• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತುಂಬೆ ಹಲವು ರೋಗಗಳಿಗೆ ರಾಮಬಾಣ

October 26, 2020 by KV Parthasarathi Kshatriya Leave a Comment

ದ್ರೋಣಪುಷ್ಪ, ದ್ರೋಣಪುಷ್ಪಿ, ಚಿತ್ರಪತ್ರಿಕಾ, ರುದ್ರಪಾದ, ರುದ್ರಪುಷ್ಪ, ಚಿತ್ರಕ್ಷಪ, ತುಮ್ಮ ಚೆಟ್ಟು, ತುಂಬೈಚಡಿ, ಚೋಟ ಕಲ್ಕುಶ, ಭೂತಮರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.
ತುಂಬೆ ಗಿಡವು ಪಾಳುಭೂಮಿ, ತೋಟ ಹೊಲಗಳ ಬದುಗಳ ಮೇಲೆ, ರಸ್ತೆಗಳ ಪಕ್ಕ ಕಳೆಯಂತೆ ತಾನಾಗೆ 2-3 ಅಡಿ ಬೆಳೆಯುವ ಒಂದು ಪುಟ್ಟ ಸಸ್ಯ. ಇದರಲ್ಲಿ ತುಂಬೆ, ಕಾಡು ತುಂಬೆ, ಹೆದ್ದುಂಬೆ ಎಂಬ ಮೂರ್ನಾಲ್ಕು ಪ್ರಭೇದಗಳಿದ್ದುಗಳಿದ್ದರೂ, ಬಿಳಿ ಹೂವುಗಳು ಬಿಡುವ ತುಂಬೆ ಗಿಡವನ್ನೆ ಹೆಚ್ಚಾಗಿ ಔಷಧೀಯವಾಗಿ, ಪುರಾತನ ಕಾಲದಿಂದಲೂ ಪೂರ್ವಿಕರು, ಋಷಿಮುನಿಗಳು, ಆಯುರ್ವೇದ ಪಂಡಿತರು, ವೈದ್ಯರು ಬಳಸುತ್ತಾ ಬಂದಿದ್ದಾರೆ.ಈಗಲೂ ಅನೇಕ ವ್ಯಾಧಿಗಳನ್ನು ಗುಣಪಡಿಸಲು, ಸಮೂಲ ಸಹಿತ ಆಯುರ್ವೇದ, ಯುನಾನಿ, ಸಿದ್ಧ ಔಷಧೀಯ ಪದ್ದತಿಯಲ್ಲಿ ಬಳಸುತ್ತಿದ್ದಾರೆ. ತುಂಬೆ ಗಿಡವನ್ನು ಕಳೆಸಸ್ಯದಂತೆ ತಾತ್ಸಾರದಿಂದ ಕಂಡರೂ, ಇದರಲ್ಲಿ ಅಪಾರ ಔಷಧೀಯ ಭಂಡಾರವೆ ತುಂಬಿದೆ.

122216033 464407197853479 6330695211985833471 n


ತುಂಬೆ ಹೂವು ಶಿವನಿಗೆ ತುಂಬಾ ಪ್ರಿಯವಾದದ್ದು, ಶ್ರೇಷ್ಠ ಹಾಗು ಪವಿತ್ರವಾದದ್ದು, ಏಕಾದಶಿ, ಶಿವರಾತ್ರಿ ಹಬ್ಬಗಳಲ್ಲಿ ತುಂಬೆ ಹೂವುಗಳನ್ನು ಅರ್ಚನೆಗೆ ತಪ್ಪದೆ ಬಳಸುತ್ತಾರೆ. ವಿಶೇಷ ಪೂಜೆಗಳಲ್ಲಿ ತುಂಬೆ ಹೂವಿನ ಮಾಲೆ ತಯಾರಿಸಿ ರುದ್ರನನ್ನು ಅಲಂಕರಿಸುತ್ತಾರೆ. ತುಂಬೆ ಹೂವುಗಳಿಂದ ಪರಮೇಶ್ವರನನ್ನು ಪೂಜಿಸಿದರೆ ಪ್ರಸನ್ನನಾಗಿ ಭಕ್ತರ ಮನೋಭಿಲಾಷೆ ನೆರವೇರಿಸುತ್ತಾನೆ ಎಂಬುದಾಗಿ ಪುರಾಣಗಳಲ್ಲಿ ಉಲ್ಲೇಖವಿದೆ. ಇದು ಭಕ್ತರ ನಂಬಿಕೆಯು ಹೌದು.
ಒಂದು ಮಣ್ಣಿನ ಮಡಿಕೆಯಲ್ಲಿ 30-40 ತುಂಬೆ ಹೂವುಗಳು, ಚಿಟಿಕೆ ಜೀರಿಗೆ, 5-6 ಕಾಳುಮೆಣಸು, ಚಿಟಿಕೆ ಅರಸಿಣ, ಒಂದು ಸಣ್ಣ ಗೋಲಿಗಾತ್ರ ಬೆಲ್ಲ, 200ml ನೀರು ಹಾಕಿ ಚೆನ್ನಾಗಿ ಕುದಿಸಿ,100ml ಆದಾಗ ಕೆಳಗಿಳಿಸಿ, ಊಟಕ್ಕೆ ಅರ್ಧ ಗಂಟೆ ಮೊದಲು 30ml ನಂತೆ, ಬೆಳಿಗ್ಗೆ ಮಧ್ಯಾಹ್ನ ಸಂಜೆ ಸೇವಿಸಿದರೆ, ಜ್ವರ, ನೆಗಡಿ, ಕೆಮ್ಮು,ದಮ್ಮು, ಕಫ, ವಾತ, ಪಿತ್ತ, ಮೂತ್ರಕೋಶ ಸಮಸ್ಯೆ, ಶ್ವಾಸಕೋಶ ಸಮಸ್ಯೆ ನಿವಾರಣೆಯಾಗುತ್ತೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ರಕ್ತ ಶುದ್ಧಿಯಾಗುತ್ತೆ.
ತುಂಬೆ ಎಲೆ ಅಥವಾ ಹೂವುಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸ್ನಾನ ಮಾಡುವ ನೀರಲ್ಲಿ ಕಲಸಿ, ಸ್ನಾನ ಮಾಡುವುದರಿಂದ ಅನೇಕ ರೀತಿಯ ಚರ್ಮವ್ಯಾಧಿಗಳು ನಿವಾರಣೆಯಾಗುತ್ತೆ.
ಅರ್ಧ ತಲೆನೋವು ಇದ್ದಾಗ, ಎಡಗಡೆ ಇದ್ದರೆ ಬಲಗಡೆ ಮೂಗಿನ ಒಳ್ಳೆಗೆ, ಬಲಗಡೆ ಇದ್ದರೆ ಎಡಗಡೆ ಮೂಗಿನ ಒಳ್ಳೆಗೆ 2-3 ಹನಿ ತುಂಬೆ ರಸವನ್ನು ಹಾಕುವುದರಿಂದ ಬೇಗ ಶಮನವಾಗುತ್ತೆ. ಕಿವಿ ನೋವಿದ್ದಾಗ ಇದೇರೀತಿ 2-3 ಹನಿ ಹಾಕಿದರೆ, ಕಿವಿನೋವು ನಿವಾರಣೆಯಾಗುತ್ತೆ.
ಚೇಳು, ವಿಷಕ್ರಿಮಿ, ಜೇನುನೊಣ ಕಚ್ಚಿದಾಗ, ತುಂಬೆ ಗಿಡದ ರಸವನ್ನು ಗಾಯದ ಮೇಲೆ ಲೇಪಿಸಿ, 1 ಚಮಚ ರಸವನ್ನು ಅರ್ಧಗಂಟೆಗೊಮ್ಮೆ ಹೊಟ್ಟೆಗೆ ಕೊಟ್ಟರೆ, ವಿಷ ಇಳಿದು ಪ್ರಾಣಾಪಾಯದಿಂದ ಪಾರಾಗುತ್ತಾರೆ.
ತುಂಬೆ ಎಲೆ ಅಥವಾ ಹೂವಿನ ರಸಕ್ಕೆ ಜೇನುತುಪ್ಪ ಕಲಸಿ ಹೊಟ್ಟೆಗೆ ಸೇವಿಸಿದರೆ, ಹುಳು, ಜಂತುಹುಳು, ಸತ್ತು ಮಲದಲ್ಲಿ ಹೊರ ಬರುತ್ತವೆ.
ಸ್ತ್ರೀಯರಲ್ಲಿ ಸಂತಾನ ಹಾಗು ಋತಸ್ರಾವ ಸಮಸ್ಯೆಗಳು ಇದ್ದಾಗ, ತುಂಬೆ ಎಲೆ, ಕಾಳುಮೆಣಸು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಒಂದು ಸಣ್ಣ ಗೋಲಿಗಾತ್ರ ಉಗರು ಬೆಚ್ಚಗಿನ ನೀರಲ್ಲಿ ಕಲಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು, ಮುಟ್ಟಾದ 3-4 ದಿನ ಹೊಟ್ಟೆಗೆ ತೆಗೆದುಕೊಂಡು, ಸಪ್ಪೆ ಊಟ ತಿಂದರೆ ಮೇಲಿನ ಸಮಸ್ಯೆಗಳು ನಿವಾರಣೆಗುತ್ತೆ. ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆನೋವು, ಗರ್ಭಾಶಯ ಸಮಸ್ಯೆಗಳು ದೂರವಾಗಿ ಸಂತಾನ ಭಾಗ್ಯ ಲಭಿಸುತ್ತೆ.
