ಪ್ರವಾಸಕ್ಕೆಂದು ಬಂದು ಮುರ್ಡೇಶ್ವರದ ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಅಪಾಯದಲ್ಲಿದ್ದ ಪ್ರವಾಸಿಗನೋರ್ವನನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದ ಘಟನೆ ಮಂಗಳವಾರ ಮುರ್ಡೇಶ್ವರದ ಕಡಲು ತೀರದಲ್ಲಿ ನಡೆದಿದೆ.

ಮಂಡ್ಯದ ವಿಶಾಲ್ (೧೭) ಎಂಬುವವನೇ ಅಪಾಯಕ್ಕೆ ಸಿಲುಕಿದ ಯುವಕ. ಈತ ಹಾಗೂ ಈತನ ಕುಟುಂಬದ ಸದಸ್ಯರು ಮಂಡ್ಯದಿಂದ ಮುರ್ಡೇಶ್ವರಕ್ಕೆ ಬಂದು ಶ್ರೀ ಕ್ಷೇತ್ರ ಮುರ್ಡೇಶ್ವರ ದೇವರ ದರ್ಶನ ಪಡೆದು, ಕಡಲತೀರದಲ್ಲಿ ನವೀನ್ ಬೀಚ್ ಹೋಟೆಲ್ ಕಡೆ ಈಜುತ್ತಿರುವ ಸಂದರ್ಭದಲ್ಲಿ, ನೀರಿನ ಸೆಳೆತಕ್ಕೆ ಸಿಲುಕಿ ವಿಶಾಲ್ ಎಂಬಾತ ಅಪಾಯಕ್ಕೆ ಸಿಲುಕುತ್ತಾನೆ. ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಈತನನ್ನು ರಕ್ಷಿಸುತ್ತಾರೆ. ಆದರೆ ಆತನ ಸ್ಥಿತಿಯು ಗಂಭೀರವಾಗಿದ್ದು, ಸ್ಥಳೀಯರ ಸಹಾಯದಿಂದ ಹತ್ತಿರದಲ್ಲೇ ಇರುವ ಆರ್. ಎನ್. ಎಸ್. ಮುರ್ಡೇಶ್ವರ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ಚಂದ್ರಶೇಖರ ದೇವಾಡಿಗ, ಜಯರಾಮ್ ಹರಿಕಾಂತ್, ಬೀಚ್ ಸೂಪರ್ವೈಸರ್ ನರಸಿಂಹ ಮೊಗೇರ, ಕರಾವಳಿ ಕಾವಲು ಪಡೆಯ ಸಿಬ್ಬಂದಿ ಯೋಗೀಶ ಹರಿಕಾಂತ ಪಾಲ್ಗೊಂಡಿದ್ದರು. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಲಾಗಿದೆ.
Leave a Comment