ಭಟ್ಕಳ: ಯಕ್ಷರಕ್ಷೆ(ರಿ) ಮುರ್ಡೇಶ್ವರದ ಯಕ್ಷಧಾಮದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ ತಾಳ ಮದ್ದಳೆ ನೆರೆದ ಕಲಾಭಿಮಾನಿಗಳನ್ನು ರಂಜಿಸಲು ಯಶಸ್ವೀಯಾಯಿತು.
ಹಿಮ್ಮೇಳನದಲ್ಲಿ ಭಾಗವತರಾಗಿ ಗಣಪತಿ ಕಾಯ್ಕಿಣಿ, ಮನೋಹರ ಆಚಾರ್ಯ, ಮದ್ದಳೆ ವಾದಕರಾಗಿ ಭಾಸ್ಕರ ಭಂಡಾರಿ ಭಾಗವಹಿಸಿದ್ದರು. ಮುಮ್ಮೆಳನದಲ್ಲಿ ವೀರಮಣಿಯಾಗಿ ಸದಾಶಿವ ಆಳ್ವ ತಲಪಾಡಿ, ಹನುಂತನಾಗಿ ಆನಂದ ಭಟ್ ಕೆಕ್ಕಾರು, ಈಶ್ವರನಾಗಿ ಸುಬ್ರಹ್ಮಣ್ಯ ಭಟ್, ಶತ್ರುಘ್ನನಾಗಿ ಆದಿತ್ಯ ಭಟ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಆಯ್. ಆರ್. ಭಟ್ ಸ್ವಾಗತಿಸಿದರು. ಡಾ. ನಾರಾಯಣ ಮದ್ಯಸ್ಥ, ಎಂ.ಪಿ.ಭಂಡಾರಿ, ಕೃಷ್ಣ ಹೆಗಡೆ, ಡಾ. ರಾಘವೇಂದ್ರ ರಾವ್, ಅನುರಾಧ ಭಟ್, ರಚನಾ ರಾವ್, ಮೋಹನ ಕಾಂಚನ ಹಾಜರಿದ್ದರು.

Leave a Comment