ಹೊನ್ನಾವರ – ಇತ್ತೀಚೆಗೆ ಪಟ್ಟಣ ಪಂಚಾಯತ ಸಭಾಂಗಣದಲ್ಲಿ ಉದಯರಾಜ ಮೇಸ್ತ ಹಾಗೂ ಮಹೇಶ ಪಾಲೇಕರ ಎಂಬಿಬ್ಬರು ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡು ಕೈ ಕೈ ಮಿಲಾಯಿಸಿದ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೋವನ್ನು ಸಂಘಟನೆಯೊಂದಿಗೆ ತಳುಕು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಸದಸ್ಯರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಉದಯರಾಜ ಮೇಸ್ತ ಮತ್ತು ಮಹೇಶ ಪಾಲೇಕರ್ ನಡುವಿನ ಗಲಾಟೆ ಅವವರ ವೈಯ್ಯಕ್ತಿಕ ಸಮಸ್ಯೆಯಾಗಿದೆ. ಆದರೆ ಇದೇ ಘಟನೆಯನ್ನು ಆದಾರವಾಗಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರೆಲ್ಲರ ಪೋಟೋ ಬಳಸಿ ಅವಹೇಳನಕಾರಿಯಾಗಿ ವಾಟ್ಸಾಪ್ ಗ್ರೂಪ್‍ಗಳಿಗೆ 9611920625 ನಂಬರ್‍ನಿಂದ ಹಂಚಲಾಗಿದೆ. ಇದರಿಂದ ಸಂಘಟನೆಯ ಕಾರ್ಯಕರ್ತರ ಮಾನ ನಷ್ಟವಾಗಿದೆ. ವೈಯ್ಯಕ್ತಿಕ ಗಲಾಟೆಯನ್ನು ಸಂಘಟನೆಗೆ ತಗಲಾಕಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಸಂಧರ್ಭದಲ್ಲಿ ಗೌರವಾಧ್ಯಕ್ಷರಾದ ಕೇಶವ ಮೇಸ್ತ, ಉಪಾಧ್ಯಕ್ಷರಾದ ಶ್ರೀಕಾಂತ ಮೇಸ್ತ, ಪ್ರಧಾನ ಕಾರ್ಯದರ್ಶಿ ಸುಭಾಷ ಡಿ ಮೇಸ್ತ, ಸದಸ್ಯರಾದ ಜಯೇಶ ಪಿ, ಹರೀಶ ನಾಯ್ಕ, ವೇಂಕಟೇಶ ಮೇಸ್ತ, ಗಣೇಶ ಗೌಡ, ಲೋಕೇಶ ಸಂಕೊಳ್ಳಿ, ಪವನ್ ಮೇಸ್ತ ಹಾಗೂ ಸಂದೀಪ ಜಿ ಮೇಸ್ತ ಉಪಸ್ತಿತರಿದ್ದರು.
Leave a Comment