ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ಗಿಲ್ನೆಟ್ ದೋಣಿಯೊಂದು ಭಾರಿ ಗಾಳಿ ಹಾಗೂ ಅಲೆಯ ಹೊಡೆತಕ್ಕೆ ಸಿಲುಕಿ ದಡಕ್ಕೆ ಬರಲಾಗದ ಸ್ಥಿತಿಯಲ್ಲಿ ನಿರ್ಮಾಣವಾಗಿದ್ದು ನಂತರ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಅಳಿವೆಗೆ ಕರೆ ತರಲಾಗಿದೆ.

ಇಲ್ಲಿನ ಅಳ್ವೇಕೋಡಿ ಬಂದರಿನ ಮೂಲಕ ಮಾದೇವ ತಿಮ್ಮಪ್ಪ ಮೊಗೇರ ಎನ್ನುವವರ ಗಿಲ್ನೆಟ್ ದೋಣಿಯಲ್ಲಿ ನಾಲ್ವರು ಮೀನುಗಾರರು ಮೀನುಗಾರಿಕೆಗೆ ಅರಬ್ಬೀ ಸಮುದ್ರಕ್ಕೆ ತೆರಳಿದ್ದರು. ಮೀನುಗಾರಿಕೆಗೆ ತೆರಳಿದ್ದವರನ್ನು ಸಚಿನ್ ಮೊಗೇರ, ನಾರಾಯಣ ಮೊಗೇರ, ಜ್ಞಾನೇಶ ಮೊಗೇರ ಹಾಗೂ ಹರೀಶ್ ಮೊಗೇರ ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆಯನ್ನು ಮಾಡುತ್ತಿರುವಾಗ ಸಮುದ್ರದಲ್ಲಿ ಒಂದೇ ಸವನೆ ಗಾಳಿ ಹಾಗೂ ಅಲೆಗಳ ಅಬ್ಬರ ಆರಂಭವಾಗಿದೆ. ಗಾಳಿಯ ಹೊಡೆತಕ್ಕೆ ಇನ್ನೇನು ಗಿಲ್ನೆಟ್ ದೋಣಿ ಅಪಾಯಕ್ಕೆ ಸಿಲುಕುವ ಹಂತದಲ್ಲಿರುವಾಗ ಇವರು ಜಾಲಿ ಸಮೀಪದ ಕಾಗೆ ಗುಡ್ಡದ ಹತ್ತಿರ ಆಶ್ರಯ ಪಡೆದು ದೋರವಾಣಿಯ ಮೂಲಕ ತಮಗಾದ ಅಪಾಯದ ಸ್ಥಿತಿಯನ್ನು ಹೇಳಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ರು ಅಪಾಯದಲ್ಲಿರುವ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವೀಯಾಗಿದ್ದಾರೆ. ಕೋಸ್ಟಲ್ ಪೊಲೀಸ್ ಇನ್ಸಪೆಕ್ಟರ್ ನಾಗರಾಜ, ಸಬ್ ಇನ್ಸಪೆಕ್ಟರ್ ಅಣ್ಣಪ್ಪ ಮೊಗೇರ, ಸಿಬ್ಬಂದಿಗಳಾದ ರಾಮದಾಸ ಮೊಗೇರ, ಅಬುಬಕ್ಕರ್ ಮುಂತಾದವರು ಸಹಕರಿಸಿದ್ದರು.
Leave a Comment