• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೃಷಿಯಲ್ಲಿ ಪರಿಸರ ಸ್ನೇಹಿ ಅವಿಷ್ಕಾರಕ್ಕೆ ಕೇಂದ್ರ ಸಚಿವ ಸದಾನಂದಗೌಡ ಕರೆ

October 18, 2020 by Sachin Hegde Leave a Comment

ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಅವಿಷ್ಕಾರಗಳು ನಡೆಯುತ್ತಿರಬೇಕು, ಆದರೆ ಅವು ಪರಿಸರ ಸ್ನೇಹಿಯಾಗಿರಬೇಕು. ಬೇಸಾಯ ಸುಸ್ಥಿರವಾಗಿರಬೇಕು ಎಂದಾದರೆ ರೈತರು ರಸಗೊಬ್ಬರ ಬಳಕೆ ತಗ್ಗಿಸಿ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಅವರು ಕರೆ ನೀಡಿದ್ದಾರೆ.

IMG 20201017 WA00080LF0

ಭಾರತೀಯ ಕೈಗಾರಿಕೆಗಳ ಒಕ್ಕೂಟವು (ಸಿಐಐ) ಆಶ್ರಯದಲ್ಲಿ ಸಂಘಟಿಸಲಾಗಿರುವ “ಸಿಐಐ ಆಗ್ರೋ & ಫುಡ್‌ ಟೆಕ್‌ 2020” ವರ್ಚುವಲ್‌ ಕಾನ್ಫರೆನ್ಸ್ ಉದ್ದೇಶಿಸಿ ಬೆಂಗಳೂರಿನಿಂದ ಮಾತನಾಡಿದ ಸಚಿವ ಸದಾನಂದ ಗೌಡ ಅವರು, ‘ದೀರ್ಘಕಾಲದವರೆಗೆ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಲು ಸಾವಯವ ಕೃಷಿ ಅನಿವಾರ್ಯ’ ಎಂದರು.
ರೈತರಿಗೆ ಬೇಸಾಯ ಮಾಡುಲು ಅಗತ್ಯವಾದ ಬಿತ್ತನೆಬೀಜ, ರಸಗೊಬ್ಬರ, ನೀರು ಮುಂತಾದ ಮೂಲ ಅವಶ್ಯಕತೆಗಳು ಹಾಗೂ ಬೇಸಾಯವನ್ನು ಸುಲಭಗೊಳಿಸುವ ತಂತ್ರಜ್ಞಾನವನ್ನು ಒದಗಿಸುವಲ್ಲಿ  ಕೇಂದ್ರ ಸರ್ಕಾರದೊಂದಿಗೆ ಖಾಸಗಿ ಕಂಪನಿಗಳು ಸಕ್ರಿಯವಾಗಿ ಕೈಜೋಡಿಸುವುದು ಅವಶ್ಯಕವಾಗಿದೆ. ಕೃಷಿಗೆ ಪೂರಕ ವಾತಾವರಣ ಮೂಡಿಸುವ ಹೊಣೆಗಾರಿಕೆ ಸರ್ಕಾರ ಹಾಗೂ ಖಾಸಗಿ ವಲಯ ಎರಡರ ಮೇಲೂ ಇದೆ ಎಂದು ಸಚಿವರು ಅಭಿಪ್ರಾಯಪಟ್ಟರು.
“ಎಲ್ಲ ಅನಾನುಕೂಲ ವಾತಾವರಣಗಳ ಮಧ್ಯೆಯೂ ಕೃಷಿ ವಲಯಯವು ಉತ್ತಮ ಪ್ರಗತಿ ಸಾಧಿಸುತ್ತಿದೆ. ಈ ಬಾರಿ, ಸಕಾಲದಲ್ಲಿ ಬಂದ ಉತ್ತಮ ಮಳೆಯಿಂದ ಬಿತ್ತನೆ ಪ್ರದೇಶ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಹಾಗಾಗಿ ರಸಗೊಬ್ಬರ ಬೇಡಿಕೆಯೂ ಹೆಚ್ಚಾಗಿದೆ. ಆದರೆ ನಮ್ಮ ಇಲಾಖೆಯು ಉತ್ಪಾದನೆ, ಸಾಗಾಣೆಗೆ ಸಂಬಂಧಿಸಿದಂತೆ ಸಕಾಲದಲ್ಲಿ ಕೈಗೊಂಡ ಕ್ರಮಗಳಿಂದಾಗಿ ದೇಶಾದ್ಯಂತ ಅತ್ಯಂತ ಸಮರ್ಪಕವಾಗಿ ರಸಗೊಬ್ಬರ ಪೂರೈಕೆಯಾಗಿದ್ದು, ಎಲ್ಲೂ ಕೊರತೆ ಎದುರಾಗಿಲ್ಲ’’ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ರಸಗೊಬ್ಬರ ವಲಯದಲ್ಲಿ ಸಂಪೂರ್ಣ ಸ್ವಾಲಂಬನೆ ಗಳಿಸುವಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯು ಅನೇಕ ಕ್ರಮಗಳನ್ನು ಕೈಗೊಂಡಿದೆ. ಪೊಟ್ಯಾಶ್  ಗೊಬ್ಬರಕ್ಕೆ ಸಂಬಂಧಿಸಿದಂತೆ ನಾವು ಬಹುತೇಕ ಆಮದನ್ನೇ ಅವಲಂಬಿಸಿದ್ದೇವೆ. ಆದರೆ  ಶೇಕಡ 80 ರಷ್ಟು ಯೂರಿಯಾ ದೇಶದಲ್ಲಿಯೇ ಉತ್ಪಾದನೆ ಮಾಡುತ್ತಿದ್ದೇವೆ. ಫಾಸ್ಫೆಟಿಕ್‌ ನಮೂನೆಯ ಗೊಬ್ಬರ ಅರ್ಧದಷ್ಟು ನಮ್ಮಲ್ಲಿಯೇ ಉತ್ಪಾದನೆ ಆಗುತ್ತದೆ. ರಸಗೊಬ್ಬರಕ್ಕೆ ಅಗತ್ಯವಾದ ಕಚ್ಚಾವಸ್ತುಗಳನ್ನು ನೇರ ಆವಕಕ್ಕೆ ಪ್ರಯತ್ನಿಸಲಾಗುತ್ತಿದೆ. ವಿದೇಶಿ ಕಂಪನಿಗಳ ಜೊತೆ ಪಾಲುಗಾರಿಕೆ ಹೊಂದಲು ಭಾರತದ ಖಾಸಗಿ ರಸಗೊಬ್ಬರ ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತಿದೆ’’ ಎಂದು ಸಚಿವ ಸದಾನಂದ ಗೌಡ ವಿವರಿಸಿದರು.
“ರಸಗೊಬ್ಬರ ಇಲಾಖೆಯು ದೇಶಾದ್ಯಂತ ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ಹಾಗೂ ಕರಾರುವಕ್ಕಾಗಿ ಕೈಗೊಳ್ಳಲು ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ರೈತರಿಗೆ ದೊರೆಯುವ ರಿಯಾಯತಿ  ಸೋರಿಕೆಯಾಗದಂತೆ ತಡೆಯಲು ನೇರ ನಗದು ವರ್ಗಾವಣೆ ವ್ಯವಸ್ಥೆಯನ್ನು (ಡಿಬಿಟಿ ಸಿಸ್ಟಮ್) ಅಳವಡಿಸಿಕೊಳ್ಳಲಾಗಿದೆ. ಮೇಲಿಂದ ಮೇಲೆ ಈ ತಂತ್ರಾಂಶ/ದತ್ತಾಂಶಗಳನ್ನು ಉನ್ನತೀಕರಣಗೊಳಿಸಲಾಗುತ್ತಿದ್ದು “ಗವರ್ನನ್ಸ್‌ ಡಿಜಿಟಲ್‌ ಟ್ರಾನ್ಸಫಾರ್ಮೇಷನ್ ಅವಾರ್ಡ್‌” ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಇಲಾಖೆ ಭಾಜನವಾಗಿದೆ’’ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ತಿಳಿಸಿದರು.
ಸಿಐಐ ಟೆಕ್‌ ಮೇಳದ ಅಧ್ಯಕ್ಷ ಶ್ರೀ ಅಜಯ್‌ ಎಸ್‌ ಶ್ರೀರಾಮ್‌,  ಸಮ್ಮೇಳನದ ಸಂಚಾಲಕ ಡಾ. ಅರವಿಂದ್ ಕಪೂರ್‌, ಇಲಾಖಾ ಕಾರ್ಯದರ್ಶಿ ಛಬಿಲೇಂದ್ರ ರೌಲ್‌ ಮುಂತಾದವರು ಪಾಲ್ಗೊಂಡಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Karnataka News, ಕೃಷಿ Tagged With: (ಸಿಐಐ) ಆಶ್ರಯದಲ್ಲಿ ಸಂಘಟಿಸ, CII Agro, Emphasis on Organic Agriculture, Farmers Reduce Fertilizer Use, Food Tech 2020, Governance Digital Transformation Award, Organized under the auspices of the Federation of Indian Industries (CII), Virtual Conference, ಗವರ್ನನ್ಸ್‌ ಡಿಜಿಟಲ್‌ ಟ್ರಾನ್ಸಫಾರ್ಮೇಷನ್ ಅವಾರ್ಡ್, ಫುಡ್‌ ಟೆಕ್‌ 2020, ಭಾರತೀಯ ಕೈಗಾರಿಕೆಗಳ ಒಕ್ಕೂಟ, ರೈತರು ರಸಗೊಬ್ಬರ ಬಳಕೆ ತಗ್ಗಿಸಿ, ವರ್ಚುವಲ್‌ ಕಾನ್ಫರೆನ್ಸ್, ಸಾವಯವ ಕೃಷಿಗೆ ಒತ್ತು, ಸಿಐಐ ಆಗ್ರೋ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...