• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕಾ ಘಟಕದ ವತಿಯಿಂದ ಕುಮಟಾ ವಾ.ಕ.ರ.ಸಾ. ಘಟಕಕ್ಕೆ ಮನವಿ ಸಲ್ಲಿಕೆ

October 6, 2020 by Sachin Hegde Leave a Comment

ಕುಮಟಾ: ಲಾಕ್​ಡೌನ್ ಸಡಿಲಿಕೆ ಬಳಿಕವೂ ತಾಲೂಕಿನ ಹಲವು ಗ್ರಾಮೀಣ ಭಾಗಗಳಿಗೆ ಬಸ್ ಸಂಚರಿಸುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆಗೊಳಗಾಗುತ್ತಿದ್ದು, ದಿನಕ್ಕೊಮ್ಮೆಯಾದರೂ ಮೊದಲಿದ್ದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕಾ ಘಟಕದ ವತಿಯಿಂದ ಕುಮಟಾ ವಾ.ಕ.ರ.ಸಾ. ಘಟಕಕ್ಕೆ ಮನವಿ ಸಲ್ಲಿಸಲಾಯಿತು.

IMG 20201006 WA0110 1


ಜೆ.ಡಿ.ಎಸ್ ಮುಖಂಡ  ಸೂರಜ  ನಾಯ್ಕ ಸೋನಿ ಮಾತನಾಡಿ, ಲಾಕ್​ಡೌನ್ ಸಂದರ್ಭದಲ್ಲಿ ಆದಾಯವಿಲ್ಲದೇ, ಮನೆಯಲ್ಲಿದ್ದ ಗ್ರಾಮೀಣ ಭಾಗದ ಬಡ ಜನತೆ ಲಾಕ್​ಡೌನ್ ತೆರವಿನ ಬಳಿಕ ಅನಿವಾರ್ಯವಾಗಿ ಬೇರೆಬೇರೆ ಪ್ರದೇಶಗಳಲ್ಲಿ, ಪಟ್ಟಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರು ಹಾಗೂ ಕುಗ್ರಾಮದವರು ಪ್ರತಿನಿತ್ಯ ಬಸ್ ವ್ಯವಸ್ಥೆಯಿಲ್ಲದೇ, ಪರದಾಡುತ್ತಿದ್ದಾರೆ. ಈ ಬಗ್ಗೆ ವಾಕರಸಾ ಅಧಿಕಾರಿಗಳನ್ನು ಕೇಳಿದರೆ ಆದಾಯದ ಕಾರಣದಿಂದ ಬಸ್ ಸಂಚಾರ ನಿಲ್ಲಿಸಲಾಗಿದೆ ಎನ್ನುತ್ತಾರೆ. ಕೂಡಲೇ ಮೊದಲಿದ್ದ ಎಲ್ಲ ಭಾಗದ ಗ್ರಾಮೀಣ ಪ್ರದೇಶಗಳಿಗೆ ದಿನಕ್ಕೊಂದರಂತೆಯಾದರೂ ಬಸ್ ಸೇವೆ ನೀಡಬೇಕು. ಇಲ್ಲವಾದರೆ ಗ್ರಾಮೀಣ ಭಾಗದ ಜನತೆಯೊಂದಿಗೆ ತಾಲೂಕಾ ಜೆಡಿಎಸ್ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಜಿ.ಪಂ ಸದಸ್ಯ ಪ್ರದೀಪ ನಾಯಕ ದೇವರಬಾವಿ ಮಾತನಾಡಿ, ಕನಿಷ್ಟ ಪಕ್ಷ ಎಲ್ಲ ಗ್ರಾಮೀಣ ಪ್ರದೇಶದ ಬಸ್​ಗಳನ್ನು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲ ಬಿಡಬೇಕು. ಆದಾಯ ಸಮಸ್ಯೆಯಾದರೆ ಎರಡು ಮೂರು ಮಾರ್ಗಗಳನ್ನು ಸೇರಿಸಿ ಒಂದೇ ಬಸ್ ಬಿಟ್ಟರೂ ಜನರಿಗೆ ಅಷ್ಟರಮಟ್ಟಿಗೆ ತೊಂದರೆಯಾಗದು. ಆದಾಯದ ನೆಪವೊಡ್ಡಿ ಜನರಿಗೆ ಮೂಲಭೂತ ಸೌಲಭ್ಯದಿಂದ ವಂಚಿಸಿ ಅನ್ಯಾಯ ಮಾಡಬಾರದು ಎಂದು ಹೇಳಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ ಮಾತನಾಡಿ, ಕೊರೊನಾ ತಡೆ ಕಾರಣಕ್ಕೆ ಲಾಕಡೌನ್ ಸಂದರ್ಭದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಲಾಕ್​ಡೌನ್ ತೆರವಾದ ಬಳಿಕ ಕೆಲವೊಂದು ಗ್ರಾಮೀಣ ಬಸ್ ಸಂಚಾರ ಮಾತ್ರ ಚಾಲ್ತಿಯಲ್ಲಿದೆ. ಪಟ್ಟಣದಿಂದ ದೂರದೂರದ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲವೇ ಇಲ್ಲ. ಅಂತಹ ಪ್ರದೇಶಗಳಿಗೂ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸಾರಿಗೆ ಘಟಕದ ವ್ಯವಸ್ಥಾಪಕಿ ಸೌಮ್ಯ ನಾಯಕ ಅನುಪಸ್ಥಿತಿಯಲ್ಲಿ ಘಟಕದ ನಿಂಯತ್ರಣಾಧಿಕಾರಿ ಶಿವಾನಂದ ನಾಯ್ಕ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಪ್ರಮುಖರಾದ ಅಣ್ಣಪ್ಪ ನಾಯ್ಕ, ಮಂಜು ಜೈನ್, ಆಲ್ವರಿಸ್, ಚಂದ್ರಹಾಸ ನಾಯ್ಕ, ಯಶವಂತ, ಸಂತೋಷ ಸೇರಿದಂತೆ ಇನ್ನಿತರರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Kumta News

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,118 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...