ತುಂಬೆ ಎಲೆ ಹಾಗು ಕಾಳುಮೆಣಸು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಬೆಳಿಗ್ಗೆ ಸಂಜೆ ಒಂದು ಸಣ್ಣ ಗೋಲಿಗಾತ್ರ, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಹೊಟ್ಟೆಗೆ ಒಂದು ವಾರ ತೆಗೆದುಕೊಂಡರೆ ಕಾಮಾಲೆರೋಗ ಗುಣವಾಗುತ್ತೆ.
ತುಂಬೆ ಎಲೆ ರಸ ಹಾಗು ಎಳ್ಳೆಣ್ಣೆ ಸಮನಾಗಿ ತೆಗೆದುಕೊಂಡು, ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ, ಎಣ್ಣೆಮಾತ್ರ ಉಳಿದಾಗ ಕೆಳಗಿಳಿಸಿ ಸೋಸಿಕೊಂಡು, ಅದಕ್ಕೆ ಚಿಟಿಕೆ ಗಡ್ಡೆ ಕರ್ಫುರಾ ಮಿಶ್ರಣಮಾಡಿ ಒಂದು ಸೀಸೆಯಲ್ಲಿ ಶೇಖರಿಸಿಟ್ಟುಕೊಂಡು, ಕೀಲುನೋವು, ವಾತನೊವು, ಮಾಂಸಖಂಡಗಳ ನೋವು ಇರುವ ಕಡೆ ಲೇಪಿಸುತ್ತಿದ್ದರೆ ನೋವು ಬೇಗ ವಾಸಿಯಾಗುತ್ತೆ.
ತುಂಬೆ ಎಲೆ, ಕೊಮ್ಮೆ ಬೇರು, ಕಾಳುಮೆಣಸು ನುಣ್ಣಗೆ ಅರೆದು ಅವರೇಕಾಳು ಪ್ರಮಾಣದಲ್ಲಿ ಬೆಳಿಗ್ಗೆ ಸಂಜೆ ಉಗರು ಬೆಚ್ಚಗಿನ ನೀರಲ್ಲಿ ತೆಗೆದುಕೊಂಡರೆ, ಜೀರ್ಣಶಕ್ತಿ ಹೆಚ್ಚುತ್ತೆ, ಶ್ವಾಸಕೋಶಗಳು ಶುದ್ದಿಯಾಗುತ್ತೆ.
ತುಂಬೆ ಎಲೆ, ಶುಂಠಿ, ಬೆಲ್ಲವನ್ನು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಮಕ್ಕಳಿಗೆ 2 ಚಿಟಿಕೆ, ದೊಡ್ಡವರು ಒಂದು ಚಮಚದಂತೆ ಬೆಳಿಗ್ಗೆ ಸಂಜೆ ಸೇವಿಸಿದರೆ, ಕಫ, ಕೆಮ್ಮು, ನೆಗಡಿ, ಗಂಟಲಕೆರೆತ ನಿವಾರಣೆಯಾಗುತ್ತೆ.
ತುಂಬೆ ಎಲೆಗಳ ರಸಕ್ಕೆ, ನಿಂಬೆರಸ, ಅರಸಿಣ, ಕಲ್ಲುಪ್ಪು ಬೆರಸಿ, ಹುಳುಕಡ್ಡಿ, ಗಜ್ಜಿ, ನವೆ, ಇಸಬು ಗಜಕರ್ಣದ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ಗುಣವಾಗುತ್ತೆ.
ತುಂಬೆ ಎಲೆಗಳ ರಸಕ್ಕೆ ಬೆಲ್ಲ ಅಥವಾ ಜೇನುತುಪ್ಪ ಕಲಸಿ ಗೌತಲಮ್ಮ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ವಾಸಿಯಾಗುತ್ತೆ.
ಒಂದು ಚಮಚ ತುಂಬೆ ಎಲೆಯ ರಸಕ್ಕೆ ಚಿಟಿಕೆ ಕಾಳುಮೆಣಸು, ಜೀರಿಗೆ ಸೇರಿಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು ಸೇವಿಸಿದರೆ ಮಧುಮೇಹ ಹತೋಟಿಗೆ ಬರುತ್ತೆ.
ತುಂಬೆರಸವನ್ನು ಮೂಲವ್ಯಾಧಿ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ನಿವಾರಣೆಯಾಗುತ್ತೆ.
“ತುಂಬೆಯ ಉಪಯೋಗಗಳು ಅಪಾರವಾದದ್ದು”
ಸೂಚನೆ:- ತುಂಬೆ ಉಪಯೋಗಿಸುವ ಮೊದಲು ಆಯುರ್ವೇದ ವೈದ್ಯರ ಸಲಹೆ ಪಡೆದುಕೊಳ್ಳಿ

