ಹಳಿಯಾಳ:- ಹಳಿಯಾಳ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿಲ್ಪಾ ಎಚ್.ಎ ಹಾಗೂ ಕಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ ಸನದಿ ಅವರು “ಕೋವಿಡ-19 ಜನಾಂದೋಲನ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೊರೊನಾ ಮಹಾಮಾರಿ ಕುರಿತು ಜಾಗೃತಿ ಮೂಡಿಸಲು ಚಾಲನೆ ನೀಡಲಾಗಿರುವ ಈ ಜನಾಂದೋಲನ ಕಾರ್ಯಕ್ರಮದಲ್ಲಿ ಕೋವಿಡ ವಿರುದ್ಧ ಹೋರಾಡಲು ಕಡ್ಡಾಯವಾಗಿ ಮಾಸ್ಕ ಬಳಸುತ್ತೇವೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತೇವೆ, ಮೇಲಿಂದ ಮೇಲೆ ಕೈ ತೊಳೆದುಕೊಳ್ಳುತ್ತೇವೆ, ನಾವು ನಿಯಮ ಪಾಲಿಸುತ್ತ ಉಳಿದವರಿಗೂ ಪಾಲಿಸುವಂತೆ ಉತ್ತೇಜಿಸುತ್ತೇವೆ ಹಾಗೂ ಒಗ್ಗಟ್ಟಾಗಿ ಕೋವಿಡ ವಿರುದ್ಧ ಹೋರಾಡುತ್ತೇವೆ ಎಂದು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಬಳಿಕ ನ್ಯಾಯಾಲಯದಿಂದ ಪ್ರಾರಂಭವಾದ ನ್ಯಾಯವಾದಿಗಳ ಜಾಥಾ ಬಸ್ ನಿಲ್ದಾಣ, ಮೇದಾರಗಲ್ಲಿ, ಅರ್ಬನ್ ಬ್ಯಾಂಕ ಸರ್ಕಲ್, ಪೇಟೆಯ ಮುಖ್ಯರಸ್ತೆ , ಶಿವಾಜಿ ಸರ್ಕಲ್ , ಬಸವೇಶ್ವರ ಸರ್ಕಲ್ ಮೂಲಕ ಹಾಯ್ದು ಮತ್ತೆ ನ್ಯಾಯಾಲಯಕ್ಕೆ ಬಂದು ಮುಕ್ತಾಯಗೊಂಡಿತು. ಮಾಸ್ಕ ಹಾಕದವರಿಗೆ ತಿಳಿಹೇಳಿ ಉಚಿತವಾಗಿ ಮಾಸ್ಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಕೀಲರಾದ ಎ.ಎಮ್. ಪಾಟೀಲ, ಎಮ್.ವಿ.ಅμÉ್ಟೀಕರ, ಮಂಜುನಾಥ ಮಾದಾರ, ಸುರೇಖಾ ಗುಣಗಾ, ರೆಹಮಾನ್ ಕಿತ್ತೂರ, ಸುಂದರ ಕಾನಕತ್ರಿ, ಮೇಘರಾಜ ಮೇತ್ರಿ, ಸುರೋಜಿ, ಜುಂಜವಾಡಕರ ಹಾಗೂ ಅಂಗನವಾಡಿ ಶಿಕ್ಷಕಿಯರು, ನ್ಯಾಯಾಲಯದ ಎಲ್ಲ ಸಿಬ್ಬಂದಿ ವರ್ಗ, ಹಿರಿಯ ನಾಗರಿಕರ ವೇದಿಕೆಯ ಜಿ.ಡಿ.ಗಂಗಾಧರ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿ, ವ್ಯವಸ್ಥಾಪಕರಾದ ನಾರಾಯಣ ಕೊಳಂಬಿ ಮೊದಲಾದವರು ಇದ್ದರು.

Leave a Comment