕಾಯಿಲೆಗಳನ್ನು ತಪಾಸಣೆ ಮಾಡಲು ಬಂದಾಗ ಅವರಿಗೆ ವೈದ್ಯರು ಸಹಕರಿಸಬೇಕು. ಕೇವಲ ಕೊರೊನಾ ನೆಪ ಒಡ್ಡಿ ಬಂದಂತಹ ರೋಗಿಗಳಿಗೆ ಮರಳಿ ಕಳಿಸುವ ಕೆಲಸ ಆಗಬಾರದು. ಕೊರೊನಾ ನಿಯಂತ್ರಣಕ್ಕೆ ತಾಲೂಕಿನ ಎಲ್ಲಾ ಇಲಾಖೆಗಳು ಉತ್ತಮ ಕೆಲಸ ಮಾಡಿದೆ ಅದರೆ ತಾಲೂಕಿನಲ್ಲಿ ಅಸ್ತಮಾ, ಹೃದಯದ ತೊಂದರೆ, ಬಿ.ಪಿ. ಸಕ್ಕರೆ ಕಾಯಲೆಗಳು ಎದುರಿಸುವ ಜನರಿಗೆ ಆಸ್ಪತ್ರೆಯವರು ಅವರಿಗೂ ಸೂಕ್ತ ಸಮಯದಲ್ಲಿ ಚಿಕೆತ್ಸೆ ನೀಡಲು ಸಹಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಹಾರ ಸರಿಯಾದ ಸಮಯಕ್ಕೆ ಬರಲಿ : ಕಳೆದ ಅಗಷ್ಟ ತಿಂಗಳಲ್ಲಿ ಆದ ಮಳೆಯಿಂದ ತಾಲೂಕಿನಲ್ಲಿ ಹಲವಾರು ಮನೆಗಳು ಬಿದ್ದು, ಜನರು ಸಮಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಸರ್ಕಾರ ಸೂಕ್ತ ಸಮಯದಲ್ಲಿ ಪರಿಹಾರ ನಿಡಲಿ ಎಂದು ಹೇಳಿದರು.
ಗ್ಯಾಸ್ ವಿತರಣೆಯಲ್ಲಿ ಮೋಸ: ಈ ಸಂದರ್ಭದಲ್ಲಿ ಮಾತನಾಡಿದ ವಿ.ಪ ಸದಸ್ಯ ಎಸ್ ಎಲ್ ಘೋಟ್ನೆಕರ ಮಾತನಾಡಿ ತಾಲೂಕಿನ ಕೆಲ ಗ್ರಾಮೀಣ ಭಾಗದಲ್ಲಿ ಸರ್ಕಾರದ ಅಡುಗೆ ಗ್ಯಾಸ್ ವಿತರಣೆಯಲ್ಲಿ ಮೋಸ ನಡೆಯುತ್ತಿದೆ. ಕೇವಲ ಒಂದು ಪಕ್ಷಕ್ಕೆ ಮಾತ್ರ ಸಿಮೀತ ಇರುವ ಫಲಾನುಭವಿಗಳಿಗೆ ಮಾತ್ರ ಗ್ಯಾಸ್ ವಿತರಣ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು ಬಡವರು ಎಲ್ಲಾ ಪಕ್ಷದಲ್ಲಿದ್ದಾರೆ. ಅದನ್ನು ಅರಿತುಕೊಂಡು ಅಧಿಕಾರಿಗಳು ಸೂಕ್ತವಾದ ಫಲಾನುಭವಿಗಳಿಗೆ ಆಯ್ಕೆ ಮಾಡಿ ಬಡವರಿಗೆ ಸಹಾಯ ಮಾಡುವಲ್ಲಿ ಗಮನಹರಿಸಬೇಕು. ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪ.ಸದಸ್ಯರಾದ ಕೃಷ್ಣಾ ಪಾಟೀಲ, ಲಕ್ಷ್ಮೀ ಕೊರ್ವೇಕರ, ಮಹೇಶ್ರೀ ಮಿಶಾಳೆ, ತಾ.ಪಂನ ರೀಟಾ ಸಿದ್ದಿ, ಗೀರಿಶ ಟೋಸೂರ, ತಹಶೀಲ್ದಾರ ವಿದ್ಯಾಧರ ಗುಳುಗುಳಿ, ತಾ.ಪ. ಕಾರ್ಯನಿರ್ವಾಹಕ ಅಧಿಕಾರಿ ಪ್ರವಿಣಕುಮಾರ ಸಾಲಿ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಮೀರ ಮುಲ್ಲಾ, ಹಳಿಯಾಳ ದಾಂಡೇಲಿ ಜೋಯಡಾ ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment