ಉತ್ತಮಾ, ವಿಷನಾಶಿನಿ, ಕಡುಲಾ, ನಾಗಧಮನಿ, ವಿಷಮಂಗಾರಿ, ಈಶ್ವರ್ ಮೂಲ್, ಈಶ್ವರಮೂಲಿ, ಈಶ್ವರ ವೇರು, ಹುಕಬೆಲ್, ಗರುಡಕ್ಕೊಡಿ, ಗರಲಿಕಾ, ಗರುಡಿ,ವಿಷರ್ಪಿಣಿ, ಸ್ನೇಕ್ ರೂಟ್, ಈಶ್ವರೀಬೇರು ಎಂಬ ಹೆಸರುಗಳಿಂದ ಕರೆಯುತ್ತಾರೆ. ಬೆಟ್ಟಗುಡ್ಡ ಪ್ರದೇಶ, ಹುಲ್ಲುಗಾವಲು ಕಾಡುಗಳು, ಪಾಳುಭೂಮಿ, ರಸ್ತೆಗಳ ಪಕ್ಕ, ಬೇಲಿಗಳ ಮೇಲೆ ಬಳ್ಳಿಯಂತೆ ಹಬ್ಬಿ 10-12 ಅಡಿ ಬೆಳೆಯುತ್ತೆ. ಇದು ವಾರ್ಷಿಕಸಸ್ಯವಾಗಿದ್ದು, ಇದರಲ್ಲಿ ಕಪ್ಪು ಈಶ್ವರಿ ಮತ್ತು ಬಿಳಿ ಈಶ್ವರಿ ಎಂಬ ಎರಡು ಪ್ರಭೇದಗಳಿದ್ದು,


ಎರಡರಲ್ಲೂ ಅಪಾರ ಔಷಧೀಯ ಗುಣಗಳು ತುಂಬಿವೆ. ಶುಭದಿನ ಈಶ್ವರಿ ಬೇರನ್ನು ತಂದು ಪೂಜೆಮಾಡಿ ಮನೆಯ ಬಾಗಿಲಿಗೆ ಕಟ್ಟಿದರೆ ಹಾವು ಇನ್ನೂ ಮುಂತಾದ ವಿಷಜಂತುಗಳು ಮನೆಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಈಗಲೂ ಹಳ್ಳಿಗಳಲ್ಲಿದೆ. ಈ ಗಿಡವನ್ನು ಈಶ್ವರನ ಪ್ರತಿರೂಪವೆಂದೇ ಪೂಜನೀಯಭಾವದಿಂದ ಕಾಣುತ್ತಾರೆ. ಈಶ್ವರನೇ ಜನರ ಒಳಿತಿಗಾಗಿ ಸೃಷ್ಠಿಸಿದ ಎಂದು ಪೂರ್ವಿಕರು, ಋಷಮುನಿಗಳು ಹೇಳಿದ್ದಾರೆ. ಭಾರತದಲ್ಲಿ ಪುರಾತನ ಕಾಲದಿಂದಲೂ ಆಯುರ್ವೇದ, ಸಿದ್ಧ, ಹಿಂದೂ ಯುನಾನಿ, ಪಾರಂಪರಿಕ ಔಷಧೀಯ ಪದ್ಧತಿಗಳಲ್ಲಿ ವಿಷನಿವಾರಕವಾಗಿ ಬಳಸುತ್ತಾ ಬಂದಿದ್ದಾರೆ.


ಇದು ಹಾವು, ಚೇಳು ಇನ್ನೂ ಮುಂತಾದ ವಿಷಜಂತುಗಳ, ವಿಷ ನಿವಾರಣೆಯಲ್ಲಿ ರಾಮಬಾಣದಂತೆ ಕೆಲಸಮಾಡುತ್ತೆ ಎಂದು ಬಲ್ಲವರು ಹೇಳುತ್ತಾರೆ ಹಾಗೂ ಅನೇಕ ಹಳೆಯ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಹಾವು, ಚೇಳು ಇನ್ನೂ ಮುಂತಾದ ವಿಷ ಜಂತುಗಳು ಕಚ್ಚಿದ್ದಾಗ, ಈಶ್ವರಿ ಬೇರಿನ ಗಂಧತೇಯ್ದು, ಗಾಯದ ಮೇಲೆ ಲೇಪಿಸಬೇಕು, ಅದು ಸ್ವಲ್ಪ ಸಮಯದ ನಂತರ ಕಪ್ಪುಗಾಗುತ್ತೆ, ಅದನ್ನು ನೀರಿನಿಂದ ತೊಳೆದು ಮತ್ತೆಮತ್ತೆ ಗಂಧವನ್ನು ಲೇಪಿಸುತ್ತಿರಬೇಕು, ವಿಷ ನಿವಾರಣೆಯಾಗುತ್ತಿದ್ದಂತೆ ಗಂಧ ಕಪ್ಪಾಗುವುದಿಲ್ಲ. ಒಂದು ಚಮಚ ಇದೇ ಗಂಧವನ್ನು ಎರಡು ಗಂಟೆಗೊಮ್ಮೆ ಚಿಟಿಕೆ ಕಾಳುಮೆಣಸಿನ ಪುಡಿ ಬೆರಸಿ ಹೊಟ್ಟೆಗೆ ಕೊಡಬೇಕು. ತಕ್ಷಣ ಪ್ರಾಣಾಪಾಯದಿಂದ ಪಾರಾಗುತ್ತಾರೆ. ಆನಂತರ ಆಸ್ಪತ್ರೆಗೆ ಸೇರಿಸಬಹುದು. ಒಂದು ಲೋಟ ನೀರಿಗೆ 1 ಚಮಚ ಬೇರಿನ ಚೂರ್ಣವನ್ನು ಹಾಕಿ, ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ,1/2 ಲೋಟ ನೀರಾದಾಗ ಕೆಳಗಿಳಿಸಿ, ಉಗರು ಬೆಚ್ಚಗಾದಾಗ ಸೋಸಿಕೊಂಡು, 1 ಚಮಚ ಜೇನುತುಪ್ಪ ಅಥವಾ ಕಲ್ಲುಸಕ್ಕರೆ ಕಲಸಿ ಕುಡಿದರೆ ಕೀಲುನೋವು, ವಾತನೊವು ವಾಸಿಯಾಗುತ್ತೆ.( ಒಂದು ವಾರ ಸೇವಿಸಬೇಕು). ಈ ಗಿಡದ ಎಲೆಗಳನ್ನು ನೀರಿನಲ್ಲಿ ಗಂಧತೇಯ್ದು ಕೀಲುನೋವು ಇರುವ ಕಡೆ ಲೇಪನ ಮಾಡಿದರೆ, ನೋವು ನಿವಾರಣೆಯಾಗುತ್ತೆ. ಈಶ್ವರಿ ಎಲೆಗಳಿಗೆ ಚಿಟಿಕೆ ಅರಸಿಣ ಸೇರಿಸಿ, ನುಣ್ಣಗೆ ಅರೆದು, ಹಣೆಗೆ ಲೇಪನ ಮಾಡಿದರೆ, ತಲೆನೋವು ನಿವಾರಣೆಯಾಗುತ್ತೆ. ಈಶ್ವರಿ ಎಲೆ ಅಥವಾ ಬೇರನ್ನು ದಿನವು ಸ್ವಲ್ಪಸ್ವಲ್ಪ ಜಗಿದು ನುಂಗುತ್ತಿದ್ದರೆ, ಮಧುಮೇಹ ಹತೋಟಿಗೆ ಬರುತ್ತೆ. ಹೊಟ್ಟೆಯಲ್ಲಿನ ಜಂತುಹುಳು, ಇತರೆ ಕ್ರಿಮಿಗಳು ಸತ್ತು ಮಲದಲ್ಲಿ ಹೊರಬರುತ್ತವೆ. ಈಶ್ವರಿ ಬೇರನ್ನು, ಚಿಟಿಕೆ ಅರಸಿಣ ಹಾಗು ನಿಂಬೆರಸದಲ್ಲಿ ಗಂಧತೇಯ್ದು, ಹುಳುಕಡ್ಡಿ, ನವೆ, ಗಜ್ಜಿಯ ಮೇಲೆ ಲೇಪನ ಮಾಡುತ್ತಿದ್ದರೆ, ಶೀಘ್ರ ಗುಣವಾಗುತ್ತೆ. ಈಶ್ವರಿ ಬೇರು ಹಾಗು ತಾಜಾ ಶುಂಠಿಯನ್ನು ಹಸುವಿನ ಗಂಜಲ ಅಥವಾ ಸುಣ್ಣದ ತಿಳಿನೀರಿನಲ್ಲಿ ಗಂಧತೇಯ್ದು ಹೊರಲೇಪನವಾಗಿ, ಲೇಪಿಸುವುದರಿಂದ ಹುಳುಕಡ್ಡಿ, ನವೆ, ಗಜ್ಜಿ ಗುಣವಾಗುತ್ತೆ.( ಬರಿಬೇರಿನ ಗಂಧವನ್ನು ಒಂದು ಚಮಚದಂತೆ ಹೊಟ್ಟೆಗೂ ಕೊಡಬಹುದು) ಇದು ಚರ್ಮವ್ಯಾಧಿಗಳಿಗೆ ದಿವೌಷಧಿ.


