• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

2020-21 ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ

October 19, 2020 by Sachin Hegde Leave a Comment

ಕೇಂದ್ರ ಸರ್ಕಾರ 2020-21ನೇ ಸಾಲಿನ ಮುಂಗಾರು ಮಾರುಕಟ್ಟೆ ಹಂಗಾಮು (ಕೆಎಂಎಸ್)
ಈಗಾಗಲೇ ಆರಂಭವಾಗಿದ್ದು, ದೇಶದ ಕೃಷಿಕ ಸಮುದಾಯ ಬೆಳೆದಿರುವ ಆಹಾರ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಪ್ರಕ್ರಿಯೆ ಮುಂದುವರಿಸಿದೆ. ಹಿಂದಿನ ವರ್ಷಗಳಲ್ಲಿ ಸರ್ಕಾರ, ರೈತರ ಆಹಾರ ಉತ್ಪನ್ನಗಳನ್ನು ಖರೀದಿಸಿದಂತೆ ಈ ವರ್ಷವೂ ಪ್ರಕ್ರಿಯೆ ಮುಂದುವರಿಸಿದೆ.
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಚಂಡೀಗಢ,
ಕೇರಳ ಮತ್ತು ಜಮ್ಮು-ಕಾಶ್ಮೀರ ಸೇರಿದಂತೆ ಭತ್ತವನ್ನು ಅಧಿಕವಾಗಿ ಬೆಳೆಯಲಾಗುವ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭತ್ತ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. 17.10.2020ರ ತನಕ ಸುಮಾರು 7.38 ಲಕ್ಷ ರೈತರಿಂದ 84.46 ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಲಾಗಿದೆ.

image1IH80
ಭತ್ತ (17.10.20)
ಖರೀದಿ ಪ್ರಮಾಣ(ಮೆಟ್ರಿಕ್ ಟನ್ ನಲ್ಲಿ) – 8446711ಕನಿಷ್ಠ ಬೆಂಬಲ ಬೆಲೆ ಮೌಲ್ಯ(ಲಕ್ಷ ರೂ.ಗಳಲ್ಲಿ) – 1594739
ಪ್ರಯೋಜನ ಲಭಿಸಿರುವ ರೈತರ ಸಂಖ್ಯೆ – 738489

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತಾವನೆ ಆಧರಿಸಿ, ಕೇಂದ್ರ ಸರ್ಕಾರವು 41.67 ಲಕ್ಷ ಮೆಟ್ರಿಕ್ ಟನ್ ಬೇಳೆಕಾಳುಗಳು ಮತ್ತು ತೈಲ (ಎಣ್ಣೆ) ಬೀಜಗಳ ಖರೀದಿಗೆ ಅನುಮತಿ ನೀಡಿದೆ. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ರಾಜ್ಯಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಬೇಳೆಕಾಳುಗಳು ಮತ್ತು ಎಣ್ಣೆಬೀಜಗಳ ಖರೀದಿಗೆ ಅನುಮೋದನೆ ನೀಡಿದೆ. ಜತೆಗೆ, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ 1.23 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೂ ಅನುಮತಿ ನೀಡಿದೆ. ಜತೆಗೆ, ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತಾವನೆ ಆಧರಿಸಿ, ಕನಿಷ್ಠ ಬೆಂಬಲ ಯೋಜನೆ ಅಡಿ ಬೇಳೆಕಾಳುಗಳು, ಎಣ್ಣೆ ಬೀಜಗಳು ಮತ್ತು ಕೊಬ್ಬರಿ ಖರೀದಿಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 2020-21ನೇ ಸಾಲಿಗೆ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಯಂತೆ ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಂದಾಯಿತ ರೈತರಿಂದ ನೇರವಾಗಿ ಆಹಾರಧಾನ್ಯಗಳನ್ನು ಖರೀದಿಸಲಿವೆ.

ಕೇಂದ್ರ ಕೃಷಿ ಸಚಿವಾಲಯ ನೋಡಲ್ ಏಜೆನ್ಸಿಗಳ ಮೂಲಕ ಈವರೆಗೆ 723.79 ಮೆಟ್ರಿಕ್ ಟನ್ ಹೆಸರುಕಾಳು ಮತ್ತು ಉದ್ದಿನಬೇಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 5.21 ಕೋಟಿ ರೂ.ಗೆ ಖರೀದಿಸಲಾಗಿದೆ. ಇದರಿಂದ ತಮಿಳುನಾಡು, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯದ 681 ರೈತರಿಗೆ ಪ್ರಯೋಜನ ಲಭಿಸಿದೆ. ಅಂತೆಯೇ, ಕರ್ನಾಟಕ ಮತ್ತು ತಮಿಳುನಾಡಿನ 3,961 ತೆಂಗು ಬೆಳೆಗಾರರಿಂದ 52.40 ಕೋಟಿ ರೂ. ಮೊತ್ತದ 5089 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲಾಗಿದೆ. ಆದರೆ, ಕೊಬ್ಬರಿ ಮತ್ತು ಉದ್ದಿನಕಾಳು ದರಗಳು ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಮಟ್ಟದಲ್ಲಿವೆ. ಹಾಗಾಗಿ, ಈ ಉತ್ಪನ್ನಗಳನ್ನು ಹೆಚ್ಚಾಗಿ ಬೆಳೆಯುವ ರಾಜ್ಯಗಳಲ್ಲಿ ಆಯಾ ರಾಜ್ಯಗಳು ಖರೀದಿ ಪ್ರಕ್ರಿಯೆ ಆರಂಭಿಸಲು ಅಗತ್ಯ ವ್ಯವಸ್ಥೆ ಗಳನ್ನು ಮಾಡಿಕೊಳ್ಳುತ್ತಿವೆ.

