10-ಸ್ಥಾನ ಘೊಟ್ನೇಕರ ಬೆಂಬಲಿತರು, ಬಿಜೆಪಿ ಬೆಂಬಲಿತ-1, ಎಸ್ಟಿ ಸ್ಥಾನಕ್ಕೆ ನಾಮಪತ್ರವೇ ಸಲ್ಲಿಕೆಯಾಗಿಲ್ಲ, 1 ಸ್ಥಾನದಲ್ಲಿ ಪೈಪೋಟಿ.
ಹಳಿಯಾಳ:- ಹಳಿಯಾಳ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಎಪಿಸಿಎಮ್ಎಸ್-ಮಾರ್ಕೇಟಿಂಗ್ ಸೊಸೈಟಿ) ಆಡಳಿತ ಮಂಡಳಿಗೆ 10 ಸ್ಥಾನಗಳಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಅರ್ಹತೆ ಪಡೆಯುವ ಮೂಲಕ ಟಿಎಪಿಸಿಎಂಎಸ್ನಲ್ಲಿ ಮತ್ತೇ ಕಾಂಗ್ರೇಸ್ ಬೆಂಬಲಿತರ ಪಾರುಪತ್ಯ ಮುಂದುವರೆಯುವುದು ಸ್ಪಷ್ಟವಾಗಿದೆ.

ಒಟ್ಟೂ 13 ಸದಸ್ಯ ಬಲದ ಟಿಎಪಿಸಿಎಂಎಸ್ ಸಂಘದಲ್ಲಿ ‘ಅ’-ವರ್ಗ ಅಂದರೇ ರೈತರ ಸೇವಾ ಸಹಕಾರಿ ಸಂಘ(ಸೊಸೈಟಿ)ಗಳಿಂದ 5 ಸ್ಥಾನ ಹಾಗೂ ‘ಬ’-ವರ್ಗದಲ್ಲಿ 2 ಸಾಮಾನ್ಯ, 2 ಮಹಿಳೆ, ಪರಿಶಿಷ್ಠ ಜಾತಿ-1, ಪ.ಪಂಗಡ-1, ಹಿಂದುಳಿದ ಅ-ವರ್ಗ-1 ಹಾಗೂ ಬ ವರ್ಗ-1 ಹೀಗೆ ಒಟ್ಟೂ 8 ಸ್ಥಾನ ಒಟ್ಟಾರೇ 13 ನಿರ್ದೇಶಕ ಸ್ಥಾನಗಳಿಗೆ ದಿ.18 ರಂದು ಚುನಾವಣೆ ಘೊಷಣೆಯಾಗಿದ್ದು ಇಲ್ಲಿ 228 ಜನ ಮತದಾರರಿದ್ದು, ನಾಮಪತ್ರ ಸಲ್ಲಿಸಲು ಶನಿವಾರ ಕೊನೆಯದಿನವಾಗಿತ್ತು. ನಾಮಪತ್ರ ಹಿಂಪಡೆಯಲು ದಿ.13 ಕೊನೆಯ ದಿನವಾಗಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶನಿವಾರ 10 ಸ್ಥಾನಗಳಲ್ಲಿ ‘ಅ’ ವರ್ಗದಲ್ಲಿ ತೇರಗಾಂವನ ತವನಪ್ಪಾ ಮುನವಳ್ಳಿ, ಹಳಿಯಾಳದ ಬಾಳಕೃಷ್ಣ ಶಹಾಪುರಕರ, ಕಾವಲವಾಡದ ವಿಷ್ಣು ಮಿಶಾಳೆ, ನಾಗಶೇಟ್ಟಿಕೊಪ್ಪದ ತುಕಾರಾಮ ಗೌಡಾ ಮತ್ತು ದಾಂಡೇಲಪ್ಪ ಸೋಸೈಟಿಯ ಮಾರುತಿ ಕಾಮ್ರೇಕರ ಹಾಗೂ ಬ-ವರ್ಗದಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಮೇಘರಾಜ ಪಾಟೀಲ್, ಅನಂತ ಲಕ್ಷ್ಮಣ ಘೋಟ್ನೇಕರ, ಮಹಿಳಾ ಕ್ಷೇತ್ರಕ್ಕೆ- ಜ್ಯೋತಿ ಗರಗ, ನಿರ್ಮಲಾ ಪಾಟೀಲ್, ಪ್ರವರ್ಗ-ಬ ಕ್ಷೇತ್ರಕ್ಕೆ ಸುಭಾಷ ಶಿಂಧೆ ಒಂದೊಂದು ಸ್ಥಾನಕ್ಕೆ ಒಬ್ಬರಂತೆ ಘೊಟ್ನೇಕರ ಬೆಂಬಲಿತರು ನಾಮಪತ್ರ ಸಲ್ಲಿಸಿದ್ದು ಇಲ್ಲಿ ಪ್ರತಿಸ್ಪರ್ದಿಗಳಿಲ್ಲದೇ ಈ 10 ಜನ ನಿರ್ದೇಶಕರಾಗಿ ಆಯ್ಕೆಯಾಗುವ ಅರ್ಹತೆ ಹೊಂದಿದ್ದಾರೆ.
ಪರಿಶಿಷ್ಠ ಜಾತಿ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಬೆಂಬಲಿತ ಓರ್ವ ಸದಸ್ಯ ಪ್ರಕಾಶ ಕಲ್ಲಪ್ಪಾ ಕೊರವರ ನಿರ್ದೇಶಕರಾಗಿ ಪುನರಾಯ್ಕೆಯಾಗಿದ್ದಾರೆ.
ದಿ.12 ಸೋಮವಾರ ನಾಮಪತ್ರ ಪರಿಶೀಲನೆ ಮಾಡಲಾಗಿದ್ದು ಎಲ್ಲ ನಾಮಪತ್ರಗಳು ನಿಯಮಾನುಸಾರ ಇದ್ದು ಸ್ವೀಕೃತವಾಗಿವೆ. 11 ಜನರು ಅವಿರೋಧವಾಗಿ ಆಯ್ಕೆಯಾದಂತಾಗಿದ್ದು ಅಧಿಕೃತ ಘೋಷಣೆಯೊಂದೆ ಬಾಕಿ ಉಳಿದಿದೆ. ಒಂದು ಬಿಜೆಪಿ ಬೆಂಬಲಿತ ಮತ್ತು ಒಟ್ಟೂ 10 ಸ್ಥಾನಗಳಿಗೆ ಪ್ರತಿಸ್ಪರ್ದಿಗಳಿಲ್ಲದೇ ಚುನಾವಣೆ ಎದುರಿಸದೆಯೇ ಅವಿರೋಧವಾಗಿ ಆಯ್ಕೆಯಾಗುವ ಅದೃಷ್ಟ ಅಭ್ಯರ್ಥಿಗಳಿಗೆ ಒಲಿದು ಬಂದಿದೆ.
ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿ ಯಾರು ನಾಮಪತ್ರ ಸಲ್ಲಿಸದೆ ಇರುವುದುರಿಂದ ಆ ಕ್ಷೇತ್ರದ ನಿರ್ದೇಶಕ ಸ್ಥಾನ ಖಾಲಿ ಉಳಿದಂತಾಗಿದೆ.
‘ಪ್ರವರ್ಗ-ಅ’ ಕ್ಷೇತ್ರಕ್ಕೆ ಘೊಟ್ನೇಕರ ಬೆಂಬಲಿತ ಅಷ್ಪಾಕಅಮ್ಮದ ಪುಂಗಿ ಹಾಗೂ ಹಿರಿಯ ಸದಸ್ಯ ಅಶೋಕ ಮೇಟಿ ನಡುವೆ ಸ್ಪರ್ದೆ ಏರ್ಪಟ್ಟಿದೆ. ಇನ್ನೂ ದಿ.13 ಮಂಗಳವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದರಿಂದ ಮಂಗಳವಾರದ ಬೆಳವಣಿಗೆಯಲ್ಲಿ ಒಬ್ಬರು ನಾಮಪತ್ರ ಹಿಂಪಡೆದರೇ ಚುನಾವಣೆ ನಡೆಯದೆಯೇ ಎಲ್ಲರೂ ಅವಿರೋಧವಾಗಿ ಆಯ್ಕೆಯಾದಂತಾಗುತ್ತದೆ ಇಲ್ಲವೇ ಒಂದು ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೇ ನಡೆಯಲಿದೆ.
