ದಾಂಡೇಲಿ: ದಾಂಡೇಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಡಿದೆ. ಕೋವಿಡ್-19ರ ಗಂಭೀರತೆ ಅರಿತು ಅದರ ನಿಯಂತ್ರಣಕ್ಕೆ ನಗರದ ಜನರು ಮುಖ್ಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಮತ್ತು ಸೋಂಕು ಅಂತಿಮ ಹಂತ ತಲುಪುವ ಮೊದಲು ಗಂಟಲು ದ್ರವ ಪರೀಕ್ಷೆ ಮಾಡಿಕೊಳ್ಳುವ ಮೂಲಕ ರೋಗ ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ನುಡಿದರು. ಅವರು ನಗರದ ನಗರ ಸಭೆಯಲ್ಲಿ ಮಂಗಳವಾರ ಪ್ರಗತಿ ಪರೀಶಿಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಹಳಿಯಾಳ ತಾಲುಕಾ ಆರೋಗ್ಯ ಅಧಿಕಾರಿ ಡಾ.ರಮೇಶ ಕದಂ ಕೋವಿಡ್-19 ಬಗ್ಗೆ ನಗರದಲ್ಲಿ 1023 + ಪ್ರಕರಣಗಳು ದಾಖಲಾಗಿವೆ ಅದರಲ್ಲಿ 57 ಪ್ರಕರಣ ಗಂಭೀರ ಪರಿಸ್ಥಿತಿಯಲ್ಲಿದ್ದು ಇದುವರೆಗೆ 16 ಸೋಂಕಿತರು ಸಾವನಪ್ಪಿದ್ದಾರೆ ಎಂದು ಸಭೆಯಲ್ಲಿ ವಿವರಣೆ ನೀಡಿದರು.

Leave a Comment