ಬೆಂಗಳೂರು: ಬಲವಂತವಾಗಿ ಪ್ರತಿಭಟನೆಗೆ ಇಳಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ(ಎನ್ಡಿಎಂಎ) ಅಡಿ ಕೇಸ್ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಕೆ ನೀಡಿದ್ದಾರೆ.

ಬಂದ್ ಸಂಬಂಧ ನಾವು ಯಾರಿಗೂ ಅನುಮತಿಯನ್ನು ನೀಡಿಲ್ಲ. ನಮ್ಮಿಂದ ಯಾರೂ ಅನುಮತಿಯನ್ನು ಪಡೆದಿಲ್ಲ. ನಾವು ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ ಎಂದು ಹೇಳಿದರು.ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಲು ಯತ್ನಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರಿಂದ ಬಾಂಡ್ ಬರೆಸಿಕೊಳ್ಳುತ್ತೇವೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ ಅವರೇ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು.47 ಕೆಎಸ್ಆರ್ಪಿ, 26 ಸಿಎಆರ್ ತುಕಡಿ ಸೇರಿದಂತೆ ನಗರದ ಎಲ್ಲಾ ಪೊಲೀಸರನ್ನು ನಾಳಿನ ಬಂದೋಬಸ್ತ್ ಗೆ ನಿಯೋಜನೆ ಮಾಡುತ್ತೇವೆ. ನಗರದ ಬೇರೆ ಬೇರೆ ಕಡೆಗಳಿಂದ ಹೊರಡುವ ಪ್ರತಿಭಟನಾ ಮೆರವಣಿಗೆಗೆ ಅವಕಾಶ ಇಲ್ಲ. ಟ್ರಾಫಿಕ್ ಜಾಮ್ ಆಗುವ ಹಿನ್ನೆಲೆ ಮೆರವಣಿಗೆಗೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.ಮುಂಜಾಗೃತ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗುತ್ತದೆ. ಒಂದೊಂದು ಡಿವಿಷನ್ ಗೆ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ ಈಗಾಗಲೇ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿದ್ದೇವೆ. ಸಂಜೆ ಕೂಡ ಒಂದು ಸುತ್ತಿನ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು. ಕಾಯ್ದೆ ಏನು ಹೇಳುತ್ತೆ?:51ನೇ ವಿಧಿ: ಸರಿಯಾದ ಕಾರಣ ಇಲ್ಲದೇ ಸರ್ಕಾರದ ಆದೇಶ ಪಾಲಿಸಲು ನಿರಾಕರಿಸುವ ವ್ಯಕ್ತಿಗೆ 1 ವರ್ಷದ ಜೈಲು ಶಿಕ್ಷೆ ಅಥವಾ ದಂಡ/ಆದೇಶ ಪಾಲಿಸದೇ ವ್ಯಕ್ತಿಯ ಜೀವಹಾನಿ ಇಲ್ಲವೇ ಅಪಾಯಕ್ಕೆ ದೂಡಿದರೆ 2 ವರ್ಷದವರೆಗೆ ಜೈಲು52ನೇ ವಿಧಿ: ಸರ್ಕಾರದಿಂದ ಪರಿಹಾರ, ಸಹಾಯಧನ ಪಡೆಯಲು ತಪ್ಪು ಮಾಹಿತಿ ನೀಡಿದರೆ ಅಂತಹ ದಂಡ, 2 ವರ್ಷ ಜೈಲು
Leave a Comment