ಹಳಿಯಾಳ:- ರೈತರ ಮೆಕ್ಕೆಜೋಳ ಬೆಳೆಗೆ ಪ್ರತಿ ಕ್ವೀಟಾಲಗೆ 2500ರಿಂದ 3000 ರ ವರೆಗೂ ದರ ನಿಗದಿ ಮಾಡುವ ಮೂಲಕ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಶೀಘ್ರವೇ ಆರಂಭಿಸಿ ಖರೀದಿ ಪ್ರಕ್ರಿಯೇ ಪ್ರಾರಂಭ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಕೆಂಪುಸೇನೆ ಸಂಘಟನೆ ಆಗ್ರಹಿಸಿದೆ.
ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಬಳಿಕ ಶಾಸಕ ಆರ್ ವಿ ದೇಶಪಾಂಡೆ ಅವರಿಗೂ ಮನವಿ ಸಲ್ಲಿಸಿ ದರ ನಿಗದಿ ಹಾಗೂ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿದರು.
ಮನವಿಯಲ್ಲಿ ಹಳಿಯಾಳ ತಾಲೂಕಾ ವ್ಯಾಪ್ತಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮೆಕ್ಕಜೋಳ ಬೆಳೆ ಕೋಯ್ಲಿಗೆ ಬಂದಿದೆ. ಈ ವರ್ಷ ಮಳೆ ಸಕಾಲಕ್ಕೆ ಆಗದೆ ಬೆಳೆಗಳು ಅಷ್ಟೊಂದು ಇಳುವರಿ ಬಂದಿರುವುದಿಲ್ಲಾ, ಈಗ ಕೊಯ್ಲು ಸಮಯದಲ್ಲಿ ವಿಪರಿತ ಮಳೆಯಿಂದಾಗಿ ಬೆಳೆಗಳು ಅಷ್ಟೊಂದು ಇಳುವರಿ ಬರದೆ ರೈತರು ತೊಂದರೆಗೋಳಗಾಗಿರುತ್ತಾರೆ.

ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದಲ್ಲಾಲಿಗಳು ಮಾತ್ರ ಅತ್ಯಂತ ಕಡಿಮೆ ದರ ಅಂದರೆ ಕ್ವಿಂಟಾಲ್‍ಗೆ 1000 ರಿಂದ 1300 ರ ವರೆಗೆ ದರ ನಿಡಿ ಖರೀಧಿ ಮಾಡುತ್ತಿದ್ದು ರೈತರಿಗೆ ಬಹಳಷ್ಟು ಅನ್ಯಾಯ ಮಾಡುತ್ತಿದ್ದಾರೆ. ಕಳೆದ ವರ್ಷ ಪ್ರತಿ ಕ್ವೀಂಟಾಲ್‍ಗೆ ದರ ರೂಪಾಯಿ. 2300 ರಿಂದ 2500 ರ ವರೆಗೆ ಮಾರಾಟವಾಗಿತ್ತು, ಆದರೆ ಪ್ರಸ್ತುತ ವರ್ಷ ಅರ್ಧಕ್ಕಿಂತ ಕಡಿಮೆ ದರದಲ್ಲಿ ಖರೀದಿ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆಂದು ತಿಳಿದು ಬಂದಿದ್ದು ಇದನ್ನು ದಲಿತ ಸಂಘರ್ಷ ಸಮಿತಿ ಕೆಂಪುಸೇನೆ ಖಂಡಿಸುತ್ತದೆ ಮತ್ತು ಈ ವರ್ಷ ಮೆಕ್ಕೆಜೋಳ ಬೆಲೆ 2500 ರಿಂದ 3000 ರ ತನಕ ದರ ನಿಗದಿ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವಾಗ ಸಂಘಟನೆ ಉತ್ತರ ಕರ್ನಾಟಕ ಅಧ್ಯಕ್ಷ ವಿಬಿ ರಾಮಚಂದ್ರ, ಪ್ರಮುಖ ಪದಾಧಿಕಾರಿಗಳಾದ ಚಂದ್ರಕಾಂತ ಕಲಭಾವಿ, ಜಯಲಕ್ಷ್ಮೀ ಚವ್ಹಾಣ , ಶರಣಪ್ಪಾ ವಡ್ಡರ, ಪರಶುರಾಮ ವಡ್ಡರ, ಶಕೀಲ ಚೌಕಿದಾರ, ರಾಜು ಕುರುಬರ, ಸುರೇಶ ಕಲಭಾವಿ, ಮುಕುಂದ ಕಿನಗೇಕರ, ಅಶೋಕ ಕೆಸರೇಕರ, ಸತ್ತಾರ ಬೆಟಗೇರಿ ಇತರರು ಇದ್ದರು.
Leave a Comment