ಕುಮಟ : ಅರಣ್ಯದಲ್ಲಿ ಬೆಳೆದ ಬೆಲೆಬಾಳುವ ಸಾಗವಾನಿ ಮರವನ್ನ ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರೂ ಆರೋಪಿಗಳನ್ನ ಬಂಧಿಸಿರುವ ಘಟನೆ ಕುಮಟ ತಾಲೂಕಿನ ಕತಗಾಲ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ಕತಗಾಲ ಅರಣ್ಯವ್ಯಾಪ್ತಿಯ ಕೋಡಂಬಳ ಪ್ರದೇಶಲ್ಲಿ ಬೆಳೆಯಲಾಗಿದ್ದ ಸಾಗವಾನಿ ಮರವನ್ನ ಕಡಿದು ಸಾಗಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಕತಗಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಇಬ್ಬರೂ ಆರೋಪಿಗಳನ್ನ ಬಂಧಿಸಿದ್ದಾರೆ.
ಅಕ್ರಮ ಸಾಗವಾನಿ ಸಾಗಾಟ ಪ್ರಕರಣದಲ್ಲಿ ಸ್ಥಳೀಯರಾಗಿರುವ ಶ್ರೀಧರ ಗೌಡ ಹಾಗೂ ಮಹೇಶ ಗೌಡ ಎಂಬುವವರನ್ನು ಅರಣ್ಯಾಧಿಕಾರಿಗಳು ಆರೋಪಿಗಳನ್ನ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿ ಎಸಿ ಎಪ್ ಓ ಅವರ ಮಾರ್ಗದರ್ಶನದಲ್ಲಿ ವಲಯಾಧಿಕಾರಿ ಪ್ರಭಾಕರ ಕಾಗಿನೆಲೆ ,ಉಪವಲಯ ಅಧಿಕಾರಿ ವಸಂತ ಕುಮಾರ, ಬಿ ಎನ್ ಬಂಕಾಪುರ , ಅರಣ್ಯ ರಕ್ಷಕ ದಿನೇಶ ಪಡುವಣಿ ,ಸದಾಶಿವ ಪುರಾಣಿಕ ಮಠ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.
Leave a Comment