122230872 464407237853475 5153068811380719884 n

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, ಆರೋಗ್ಯ, ಮನೆಮದ್ದು Tagged With: Ayurvedic Pundits, Blood cleansing, Common cold, Cough, Dermatitis, Doctors, Fever, Health Benefit, Health Benefit Of thumbe gida, Increase immunity in the body, kaadu tumbe gida, Muscles pain, Rashes, Thorns, Thrones, thumbe gida, Thumbs, Tubers Filmmaker, Varieties, White Flowers, Wild Films, ಅಪಾರ ಔಷಧೀಯ ಭಂಡಾರ, ಆಯುರ್ವೇದ ಪಂಡಿತರು, ಋಷಿಮುನಿಗಳು, ಔಷಧೀಯವಾಗಿ, ಕಫ, ಕಾಡು ತುಂಬೆ, ಕೆಮ್ಮು, ಚರ್ಮವ್ಯಾಧಿಗಳು ನಿವಾರಣೆ, ಚಿತ್ರಕ್ಷಪ, ಚಿತ್ರಪತ್ರಿಕಾ, ಜ್ವರ, ತುಂಬೆ, ತುಂಬೆ ಗಿಡದ ಉಪಯೋಗಗಳು, ತುಂಬೆ ಗಿಡವು ಪಾಳುಭೂಮಿ, ತುಂಬೆ ಹೂವಿನ ಮಹತ್ವ, ತೋಟ ಹೊಲಗಳ ಬದುಗಳ ಮೇಲೆ, ದಮ್ಮು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ದ್ರೋಣಪುಷ್ಪ, ದ್ರೋಣಪುಷ್ಪಿ, ನೆಗಡಿ, ಪಿತ್ತ, ಪುರಾತನ ಕಾಲದಿಂದಲೂ ಪೂರ್ವಿಕರು, ಬಿಳಿ ಹೂವುಗಳು ಬಿಡುವ ತುಂಬೆ, ಮಾಂಸಖಂಡಗಳ ನೋವು, ಮೂತ್ರಕೋಶ ಸಮಸ್ಯೆ, ಮೂರ್ನಾಲ್ಕು ಪ್ರಭೇದ, ರಕ್ತ ಶುದ್ಧಿ, ರಸ್ತೆಗಳ ಪಕ್ಕ, ರುದ್ರಪಾದ, ರುದ್ರಪುಷ್ಪ, ವಾತ, ವೈದ್ಯರು, ಶಿವನಿಗೆ ತುಂಬಾ ಪ್ರಿಯ, ಶ್ವಾಸಕೋಶ ಸಮಸ್ಯೆ ನಿವಾರಣೆ, ಹೆದ್ದುಂಬೆ

Explore More:

About KV Parthasarathi Kshatriya

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...