ರೈತರ ಸಹಕಾರಿ ಸಂಘ(ಸೊಸೈಟಿ)ಗಳ ಪ್ರತಿನಿಧಿಯಾಗಿ 5 ಸದಸ್ಯರು ಹಾಗೂ ಮತದಾರ ಕ್ಷೇತ್ರದಲ್ಲಿ 5 ಹೀಗೆ ಘೊಟ್ನೇಕರ ಬೆಂಬಲಿ 10 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಅರ್ಹತೆ ಹೊಂದಿದ್ದಾರೆ. ಕಾಂಗ್ರೇಸ್ನ ಹಿಂದಿನ ಆಡಳಿತ ಮಂಡಳಿಯ ಕೆಲವು ಸದಸ್ಯರು ಮತ್ತೊಮ್ಮೆ ನಿರ್ದೇಶಕರಾಗುವ ಅವಕಾಶ ಪಡೆದಿದ್ದರೇ ಇನ್ನು ಕೆಲವರನ್ನು ಕೈ ಬಿಡಲಾಗಿದ್ದು ಹೊಸಬರಿಗೆ ಅವಕಾಶ ನೀಡಲಾಗಿದೆ.
ಟಿಎಪಿಸಿಎಮ್ಎಸ್ ಸಂಘದ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಪಿಐ ಮಾನೆ ಚುನಾವಣೆ ಪ್ರಕ್ರಿಯೇ ನಡೆಸುತ್ತಿದ್ದಾರೆ.
ಈ ಟಿಎಪಿಸಿಎಮ್ಎಸ್ ಸಂಘದಲ್ಲಿ ರೈತರಿಗೆ ವಿತರಿಸುವ ಗೊಬ್ಬರದ ವಿಷಯದಲ್ಲಿ 27 ಲಕ್ಷ ಭ್ರಷ್ಟಾಚಾರ ನಡೆದಿದ್ದು ತನಿಖೆ ನಡೆಸುವಂತೆ ಹಳಿಯಾಳ ಬಿಜೆಪಿ ಘಟಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತ್ತು. ಮರುದಿನವೇ ಕಾಂಗ್ರೇಸ್ ಬೆಂಬಲಿತ ಆಡಳಿತ ಮಂಡಳಿ ಸುದ್ದಿಗೊಷ್ಠಿಯಲ್ಲಿ 27 ಲಕ್ಷ ಲೆಕ್ಕಪತ್ರದಲ್ಲಿ ಅವ್ಯವಹಾರ ಆಗಿದ್ದು ನೀಜ ಎಂದು ತಪ್ಪೊಪ್ಪಿಕೊಂಡಿತ್ತು ಅಲ್ಲದೇ ಆಡಳಿತ ಮಂಡಳಿ ತಪ್ಪು ಮಾಡಿರದೇ ಸಂಘದ ಮ್ಯಾನೇಜರ್ ಹಾಗೂ ಕ್ಲರ್ಕ ಪ್ರಮಾದ ಎಸಗಿದ್ದು ಅವರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಸ್ಪಷ್ಟಿಕರಣ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು ಮತ್ತೇ ಇಲ್ಲಿ ಕಾಂಗ್ರೇಸ್ ಬೆಂಬಲಿತ ಆಡಳಿತ ಮಂಡಳಿಯೇ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದು ವಿಪರ್ಯಾಸವಾಗಿದೆ.
Leave a Comment