image1
image

ಹೆಸರುಕಾಳು ಮತ್ತು ಉದ್ದಿನಕಾಳು (17.10.2020)

ಖರೀದಿ ಪ್ರಮಾಣ (ಮೆಟ್ರಿಕ್ ಟನ್ ನಲ್ಲಿ) – 723.79

ಕನಿಷ್ಠ ಬೆಂಬಲ ಬೆಲೆ ಮೌಲ್ಯ (ಲಕ್ಷ ರೂ.ನಲ್ಲಿ) – 521

ಪ್ರಯೋಜನ ಪಡೆದ ರೈತರ ಸಂಖ್ಯೆ – 681

ಕೊಬ್ಬರಿ (17.10.2020)

ಖರೀದಿ ಪ್ರಮಾಣ(ಮೆಟ್ರಿಕ್ ಟನ್ ನಲ್ಲಿ) – 5089

ಕನಿಷ್ಠ ಬೆಂಬಲ ಬೆಲೆ ಮೌಲ್ಯ(ಲಕ್ಷ ರೂ.ನಲ್ಲಿ) – 5240

ಪ್ರಯೋಜನ ಪಡೆದ ರೈತರ ಸಂಖ್ಯೆ – 3961

ಮುಂಗಾರು ಹಂಗಾಮು ಮಾರುಕಟ್ಟೆ 2020-21ನೇ ಸಾಲಿನ ಹತ್ತಿಬೀಜ ಖರೀದಿ ಪ್ರಕ್ರಿಯೆ 2020 ಅಕ್ಟೋಬರ್ 1ರಿಂದಲೇ ಆರಂಭವಾಗಿದೆ. ಭಾರತೀಯ ಹತ್ತಿ ನಿಗಮ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 17.10.2020ರ ತನಕ ಒಟ್ಟು 165369 ಬೇಲ್ ಹತ್ತಿಯನ್ನು 46697.86 ಲಕ್ಷ ರೂ.ಗೆ ಖರೀದಿಸಿದೆ. ಇದರಿಂದ 32,994 ಹತ್ತಿ ಬೆಳೆಗಾರರಿಗೆ ಪ್ರಯೋಜನ ಲಭಿಸಿದೆ.

image4HV5O

ಹತ್ತಿ ಬೀಜಗಳು(17.10.2020)

 ಖರೀದಿ ಪ್ರಮಾಣ(ಮೆಟ್ರಿಕ್ ಟನ್ ನಲ್ಲಿ) – 165369

 ಕನಿಷ್ಠ ಬೆಂಬಲ ಬೆಲೆ ಮೌಲ್ಯ(ಲಕ್ಷ ರೂ.ನಲ್ಲಿ) – 46697.86

 ಪ್ರಯೋಜನ ಪಡೆದ ರೈತರ ಸಂಖ್ಯೆ – 32994

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: National News, ಕೃಷಿ Tagged With: Coconut Growers, Indian Cotton Corporation Minimum Support Price Scheme, Jammu & Kashmir, Kerala, Lakhs of Metric Tonnes, Metric Ton, Minimum Support Price Scheme, Ministry of Agriculture, Number of Beneficiaries, Oil (Oil), paddy, Pulses, Pulses and Oilseeds Purchase, ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ, ಕೇಂದ್ರ ಕೃಷಿ ಸಚಿವಾಲಯ ನೋಡಲ್ ಏಜೆನ್ಸಿಗಳ, ಕೇರಳ, ಕೊಬ್ಬರಿ, ಖರೀದಿ ಪ್ರಮಾಣ, ಜಮ್ಮು-ಕಾಶ್ಮೀರ ಸೇರಿದಂತೆ ಭತ್ತವನ್ನು, ತೆಂಗು ಬೆಳೆಗಾರರಿಂದ, ತೈಲ (ಎಣ್ಣೆ), ಪ್ರಯೋಜನ ಪಡೆದ ರೈತರ ಸಂಖ್ಯೆ, ಬೇಳೆಕಾಳುಗಳು, ಬೇಳೆಕಾಳುಗಳು ಮತ್ತು ಎಣ್ಣೆಬೀಜಗಳ ಖರೀದಿ, ಭಾರತೀಯ ಹತ್ತಿ ನಿಗಮ ಕನಿಷ್ಠ ಬೆಂಬಲ ಬೆಲೆ ಯೋಜನೆ, ಮೆಟ್ರಿಕ್ ಟನ್, ಲಕ್ಷ ಮೆಟ್ರಿಕ್ ಟನ್, ಹತ್ತಿ ಬೀಜಗಳು, ಹೆಸರುಕಾಳು ಮತ್ತು ಉದ್ದಿನಕಾಳು

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...