ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಕೊರೊನಾ ಮಹಾಮಾರಿಗೆ ವೃದ್ದನೊರ್ವ ಬಲಿಯಾಗುವ ಮೂಲಕ ಹಳಿಯಾಳ ತಾಲೂಕು ಒಂದರಲ್ಲೇ ಕೊರೊನಾಕ್ಕೆ ಸಾವಿಗಿಡಾದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ತಾಲೂಕಿನ ಯಡೋಗಾ ಗ್ರಾಮದ 80 ವರ್ಷದ ವೃದ್ದ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಂದರ್ಭದಲ್ಲಿ ವೃದ್ದನಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರ ತಾಲೂಕಿನ ತೇರಗಾಂವ ಗ್ರಾಮದ ಓರ್ವರಲ್ಲಿ ಮಾತ್ರ ಸೊಂಕು ದೃಢಪಡುವ ಮೂಲಕ ಹಳಿಯಾಳ ತಾಲೂಕಿನ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 616ಕ್ಕೆ ಏರಿಕೆಯಾಗಿದ್ದರೇ ಗುಣಮುಖರಾದವರ ಸಂಖ್ಯೆ 557ಕ್ಕೆ ತಲುಪಿದೆ. ಸದ್ಯ ತಾಲೂಕಿನಲ್ಲಿ 44ಜನ ಸಕ್ರಿಯ ಸೊಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.
Leave a Comment