ಹಳಿಯಾಳ :- ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗಿಳಿದು ಮುಳಗಿದ್ದ ಯುವಕನ ಶವ 3 ದಿನಗಳ ಸತತ ಶೋಧ ಕಾರ್ಯದ ಬಳಿಕ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.
ತಾಲೂಕಿನ ನೀರಲಗಾ ಗ್ರಾಮದ ಬಳಿಯ ಹಳ್ಳದಲ್ಲಿ ಮಂಗಳವಾರ ದಿ.20 ರಂದು ತನ್ನ ಸ್ನೇಹಿತರೊಂದಿಗೆ ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗೆ ಇಳಿದಿದ್ದ ಪ್ರಹ್ಲಾದ್ ಗೋವಿಂದ ಧುಮಾಳೆ(21) ಆಯ ತಪ್ಪಿ ನೀರಿನಲ್ಲಿ ಮುಳುಗಿದ್ದ.

ಕಳೆದ ವರ್ಷ ಹಳಿಯಾಳದಲ್ಲಿ ಉಂಟಾದ ಪ್ರವಾಹದಿಂದ ಹಳ್ಳಗಳು ಆಳ ಮತ್ತು ಅಗಲದಲ್ಲಿ ವಿಸ್ತಾರವಾಗಿದೆ ಅಲ್ಲದೇ ಸದ್ಯ ಪ್ರಸ್ತುತ ಸುರಿಯುತ್ತಿರುವ ನಿರಂತರ ಮಳೆಯಿಂದ ಹಳ್ಳದ ನೀರಿನಲ್ಲಿ ಏರಿಕೆಯಾಗಿದೆ ಅಲ್ಲದೇ ಈ ಯುವಕರು ದನಗಳೊಂದಿಗೆ ನೀರಿಗೆ ಇಳಿದಾಗ ಒಮ್ಮೆಲೆ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಮಂಗಳವಾರದಿಂದಲೇ ಯುವಕನ ಶವಕ್ಕಾಗಿ ಅಗ್ನಿ ಶಾಮಕ ದಳ, ನುರಿತ ಈಜುಗಾರರು, ಹಳಿಯಾಳ ಪೋಲಿಸರು ಗ್ರಾಮಸ್ಥರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು ಆದರೇ 3 ದಿನಗಳ ಬಳಿಕ ಗುರುವಾರ ಮಧ್ಯಾಹ್ನ ಯುವಕನ ಶವ ಪತ್ತೆಯಾಗಿದೆ ಎಂದು ಹಳಿಯಾಳ ಪೋಲಿಸರು ತಿಳಿಸಿದ್ದಾರೆ. ಈ ಕುರಿತು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Comment