ಹೊನ್ನಾವರ: ಕೊರೋನಾ ಮಧ್ಯೆ ಪಟ್ಟಣದಲ್ಲಿ ವಾಹನ ಸವಾರರು ಮಾಸ್ಕ ಧರಿಸದೇ ಹೆಲ್ಮೆಟ್ ಬಳಸದೇ ಸಂಚಾರ ನಡೆಸುತ್ತಿದ್ದರು. ಪೋಲಿಸ್ ಇಲಾಖೆ ಹಲವು ಬಾರಿ ಎಚ್ಚರಿಕೆ ನೀಡಿದರೂ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿದ್ದರು. ಇದನ್ನರಿತು ಗುರುವಾರ ಪಿಎಸೈ ಅಶೋಕ ಕುಮಾರ್ ಮತ್ತು ಪಿಎಸೈ ಸಾವಿತ್ರಿ ನಾಯಕ ಸಿಬ್ಬಂದಿಗಳು ಪಟ್ಟಣದ ವಿವಿಧ ಭಾಗದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಸಂಚಾರಿ ನಿಯಮ ಪಾಲಿಸುವ ಜೊತೆ ಕೊರೋನಾ ಮೀತಿಮೀರುತ್ತಿರುವುದರಿಂದ ಸುರಕ್ಷತಾ ದೃಷ್ಟಿಯಿಂದ ಮಾಸ್ಕ ಧರಿಸಬೇಕು. ವಾಹನ ಚಲಾವಣೆ ಮಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಜೊತೆ ತಮ್ಮ ವಾಹನದ ದಾಖಲಾತಿಗಳನ್ನು ಸಮಯಕ್ಕೆ ಸರಿಯಾಗಿ ನವೀಕರಣ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Leave a Comment