ಭಟ್ಕಳ: ಕೇಂದ್ರ ಗೃಹ ಸಚಿವಾಲಯವು 18 ಮಂದಿಯನ್ನು ಉಗ್ರರು ಎಂದು ಗುರುತಿಸಿದೆ. ಇವರೆಲ್ಲರೂ ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಕಳೆದ ವರ್ಷ ಸಂಸತ್ ಅನುಮೋದನೆ ಪಡೆದ ಭಯೋತ್ಪಾದನಾ ವಿರೋಧಿ ಕಾಯ್ದೆಯ ಅಡಿಯಲ್ಲಿ ಇವರನ್ನು ಭಯೋತ್ಪಾದಕರು ಎಂದು ಹೆಸರಿಸಲಾಗಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) 1967ಕ್ಕೆ ಕಳೆದ ವರ್ಷದ ಆಗಸ್ಟ್ನಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ವ್ಯಕ್ತಿಗಳನ್ನು ಉಗ್ರರು ಎಂದು ಹೆಸರಿಸಲು ಅವಕಾಶ ನೀಡಿತ್ತು. ಇದಕ್ಕೂ ಮುನ್ನೆ 13 ಮಂದಿಯನ್ನು ಉಗ್ರರು ಎಂದು ಗುರುತಿಸಲಾಗಿತ್ತು.
ಈ ಘೋಷಿತ ಉಗ್ರರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸಯ್ಯದ್ ಸಲಾಹುದ್ದೀನ್, ಇಂಡಿಯನ್ ಮುಜಾಹಿದ್ದೀನ್ ಸ್ಥಾಪಕರಾದ ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ ಹಾಗೂ ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂನ ಆಪ್ತ ಛೋಟಾ ಶಕೀಲ್ ಸೇರಿದ್ದಾರೆ.
‘ಈ ವ್ಯಕ್ತಿಗಳು ಗಡಿ ಭಾಗದೊಳಗೆ ಅನೇಕ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ದೇಶವನ್ನು ಅಸ್ಥಿರಗೊಳಿಸಲು ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದರು. ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆಯೆಡೆಗಿನ ಶೂನ್ಯ ಸಹಿಷ್ಣುತೆಯನ್ನು ಬಲಪಡಿಸುವ ಬದ್ಧತೆಗಾಗಿ 18 ಮಂದಿಯನ್ನು ಉಗ್ರರು ಎಂದು ಘೋಷಿಸಲಾಗಿದೆ’ ಎಂದು ಗೃಹ ಸಚಿವಾಲಯ ಹೇಳಿಕೆ ತಿಳಿಸಿದೆ
Leave a Comment