ಮುಂಡಗೋಡ : ಡ್ರಗ್ ಮಾಫಿಯಾದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ತಾಲೂಕು ಘಟಕದವರು ಉಪ ತಹಸೀಲ್ದಾರ್ ವಿಜಯಕುಮಾರ ಶೆಟ್ಟೆಪ್ಪನವರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.

ಕೆಲವು ಚಲನಚಿತ್ರ ನಟ-ನಟಿಯರು, ಚಿತ್ರರಂಗಕ್ಕೆ ಸಂಬಂಧಪಟ್ಟವರು, ಉದ್ಯಮಿಗಳು, ಹಲವು ರಾಜಕಾರಣಿಗಳು ಡ್ರಗ್ ಮಾಫಿಯಾದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇವರು ತಪ್ಪಿತಸ್ಥರೆಂದು ಕಾನೂನಿನ ಅಡಿಯಲ್ಲಿ ಸಾಬೀತಾದಲ್ಲಿ ಸಮಾಜದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಚಿತ್ರರಂಗದಿಂದ ಮತ್ತು ರಾಜಕೀಯ ರಂಗದಿಂದ ಮುಕ್ತಗೊಳಿಸಿ ಕಾನೂನು ಕ್ರಮ ಜರುಗಿಸಬೇಕು. ನಮ್ಮ ನಾಡಿನ ಯುವ ಜನತೆ ಇವರನ್ನು ಗೌರವಿಸಿದ್ದಾರೆ. ಉನ್ನತ ಸ್ಥಾನದಲ್ಲಿರುವ ಇವರು ಕನ್ನಡ ಜನತೆಗೆ ಅವಮಾನ ಮಾಡಿದ್ದಾರೆ. ಕ್ಯಾಶಿನೋ ಪಾರ್ಟಿ, ಮೋಜು-ಮಸ್ತಿಗಳಂತಹ ನಶಾ ಲೋಕದಲ್ಲಿ ತೇಲಾಡುತ್ತಿರುವದರಿಂದ ಯುವ ಪೀಳಿಗೆ ಅಡ್ಡ ದಾರಿ ಹಿಡಿಯುವ ದುಃಸ್ಥಿತಿ ಬಂದೊದಗಿದೆ. ಆದ್ದರಿಂದ ಪೊಲೀಸ್ ಇಲಾಖೆ, ಸಿಸಿಬಿ ಇಲಾಖೆಗೆ ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟು ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಕಾನೂನಿನ ಉಗ್ರ ಶಿಕ್ಷೆಯಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಅಯ್ಯಪ್ಪ ಭಜಂತ್ರಿ, ಮಂಜುನಾಥ ನಡಗೇರ, ಸುರೇಶ ಕುರುಬರ, ಅನಿಲ ನಂದಿಗಟ್ಟಿ, ಬಸವರಾಜ ಕುಂದರಗಿ, ರವಿ ಬಳ್ಳಾರಿ, ಸಂತೋಷ ಅಂದಲಗಿ, ಗಣೇಶ ಶಾನಭಾಗ, ಕೃಷ್ಣ ಕುಂದರಗಿ ಇತರರಿದ್ದರು. ಉಪ ತಹಸೀಲ್ದಾರ್ ವಿಜಯಕುಮಾರ ಶೆಟ್ಟೆಪ್ಪನವರ ಮನವಿ ಸ್ವೀಕರಿಸಿದರು.
Leave a Comment