ಚರ್ಮವ್ಯಾಧಿಗಳು ಗುಣವಾಗಲು ಅತ್ಯದ್ಭುತವಾಗಿ ಕೆಲಸ ಮಾಡುತ್ತೆ. ಎಲೆ ಅಥವಾ ಬೇರನ್ನು ತಂದು, ಸ್ವಲ್ಪ ಅರಸಿಣ, ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಕಷಾಯಮಾಡಿ, ಹೊಟ್ಟೆಗೆ ಕುಡಿಸಿದರೆ ವಿಷಜಂತುಗಳು ಕಚ್ಚಿದಾಗ ದೇಹದಲ್ಲಿ ಸೇರಿರುವ ವಿಷ ನಿವಾರಣೆಯಾಗುತ್ತೆ ಕಣ್ಣಿನ ರೆಪ್ಪೆಯಲ್ಲಾಗುವ ವ್ರಣಗಳಿಗೆ, ಈಶ್ವರಿ ಬೇರಿನ ಗಂಧತೇಯ್ದು ಲೇಪನ ಮಾಡುತ್ತಿದ್ದರೆ ಬೇಗ ವಾಸಿಯಾಗುತ್ತೆ. ಈಶ್ವರಿ ಬೇರನ್ನು ತಂದು ಶುಭ್ರಗೊಳಿಸಿ, ನೆರಳಲ್ಲಿ ಒಣಗಿಸಿ, ವಸ್ತ್ರಗಾಲಿತ ಚೂರ್ಣಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ ಬಿಸಿನೀರಿನಲ್ಲಿ 1 ಚಮಚ ಚೂರ್ಣ ಕಲಸಿ ಕುಡಿಯುತ್ತಿದ್ದರೆ ಅಧಿಕ ರಕ್ತದೊತ್ತಡ ಹತೋಟಿಗೆ ಬರುತ್ತೆ. ಕೆಲವು ಹೆಣ್ಣುಮಕ್ಕಳು 15 ವರ್ಷ ಮೇಲ್ಪಟ್ಟರು ಋತುಮತಿಯಾಗುವುದಿಲ್ಲ, ಅಂತವರಿಗೆ ಈಶ್ವರಿ ಬೇರಿನ ಚೂರ್ಣ, ಕಾಳುಮೆಣಸಿನ ಚೂರ್ಣದಿಂದ ದಿನವು ಕಷಾಯ ಮಾಡಿ ಕೊಡುತ್ತಾ ಬಂದರೆ ಬೇಗನೆ ಋತಮತಿಯರಾಗುತ್ತಾರೆ. ಸೂಚನೆ:- ಈಶ್ವರಿ ಗಿಡವನ್ನು ಔಷಧಿಯಾಗಿ ಉಪಯೋಗಿಸುವ ಮೊದಲು ಆಯುರ್ವೇದ ಪಂಡಿತರು ಅಥವಾ ವೈದ್ಯರ ಸಲಹೆಯನ್ನು ತಪ್ಪದೆ ಪಡೆದುಕೊಳ್ಳಿ. ” ಈಶ್ವರಿ ಬೇರಿನ ಮಹಿಮೆ ಅಪರಮಿತ
Leave a Comment