ಭಟ್ಕಳ : ತಾಲೂಕಿನ ಬಂದರಿನಲ್ಲಿ ಬುದುವಾರ ರಾತ್ರಿಬೃಹತ್ ಗಾತ್ರದ ಮೀನುಗಳು ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ
ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬ್ರಹತ್ ಗಾತ್ರದ ತೊರ್ಕೆ ಮೀನುಗಳು ದೊರಕಿದ್ದು, ಒಂದೊಂದು ಮೀನುಗಳು ಅಂದಾಜು 300 ರಿಂದ 400 ಕೆಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಈ ಮೀನುಗಳನ್ನು ಬೃಹತ್ ಕ್ರೆನ್ ನ ಸಹಾಯದಿಂದ ಮೇಲಕ್ಕೆತ್ತಲಾಗಿದೆ.
ಸಾಮಾನ್ಯವಾಗಿ ಮೀನುಗಾರರ ಬಲೆಗೆ ಬೀಳುವ ಮೀನುಗಳು 50 ರಿಂದ 100 ಕೆಜಿ ತೂಕ ಹೊಂದಿರುತ್ತದೆ. ಅಪರೂಪಕ್ಕೊಮ್ಮೆ ಇಂತಹ ಬೃಹತ್ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತದೆ. ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತದೆ.ಮೀನುಗಾರರು ಪ್ರಯಾಸಪಟ್ಟು ಈ ಮೀನನ್ನು ದಡಕ್ಕೆ ತಂದರು ಕ್ರೆನ್ ಸಹಾಯದಿಂದ ಮೇಲಕ್ಕೆತರಲಾಯಿತು. ಬೃಹತ್ ಗಾತ್ರದ ಮೀನನ್ನು ನೋಡಲು ಅಕ್ಕ ಪಕ್ಕದ ನೂರಾರು ಜನರು ಮುಗಿ ಬಿದ್ದರು.
Leave a Comment